ಪ್ರಗತಿ ಕಾಯ್ದುಕೊಳ್ಳಲು ವೋಕ್ಸ್ ವ್ಯಾಗನ್ ಯೋಜನೆ

ಮುಂದಿನ 5 ವರ್ಷಗಳ ಕಾಲ ಶೇ. 15ರಷ್ಟು ಪ್ರಗತಿಯನ್ನು ಕಾಯ್ದುಕೊಳ್ಳುವುದೇ ಕಂಪನಿಯ ಕಾರ್ಯತಂತ್ರವಾಗಿದೆ ಎಂದು ವೋಕ್ಸ್ ವ್ಯಾಗನ್ ಗ್ರೂಪ್ ನ ಭಾರತದ ಮುಖ್ಯಸ್ಥರು ಹೇಳಿದ್ದಾರೆ. ಮೂರು ವರ್ಷಗಳ ಹಿಂದೆ ಕಂಪನಿಯು ಭಾರತ ಪ್ರವೇಶಿಸಿದ ನಂತರ ವೆಂಟೊ ಮತ್ತು ಪೊಲೊ ಕಾರ್ ಗಳು ಇಲ್ಲಿ ಅತ್ಯುತ್ತಮ ಬೇಡಿಕೆ ಪಡೆಯುತ್ತಿವೆ ಎಂದಿದ್ದಾರೆ.
ಕಂಪನಿಯು ಈಗ ಇಲ್ಲಿ ಸುಮಾರು 7 ಮಾಡೆಲ್ ಗಳನ್ನು ಹೊರತಂದಿದ್ದು, ಮುಂದಿನ 6-7 ವರ್ಷಗಳಲ್ಲಿ ದೇಶದ ಪ್ರಯಾಣಿಕ ಕಾರ್ ಮಾರುಕಟ್ಟೆಯಲ್ಲಿ ಶೇ. 20ರಷ್ಟು ಪಾಲು ಹೊಂದುವ ಗುರಿ ಹೊಂದಿದೆ ಎಂದು ಅವರು ಹೇಳಿದ್ದಾರೆ.


Click it and Unblock the Notifications








