ಫೋರ್ಡ್ ಫ್ಯಾಮಿಲಿಗೆ 8 ಹೊಸ ಕಾರ್ ಬರಲುಂಟು

ಫೋರ್ಡ್ ಮಾರಾಟ ಕೂಡ ಭೂಮ್ ನಲ್ಲಿದೆ. ಕಳೆದ ಜನವರಿಯಲ್ಲಿ ಫೋರ್ಡ್ ಇಂಡಿಯಾ ಮಾರಾಟ 10,026 ಯೂನಿಟ್ ಗೆ ತಲುಪಿದ್ದು, ಕಳೆದ ವರ್ಷದ ಇದೇ ತಿಂಗಳ 2,453 ಯೂನಿಟ್ ಗೆ ಹೋಲಿಸಿದರೆ ಮಾರಾಟ ಭರ್ಜರಿಯಾಗಿದೆ. ದೇಶದ ಮಾರುಕಟ್ಟೆಯ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಸ್ಪೂರ್ತಿ ಪಡೆದಿದ್ದು, 2015ಕ್ಕೆ 8 ಹೊಸ ಕಾರ್ ಗಳನ್ನು ಪರಿಚಯಿಸುವುದಾಗಿ ಫೋರ್ಡ್ ಫಿಗೊ ಇಂಡಿಯಾದ ಉಪಾಧ್ಯಕ್ಷರು ಹೇಳಿದ್ದಾರೆ.
ಕಳೆದ ವರ್ಷ ಫೋರ್ಡ್ ಇಂಡಿಯಾ ಅತ್ಯಧಿಕ ಅಂದರೆ ಸುಮಾರು 83,887 ವಾಹನ ಮಾರಾಟ ಮಾಡಿದೆ. ಇದು ಕಳೆದ 15 ವರ್ಷಗಳಲ್ಲಿಯೇ ಅತ್ಯಧಿಕ ಮಾರಾಟವಾಗಿದೆ. ಇದರಲ್ಲಿ ಶೇ. 28ರಷ್ಟು ಮಾರಾಟ ಗುಜರಾತ್ ನಲ್ಲಾಗಿದೆ. ಕಂಪನಿಯು ಗ್ರಾಹಕರ ಬೇಡಿಕೆ ಹೆಚ್ಚಿಸಿಕೊಳ್ಳಲು ಡೀಲರ್ ನೆಟ್ ವರ್ಕ್ ವಿಸ್ತರಿಸಲು ಹೆಚ್ಚಿನ ಒತ್ತು ನೀಡುತ್ತಿದೆ.


Click it and Unblock the Notifications