ಮಿತಿಮೀರಿದ ಬೇಡಿಕೆ; ಇಕೊಸ್ಪೋರ್ಟ್ ಬುಕ್ಕಿಂಗ್ ಸ್ಥಗಿತ
ಗ್ರಾಹಕರಿಂದ ಮಿತಿಮೀರಿದ ಬೇಡಿಕೆ ಕಂಡುಬಂದಿರುವ ದೇಶದ ಜನಪ್ರಿಯ ಕಾಂಪಾಕ್ಟ್ ಸೆಡಾನ್ ಕಾರು ಬುಕ್ಕಿಂಗ್ ಸ್ಥಗಿತಗೊಳಿಸಲಾಗಿದೆ. ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಉತ್ಪಾದನೆ ಕಂಡುಕೊಳ್ಳುವಲ್ಲಿ ವಿಫಲವಾಗಿರುವುದೇ ಬುಕ್ಕಿಂಗ್ ಸ್ಥಗಿತಗೊಳಿಸಿರುವ ಹಿಂದಿರುವ ಪ್ರಮುಖ ಕಾರಣವಾಗಿದೆ.
2013 ಜೂನ್ ತಿಂಗಳಲ್ಲಿ ದೇಶದ ರಸ್ತೆಗೆ ಪ್ರವೇಶಿಸಿದ್ದ ಇಕೊಸ್ಪೋರ್ಟ್ ಕೆಲವೇ ತಿಂಗಳುಗಳಲ್ಲಿ ನೆಚ್ಚಿನ ಕಾರೆನಿಸಿಕೊಂಡಿತ್ತು. ಆದರೆ ಎಲ್ಲ 10 ವೆರಿಯಂಟ್‌ಗಳ ಕಾಯುವಿಕೆ ಅವಧಿ ಮೂರರಿಂದ ಐದು ತಿಂಗಳುಗಳ ವರೆಗೆ ವರ್ಧಿಸಿತ್ತು.

ಈ ಪೈಕಿ ಒಂದು ಲೀಟರ್ ಇಕೆಬೂಸ್ಟ್ ಎಂಜಿನ್ ಪಡೆದ ಪೆಟ್ರೋಲ್ ವೆರಿಯಂಟ್‌ಗೆ ಅತ್ಯಂತ ಹೆಚ್ಚು ಬೇಡಿಕೆ ಕಂಡುಬಂದಿದ್ದರಿಂದ ಈ ಹಿಂದೆಯೇ ಬುಕ್ಕಿಂಗ್ ತಾತ್ಕಾಲಿಕವಾಗಿ ನಿಲುಗಡೆಗೊಳಿಸಲಾಗಿತ್ತು.
ಈ ಎಲ್ಲ ಬೆಳವಣಿಗೆಗಳು ಗ್ರಾಹಕರಲ್ಲಿ ನಿರಾಸೆಗೆ ಕಾರಣವಾಗಿದೆ. ಅಂದ ಹಾಗೆ ಫೋರ್ಡ್ ಗುಜುರಾತ್ ಘಟಕ 2014ರ ಅಂತ್ಯದ ವೇಳೆ ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ. ಗುಜರಾತ್‌ನ ಸನಂದ್ ಘಟಕಕ್ಕೆ ಒಂದು ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲಾಗಿದೆ.


Click it and Unblock the Notifications








