ಬೆಂಗ್ಳೂರಿಗರಿಗೆ ಸಿಹಿ ಸುದ್ದಿ; ಫೋರ್ಡ್‌ನಿಂದ 'ಕ್ವಿಕ್ ಲೇನ್' ಸರ್ವಿಸ್ ಸೆಂಟರ್

Written By:

ಇತ್ತೀಚೆಗಿನ ದಿನಗಳಲ್ಲಿ ಕಾರು ಖರೀದಿ ಗ್ರಾಹಕರು, ಯಾವ ಕಂಪನಿಯಿಂದ ಉತ್ತಮ ಸೇವೆ ಲಭಿಸಲಿದೆ ಎಂಬುದಕ್ಕೂ ಅಷ್ಟೇ ಮಹತ್ವ ನೀಡುತ್ತಾರೆ. ಇದರಂತೆ

To Follow DriveSpark On Facebook, Click The Like Button
ಗ್ರಾಹಕರಿಗೆ ಸಿಹಿ ಸುದ್ದಿ ಬಿತ್ತರಿಸಿರುವ ಅಮೆರಿಕದ ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ ಫೋರ್ಡ್ ಇಂಡಿಯಾ, ಬೆಂಗಳೂರಿನಲ್ಲಿ 'ಕ್ವಿಕ್ ಲೇನ್' ಸರ್ವೀಸ್ ಸೆಂಟರ್‌ಗೆ ಚಾಲನೆ ನೀಡಿದೆ.

ಪ್ರಮುಖವಾಗಿಯೂ ಬಿಡುವಿಲ್ಲದ ಗ್ರಾಹಕರಿಗಾಗಿ ಫೋರ್ಡ್ ಇಂಡಿಯಾ ಕ್ಷಿಪ್ರ ಹಾಗೂ ಸಮರ್ಥ ಸೇವೆ ಒದಗಿಸಲು ಮುಂದಾಗಿದೆ. ಬೆಂಗಳೂರಿನ ಯಶವಂತಪುರದಲ್ಲಿ 'ಕ್ವಿಕ್ ಲೇನ್' ಸರ್ವೀಸ್ ಸೆಂಟರ್ ಆರಂಭಿಸಲಾಗಿದ್ದು, ಫೋರ್ಡ್ ಗ್ರಾಹಕರು ಸದುಪಯೋಗ ಪಡೆಯಬಹುದಾಗಿದೆ.

'ಕ್ವಿಕ್ ಲೇನ್' ಸರ್ವೀಸ್ ಸೆಂಟರ್ ಮೂಲಕ ಯಾವುದೇ ಮುಗಂಡ ಬುಕ್ಕಿಂಗ್ ಇಲ್ಲದೆಯೇ ದೈನಂದಿನ ವಾಹನ ನಿರ್ವಹಣೆ ಅಥವಾ ಲೈಟ್ ರಿಪೇರ್‌ಗಳನ್ನು ಮಾಡಿಸಿಕೊಳ್ಳಬಹುದಾಗಿದೆ. ಅಲ್ಲದೆ ಒಯಿಲ್ ಹಾಗೂ ಫಿಲ್ಟರ್ ಬದಲಾವಣೆ, ಬ್ರೇಕ್ ಸಿಸ್ಟಂ, ಟಯರ್, ಸಸ್ಪೆಷನ್ ಸಿಸ್ಟಂ, ಎಕ್ಸ್‌ಹಾಸ್ಟ್ ಸಿಸ್ಟಂ ಹಾಗೂ ಟ್ಯೂನ್ ಅಪ್ ಅಲೈನ್‌ಮೆಂಟ್‌ಗಳಂತಹ ಮೈನರ್ ಸರ್ವೀಸ್‌ಗಳು ಕೂಡಾ ಲಭ್ಯವಿರುತ್ತದೆ.

ಕ್ವಿಕ್ ಲೇನ್ ಮುಖಾಂತರ ದಿನವೊಂದರಲ್ಲಿ 35 ಕಾರುಗಳ ನಿರ್ವಹಣೆ ಮಾಡಲು ಫೋರ್ಡ್ ಗುರಿಯಿರಿಸಿದ್ದು, ಈ ಮೂಲಕ ಗ್ರಾಹಕರ ಸಮಸ್ಯೆಗಳಿಗೆ ಬೇಗನೇ ಪರಿಹಾರ ದೊರಕಲಿದೆ. ಸದ್ಯ 127 ನಗರಗಳಲ್ಲಾಗಿ 241 ಸೇಲ್ಸ್ ಆಂಡ್ ಸರ್ವೀಸ್ ಸೆಂಟರ್ ಹೊಂದಿರುವ ಫೋರ್ಡ್ ಇಂಡಿಯಾ 2015ರ ವೇಳೆಗೆ 500ಕ್ಕೆ ತಲುಪುವ ಯೋಜನೆ ಹೊಂದಿದೆ.

English summary
Ford India is starts 'Quick Lane' service centre in Bangalore offers quick service to its busy customers.
Story first published: Monday, October 29, 2012, 15:39 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark