ಮಹೀಂದ್ರ ಟಿಯುವಿ300 Vs ಫೋರ್ಡ್ ಇಕೊಸ್ಪೋರ್ಟ್: ನಿಮ್ಮ ಆಯ್ಕೆ ಯಾವುದು?

By Nagaraja

ನೂತನ ಮಹೀಂದ್ರ ಟಿಯುವಿ300 ಮಾರುಕಟ್ಟೆ ಎಂಟ್ರಿ ಕೊಡುವುದರೊಂದಿಗೆ ಪೈಪೋಟಿ ವೃದ್ಧಿಸಿಕೊಂಡಿದೆ. ಇದು ಮಾರುಕಟ್ಟೆಯಲ್ಲಿ ಈಗಾಗಲೇ ನೆಲೆಯೂರಿರುವ ಫೋರ್ಡ್ ಇಕೊಸ್ಪೋರ್ಟ್ ಹಾಗೂ ರೆನೊ ಡಸ್ಟರ್ ಮಾದರಿಗಳಿಗೆ ಕಠಿಣ ಸವಾಲನ್ನು ಒಡ್ಡಲಿದೆ.

Also Read : ನಂ.1 ಸ್ಥಾನಕ್ಕೆ ರೇಸ್; ಆಲ್ಟೊ vs ಕ್ವಿಡ್ ವಿಜೇತರು ಯಾರು?

ಎಲ್ಲ ಹೊಸ ಫ್ಲ್ಯಾಟ್ ಫರ್ಮ್ ನಲ್ಲಿ ತಲೆಯೆತ್ತಿರುವ ಟಿಯುವಿ300 ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಈ ಮೂಲಕ ಇದೇ ಬೆಲೆ ಪರಿಧಿಯಲ್ಲಿ ಮಾರಾಟದಲ್ಲಿರುವ ಮಾರುತಿ ಎರ್ಟಿಗಾ ಹಾಗೂ ಸ್ವಿಫ್ಟ್ ಡಿಜೈರ್ ಓಟಕ್ಕೂ ಕಡಿವಾಣ ಹಾಕಬಹುದಾಗಿದೆ ಎಂಬುದು ಮಹೀಂದ್ರ ಲೆಕ್ಕಾಚಾರವಾಗಿದೆ. ಒಟ್ಟಿನಲ್ಲಿ ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ಮಗದೊಂದು ಆಕರ್ಷಕ ಕಾರಿನ ಪ್ರವೇಶವಾಗಿದ್ದು, ತನ್ನ ಪ್ರತಿಸ್ಪರ್ಧಿಗಳನ್ನು ಹೇಗೆ ಮೆಟ್ಟಿ ನಿಲ್ಲಲಿದೆ ಎಂಬುದನ್ನು ನೋಡೋಣವೇ..

ಬೆಲೆ (ಎಕ್ಸ್ ಶೋ ರೂಂ ಬೆಂಗಳೂರು)

ಬೆಲೆ (ಎಕ್ಸ್ ಶೋ ರೂಂ ಬೆಂಗಳೂರು)

ಭಾರತೀಯ ಕಾರು ಮಾರುಕಟ್ಟೆಯಲ್ಲಿ ಬೆಲೆ ಮುಖ್ಯ ಪಾತ್ರ ವಹಿಸುತ್ತದೆ. ಮಹೀಂದ್ರ ಟಿಯುವಿ300 ಬೆಂಗಳೂರು ಆರಂಭಿಕ ಬೆಲೆ 7.12 ಲಕ್ಷ ರು.ಗಳಿಂದ ಪ್ರಾರಂಭವಾಗಿ ಟಾಪ್ ಎಂಡ್ ವೆರಿಯಂಟ್ 9.37 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ. ಇನ್ನೊಂದೆಡೆ ಫೋರ್ಡ್ ಇಕೊಸ್ಪೋರ್ಟ್ ಪ್ರಾರಂಭಿಕ ಬೆಲೆ 6.88 ಲಕ್ಷ ರು.ಗಳಿಂದ ಗರಿಷ್ಠ 10.40 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುತ್ತದೆ.

ವಿನ್ಯಾಸ - ಮಹೀಂದ್ರ ಟಿಯುವಿ300

ವಿನ್ಯಾಸ - ಮಹೀಂದ್ರ ಟಿಯುವಿ300

ಯುದ್ಧ ಟ್ಯಾಂಕರ್ ನಿಂದ ಪ್ರೇರಣೆ ಪಡೆದ ಟ್ರು ಬ್ಲೂ ಎಸ್‌ಯುವಿ ಇದಾಗಿದೆ. ಅಲ್ಲದೆ ಎಸ್‌ಯುವಿ ವಿಭಾಗದಲ್ಲಿ ನಂ.1 ಸ್ಥಾನವನ್ನು ಕಾಪಾಡಿಕೊಂಡಿರುವ ಮಹೀಂದ್ರ ನೂತನ ಟಿಯುವಿ300 ಮಾದರಿಯಲ್ಲೂ ದೃಢಕಾಯದ ಗಟ್ಟಿ ಮುಟ್ಟಾದ ವಿನ್ಯಾಸವನ್ನು ಕಾಪಾಡಿಕೊಂಡಿದೆ.

ವಿನ್ಯಾಸ - ಫೋರ್ಡ್ ಇಕೊಸ್ಪೋರ್ಟ್

ವಿನ್ಯಾಸ - ಫೋರ್ಡ್ ಇಕೊಸ್ಪೋರ್ಟ್

ಇನ್ನೊಂದೆಡೆ ಫೋರ್ಡ್ ಫಿಯೆಸ್ಟಾ ತಳಹದಿಯಲ್ಲಿ ಇಕೊಸ್ಪೋರ್ಟ್ ನಿರ್ಮಾಣವಾಗಿದೆ. ಮೊದಲ ನೋಟದಲ್ಲೇ ಇದರ ಫ್ರಂಟ್ ಗ್ರಿಲ್ ಪ್ರಮುಖ ಆಕರ್ಷಣೆಯಾಗಿದ್ದು, ಆಧುನಿಕ ವಿನ್ಯಾಸಕ್ಕೆ ಒತ್ತು ಕೊಡಲಾಗಿದೆ.

ವೈಶಿಷ್ಟ್ಯಗಳು - ಮಹೀಂದ್ರ ಟಿಯುವಿ300

ವೈಶಿಷ್ಟ್ಯಗಳು - ಮಹೀಂದ್ರ ಟಿಯುವಿ300

ಸ್ಟಾಟಿಕ್ ಬೆಂಡಿಂಗ್ ಲ್ಯಾಂಪ್, 2 ಡಿನ್ ಮ್ಯೂಸಿಕ್ ಸಿಸ್ಟಂ ಜೊತೆ ಆಕ್ಸ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿ, ಮಹೀಂದ್ರ ಬ್ಲೂ ಸೆನ್ಸ್ ಆಪ್, ರಿವರ್ಸ್ ಅಸಿಸ್ಟ್, ವಾಯ್ಸ್ ಮೇಸೆಜಿಂಗ್ ಸಿಸ್ಟಂ, ಮೈಕ್ರೋ ಹೈಬ್ರಿಡ್ ಟೆಕ್ನಾಲಜಿ, ಇಕೊ ಡ್ರೈವಿಂಗ್ ಮೋಡ್ ಹಾಗೂ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಸೇವೆಗಳು ಲಭ್ಯವಾಗಲಿದೆ.

ವೈಶಿಷ್ಟ್ಯಗಳು - ಇಕೊಸ್ಪೋರ್ಟ್

ವೈಶಿಷ್ಟ್ಯಗಳು - ಇಕೊಸ್ಪೋರ್ಟ್

ಮತ್ತೊಂದೆಡೆ ಎಮರ್ಜನ್ಸಿ ಅಸಿಸ್ಟ್ ಸೇವೆಗಳಂತಹ ಆಧುನಿಕ ಸುರಕ್ಷಾ ಮಾನದಂಡಗಳನ್ನು ಪರಿಚಯಿಸಿರುವ ಇಕೊಸ್ಪೋರ್ಟ್ ಕಾರಿನಲ್ಲಿ, ಲೆಥರ್ ಸೀಟು ಕವರ್, ಎಂಜಿನ್ ಸ್ಟ್ಯಾರ್ಟ್/ಸ್ಟಾಪ್ ಬಟನ್, ಪಾರ್ಕಿಂಗ್ ಸೆನ್ಸಾರ್, ಕೂಲ್ಡ್ ಗ್ಲೋವ್ ಬಾಕ್ಸ್, ಐಆರ್‌ವಿಎಂ ಎಲ್‌ಸಿಡಿ ಡಿಸ್ ಪ್ಲೇ, ಕಳ್ಳತನ ವಿರೋಧಿ ವ್ಯವಸ್ಥೆಗಳು ಲಭ್ಯವಾಗಲಿದೆ.

ಎಂಜಿನ್, ಗೇರ್ ಬಾಕ್ಸ್ - ಮಹೀಂದ್ರ ಟಿಯುವಿ300

ಎಂಜಿನ್, ಗೇರ್ ಬಾಕ್ಸ್ - ಮಹೀಂದ್ರ ಟಿಯುವಿ300

1.5 ಲೀಟರ್ ತ್ರಿ ಸಿಲಿಂಡರ್ ಎಂಹಾಕ್ ಡೀಸೆಲ್ ಎಂಜಿನ್,

ಎರಡು ಹಂತಗಳ ಟರ್ಬೊಚಾರ್ಜರ್

84 ಅಶ್ವಶಕ್ತಿ, 230 ಎನ್‌ಎಂ ತಿರುಗುಬಲ

ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್ ಹಾಗೂ ಆಟೋ ಶಿಫ್ಟ್ ಗೇರ್ ಬಾಕ್ಸ್

ಎಂಜಿನ್, ಗೇರ್ ಬಾಕ್ಸ್ - ಇಕೊಸ್ಪೋರ್ಟ್

ಎಂಜಿನ್, ಗೇರ್ ಬಾಕ್ಸ್ - ಇಕೊಸ್ಪೋರ್ಟ್

ಮೂರು ಎಂಜಿನ್ ಆಯ್ಕೆಗಳು

1.5 ಲೀಟರ್ ಡೀಸೆಲ್ ಎಂಜಿನ್

90 ಅಶ್ವಶಕ್ತಿ, 204 ಎನ್‌ಎಂ ತಿರುಗುಬಲ

1.5 ಲೀಟರ್ ಪೆಟ್ರೋಲ್ ಎಂಜಿನ್

110 ಅಶ್ವಶಕ್ತಿ, 140 ಎನ್‌ಎಂ ತಿರುಗುಬಲ

1.0 ಲೀಟರ್ ಇಕೊಬೂಸ್ಟ್ ಪೆಟ್ರೋಲ್ ಎಂಜಿನ್

123 ಅಶ್ವಶಕ್ತಿ, 170 ಎನ್‌ಎಂ ತಿರುಗುಬಲ

ಗೇರ್ ಬಾಕ್ಸ್: 5 ಸ್ಪೀಂಡ್ ಮ್ಯಾನುವಲ್ ಹಾಗೂ 6 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್

ಮೈಲೇಜ್

ಮೈಲೇಜ್

ಮಹೀಂದ್ರ ಟಿಯುವಿ300: 18.49 kpl

ಇಕೊಸ್ಪೋರ್ಟ್

ಪೆಟ್ರೋಲ್: 15.6 kpl

ಇಕೊಬೂಸ್ಟ್: 18.9 kpl

ಡೀಸೆಲ್: 22.7 kpl

ಸುರಕ್ಷತೆ

ಸುರಕ್ಷತೆ

ಮಹೀಂದ್ರ ಟಿಯುವಿ300 ಬೇಸಿಕ್ ವೆರಿಯಂಟ್ ನಲ್ಲೇ ಎಬಿಎಸ್ ಹಾಗೂ ಇಬಿಡಿ ಸುರಕ್ಷಾ ವೈಶಿಷ್ಟ್ಯಗಳು ಲಭ್ಯವಾಗಲಿದೆ. ಇನ್ನೊಂದೆಡೆ ಇಕೊಸ್ಪೋರ್ಟ್ ನಲ್ಲಿ ಇದಕ್ಕಾಗಿ ಹೈಯರ್ ವೆರಿಯಂಟ್ ಗೆ ಮೊರೆ ಹೋಗಬೇಕಾಗಿದೆ. ಹಾಗೆಯೇ ಇಕೊಸ್ಪೋರ್ಟ್ ಟಾಪ್ ಎಂಡ್ ವೆರಿಯಂಟ್ ನಲ್ಲಿ ಆರು ಏರ್ ಬ್ಯಾಗ್ ಹಾಗೂ ಎಮರ್ಜನ್ಸಿ ಅಸಿಸ್ಟ್ ಸೇವೆಗಳು ಲಭ್ಯವಾಗಲಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಸಹಜವಾಗಿಯೇ ತಂತ್ರಜ್ಞಾನದ ವಿಷಯದಲ್ಲಿ ವಿಶ್ವ ದರ್ಜೆಯ ಇಕೊಬೂಸ್ಟ್ ಎಂಜಿನ್ ಹಾಗೂ ಎಮರ್ಜನ್ಸಿ ಅಸಿಸ್ಟ್ ವ್ಯವಸ್ಥೆಗಳು ಇಕೊಸ್ಪೋರ್ಟ್ ಕಾರನ್ನು ಒಂದು ಹೆಜ್ಜೆ ಮುಂದಿಡುವಂತೆ ಮಾಡುತ್ತದೆ. ಇನ್ನೊಂದೆಡೆ ಭಾರತೀಯ ರಸ್ತೆ ಪರಿಸ್ಥಿತಿಗೆ ಹೊಂದಿಕೆಯಾಗುವಂತಹ ದೇಹ ರಚನೆಯನ್ನು ಮೈಗೂಡಿಸಿ ಬಂದಿರುವ ಹಾಗೂ ದಶಕಗಳ ಕಾಲ ತನ್ನ ಸಾನಿಧ್ಯವನ್ನು ತೋರ್ಪಡಿಸಿರುವ ಮಹೀಂದ್ರ ಟಿಯುವಿ300 ಗ್ರಾಹಕರಿಗೆ ತಾಜಾತನವನ್ನು ನೀಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇವೆಲ್ಲದರ ಜೊತೆಗೆ ಏಳು ಮಂದಿ ಪ್ರಯಾಣಿಕರಿಗೆ ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದ್ದು, ದೊಡ್ಡ ಕುಟುಂಬಗಳಿಗೆ ಪರಿಪೂರ್ಣ ಆಯ್ಕೆಯಾಗಿರಲಿದೆ. ಇನ್ನೊಂದೆಡೆ ಚಿಕ್ಕ ಕುಟುಂಬಗಳಿಗೆ ಇಕೊಸ್ಪೋರ್ಟ್ ಪರಿಪೂರ್ಣ ಚಾಲನಾ ಅನುಭವ ನೀಡಲಿದೆ.

ಮತ್ತಷ್ಟು ಕಾರು ಹೋಲಿಕೆಗಳು

ಮಾರುತಿ ಎಸ್ ಕ್ರಾಸ್ Vs ಹ್ಯುಂಡೈ ಕ್ರೆಟಾ: ಜಿದ್ದಾಜಿದ್ದಿನ ಹೋರಾಟ

ಫಿಗೊ ಆಸ್ಪೈರ್ vs ಸ್ವಿಫ್ಟ್ ಡಿಜೈರ್; ಯಾವ ಕಾರು ಅತ್ಯುತ್ತಮ?

ಕ್ರೆಟಾ vs ಡಸ್ಟರ್; ಮಿನಿ ಎಸ್ ಯುವಿಗಳ ಮಲ್ಲ ಯುದ್ಧ

Most Read Articles

Kannada
English summary
Mahindra TUV300 Vs Ford EcoSport Comparo: Is The Battle Tank Worth It?
Story first published: Tuesday, September 15, 2015, 10:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X