ಹಬ್ಬದ ಸೀಸನಿನಲ್ಲಿ ಫೋರ್ಡ್ ಫಿಗೊ ಲಾಂಚ್; ವೈಶಿಷ್ಟ್ಯಗಳೇನು?
ಫೋರ್ಡ್ ಇಂಡಿಯಾದಿಂದ ಇದೀಗಷ್ಟೇ ಬಿಡುಗಡೆಗೊಂಡಿರುವ ನೂತನ ಫಿಗೊ ಕಾರು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಫೋರ್ಡ್ ಕಂಪನಿ ಅಧಿಕೃತರು ಪ್ರತಿಪಾದಿಸುತ್ತಿರುವಂತೆಯೇ ಈ ಹಿಂದಿನ ಮಾದರಿಗಿಂತಲೂ ಹಲವಾರು ಹೊಸ ವೈಶಿಷ್ಟ್ಯಗಳನ್ನು ಈ ನೂತನ ಕಾರು ಹೊಂದಿದೆಯಂತೆ..!
ಈ ಹಿಂದಿನ ಮಾದರಿಯನ್ನು ಫೋರ್ಡ್ ಕಂಪನಿ 2010ರಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಬಂದಿರುವ ನೂತನ ಫಿಗೊ ಮಾಡೆಲ್ ಪ್ರಮುಖವಾಗಿಯೂ ಕಾಸ್ಮೆಟಿಕ್ಸ್ ಬದಲಾವಣೆಗಳ ಮೂಲಕ ರಸ್ತೆಗಿಳಿದಿವೆ. ದಸಾರಾ ಹಾಗೂ ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿನ ಮಾರಾಟ ಗಿಟ್ಟಿಸಿಕೊಳ್ಳುವ ಗುರಿಯನ್ನು ಕಂಪೆನಿ ಹೊಂದಿದೆ.
ಕೆಲವು ಪ್ರಮುಖ ಫೀಚರ್ಸ್‌ಗಳು:
* ವರ್ಧಿತ ಕೈನಾಟಿಕ್ ಡಿಸೈನ್
* ಉತ್ತಮ ನಿರ್ವಹಣೆ: ಸುಧಾರಿತ ಎಂಜಿನ್ ಕಾಲಿಬ್ರೇಷನ್
* ಸ್ಟೀರಿಂಗ್ ಕಾಲಮ್ನ್ ಮೌಂಟಡ್ ರೆಡಿಯೋ ಕಂಟ್ರೋಲ್
* ನ್ಯೂ ಹೆಡ್‌ಲ್ಯಾಂಪ್
* ಹಿಂಭಾಗದಲ್ಲಿ ನೂತನ ಲ್ಯಾಂಪ್
* ನ್ಯೂ ಕ್ರಾಮ್ ಗ್ರಿಲ್ ಆಂಡ್ ಫೆಂಡರ್
* ಒಳಗಡೆ ಕುಳಿತುಕೊಳ್ಳಲು ಸಾಕಷ್ಟು ಸ್ಥಳಾವಕಾಶ
* ಬ್ಲೂಟೂತ್ ಕನೆಕ್ಟಿವಿಟಿ
* ನ್ಯೂ ಸ್ಟೀರಿಂಗ್ ಕಾಲಮ್ನ್ ಮೌಂಟಡ್ ಆಡಿಯೋ ಕಂಟ್ರೋಲ್
* ಬೂಟ್ ಸ್ಪೇಸ್
* ನ್ಯೂ ಅಲೋಯ್ ವೀಲ್
* ಇಂಜಿನ್
* ಬೆಸ್ಟ್ ಏರ್ ಕಂಡಿಷನರ್
* ಸುರಕ್ಷಿತಕ್ಕೆ ಹೆಚ್ಚಿನ ಒತ್ತು
ದರ ಮಾಹಿತಿ
ಪೆಟ್ರೋಲ್ ಎಂಜಿನ್ ಫೋರ್ಡ್ ಫಿಗೊ
ಎಲ್‌ಎಕ್ಸ್‌ಐ- 3.84 ಲಕ್ಷ ರು.
ಇಎಕ್ಸ್‌ಐ- 4.22 ಲಕ್ಷ ರು.
ಜಿಎಕ್ಸ್‌ಐ- 4.52
ಟೈಟಾನಿಯಂ- 5.01 ಲಕ್ಷ
ಡೀಸೆಲ್ ಎಂಜಿನ್ ಫೋರ್ಡ್ ಫಿಗೊ
ಡ್ಯುರಟಿಕ್ ಎಲ್‌ಎಕ್ಸ್‌ಐ- 4.81 ಲಕ್ಷ ರು.
ಡ್ಯುರಟಿಕ್ ಇಎಕ್ಸ್‌ಐ - 5.20 ಲಕ್ಷ ರು.
ಡ್ಯುರಟಿಕ್ ಜೆಡ್‌ಎಕ್ಸ್‌ಐ- 5.50 ಲಕ್ಷ ರು
ಡ್ಯುರೆಟಿಕ್ ಟೈಟಾನಿಯಂ- 5.99 ಲಕ್ಷ ರು.

ನೂತನ ಹೆಡ್‌ಲ್ಯಾಂಪ್
ವಿಶಾಲ ಕಣ್ಣಿನ ಆಕಾರದ ಲ್ಯಾಂಪುಗಳು ರಸ್ತೆಯಲ್ಲಿ ಫಿಗೊ ನೋಟವನ್ನು ಅದ್ಭುತಗೊಳಿಸಿದೆ. ಇದು ಕಾರು ಹಾಗೂ ಚಾಲಕರಿಗೆ ಸಮಾನವಾದ ಗುರುತು ನೀಡುತ್ತದೆ.

ನ್ಯೂ ಕ್ರಾಮ್ ಗ್ರಿಲ್ ಆಂಡ್ ಫೆಂಡರ್
ಫೋರ್ಡ್ ಫಿಗೊ ಮೊದಲ ನೋಟಕ್ಕೆ ಹೆಚ್ಚು ಆಕರ್ಷಕವಾಗಿ ಗೋಚರಿಸುತ್ತಿದೆ. ಇದು ಆಕರ್ಷಕ ಆಕಾರ ಮತ್ತು ವಿಶಿಷ್ಟ ವಿನ್ಯಾಸ ಹೊಂದಿದೆ. ಅಲ್ಲದೆ ಕಾರಿನ ಗೋಚರಕ್ಕೆ ಸೊಬಗು ಮತ್ತು ಪರಿಷ್ಕರಣೆ ಒದಗಿಸುತ್ತಿದೆ.

ಹಿಂಭಾಗದಲ್ಲಿ ನೂತನ ಲ್ಯಾಂಪ್
ನಿಮ್ಮ ಬ್ಲೂಟೂತ್ ಫೋನ್‌ಗಳನ್ನು ಮ್ಯೂಸಿಕ್ ಸಿಸ್ಟಮ್‌ಗೆ ವೈರ್‌ಲೆಸ್ ಹಾಗೂ ಕೈಗಳನ್ನು ಮುಕ್ತ ಸಂಪರ್ಕ ಹೊಂದಿದೆ. ಅಲ್ಲದೆ ನಿಮ್ಮ ಫೋನ್ ಬುಕ್, ಸ್ವಾಪ್ ಕರೆಗಳು, ಮ್ಯೂಟ್ ಕರೆಗಳು, ಎಸ್‌ಎಂಎಸ್ ಅಧಿಸೂಚನೆ ಸ್ವೀಕರಿಸಲು, ಗೌಪ್ಯತೆ ಕ್ರಮಕ್ಕೆ ಹೋಗಲು ಹಾಗೂ ಇಂಟರ್‌ನೆಟ್ ಮ್ಯೂಸಿಕ್‌ಗೆ ಸ್ಟ್ರೀಮ್ ಮಾಡಲು ಅವಕಾಶವಿದೆ.

ಒಳಗಡೆ ಕುಳಿತುಕೊಳ್ಳಲು ಸಾಕಷ್ಟು ಸ್ಥಳವಾಕಾಶ
ವಿಲಕ್ಷಣ ಮತ್ತು ಮನೋಹರವಾಗಿ ನಿರ್ಮಿಸಲಾಗಿರುವ ಕಾರಿನ ಇಂಟಿರಿಯರ್‌ಗೆ ನೀವು ಪ್ರವೇಶಿಸಿದ ತಕ್ಷಣ ನಿಮ್ಮ ದಿನದ ಬೇಸರ ಮಾಯವಾಗಲಿದೆ.

ಬ್ಲೂಟೂತ್ ಕನೆಕ್ಟಿವಿಟಿ
ನಿಮ್ಮ ಬ್ಲೂಟೂತ್ ಮೊಬೈಲ್‌ಗಳನ್ನು ಆಡಿಯೋ ಯುನಿಟ್‌ಗೆ ಕನೆಕ್ಟ್ ಮಾಡುವ ಮೂಲಕ ಸುಲಭವಾಗಿ ಮಾತನಾಡಬಹುದು. ನಾಲ್ಕು ಫೋನ್‌ಗಳಿಗೆ ಕನೆಕ್ಟಿವಿಟಿ ಜೋಡಿಸುವ ಅವಕಾಶ, ಸಂಪೂರ್ಣ ಫೋನ್ ಫೋಕ್ ಎಸೆಸ್, ಡೈಲ್ ಮಾಡಿದ ನಂಬರ್, ಸ್ವೀಕರಿಸಿದ ಹಾಗೂ ತಪ್ಪಿದ ಕರೆಗಳು ಆಡಿಯೋದಲ್ಲಿ ಡಿಸ್‌ಪ್ಲೇ ಆಗಲಿದೆ.

ಬೂಟ್ ಸ್ಪೇಸ್
ದೀರ್ಘ ಮತ್ತು ವಿಸ್ತಾರವಾದ ರಸ್ತೆ ಟೂರ್ ಜತೆ ದೊಡ್ಡ ಲಗೇಜ್ ಕೊಂಡೊಯ್ಯಲು ನೂತನ ಫೋರ್ಡ್ ಫಿಗೊದಲ್ಲಿ ಅವಕಾಶವಿರುತ್ತದೆ. ಪ್ರಾಯೋಗಿಕವಾಗಿಯೂ ಇದು ಉತ್ತಮ.

ನ್ಯೂ ಅಲೋಯ್ ವೀಲ್
ನೂತನ ಅಲೋಯ್ ವೀಲ್ಸ್ ಹೆಚ್ಚು ಅಂದ ಹಾಗೂ ಸ್ಟೈಲಿಶ್ ಆಗಿದೆ. ಇದರಲ್ಲಿ ಅತ್ಯುತ್ತಮ ಗುಣಮಟ್ಟದ ಮಾನದಂಡಗಳನ್ನು ಅನುಸರಿಸಲಾಗಿದೆ.

ಇಂಜಿನ್
ನಗರ ಪ್ರದೇಶ, ಹೈ ವೇ ಹಾಗೂ ಉತ್ತಮ ರೋಡ್ ಪರಿಸ್ಥಿತಿಗಳಲ್ಲಿ ಫಿಗೊ ಉತ್ತಮ ನಿರ್ವಹಣೆ ನೀಡಲಿದೆ.
1.2 ಡ್ಯುರಾಟೆಕ್ ಪೆಟ್ರೋಲ್ ಇಂಜಿನ್ 71 ಪಿಎಸ್ @ 6250 ಆರ್‌ಪಿಎಂ ಪವರ್ 102 ಎನ್‌ಎಂ @ 4000 ಆರ್‌ಪಿಎಂ ಟರ್ಕ್ಯೂ 1.4 ಡ್ಯೂರಟಾರ್ಕ್ ಡೀಸೆಲ್ ಇಂಜಿನ್ -69 ಪಿಎಸ್ @ 4000 ಆರ್‌ಪಿಎಂ ಪವರ್ -160 ಎನ್‌ಎಂ @ 2000 ಆರ್‌ಪಿಎಂ ಟರ್ಕ್ಯೂ

ಬೆಸ್ಟ್ ಏರ್ ಕಂಡಿಷನರ್
ಹೊಸ ಫೋರ್ಡ್ ಫಿಗೊ ತನ್ನ ತಂಪಾದ ಹವಾ ನಿಮಗೆ ತಾಜಾತನ ನೀಡುತ್ತದೆ.

ರಕ್ಷಣೆಗೆ ಹೆಚ್ಚಿನ ಒತ್ತು
ಮೊದಲ ಪ್ರಯಾಣಿಕ ಹಾಗೂ ಚಾಲಕರಿಗೆ ಡ್ಯುಯಲ್ ಏರ್‌ಬ್ಯಾಗ್ ಒದಗಿಸಲಾಗಿದೆ. ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ವಿತರಣೆ (ಇಬಿಡಿ) ಜತೆ ಎಂಟಿ ಬ್ರಾಕಿಂಗ್ ಸಿಸ್ಟಂ (ಎಬಿಎಸ್) ಕಾರಿನ ರಕ್ಷಣೆಯನ್ನು ಖಾತ್ರಿಪಡಿಸುತ್ತಿದೆ.


Click it and Unblock the Notifications








