ಮಹಿಳಾ ದಿನಾಚರಣೆಗೆ ಫೋರ್ಡ್ ವಿಶಿಷ್ಟ ಉಡುಗೊರೆ

Posted By:

2013 ಮಾರ್ಚ್ 8ರಂದು (ಶುಕ್ರವಾರ) ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಜಗತ್ತಿನೆಲ್ಲೆಡೆ ಭಾರಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇದರಲ್ಲಿ ಆಟೋ ರಂಗದ ಪ್ರತಿಷ್ಠಿತ ಕಂಪನಿಯೊಂದು ಭಾಗಿಯಾಗಿರುವುದು ನಮ್ಮೆಲ್ಲರ ಸಂತಸಕ್ಕೆ ಕಾರಣವಾಗಿದೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಗಮನಕ್ಕೂ ಮೊದಲೇ ಕಾರ್ಯಪ್ರವೃತ್ತವಾಗಿರುವ ಫೋರ್ಡ್ ಇಂಡಿಯಾವು, ದೇಶದ ಮಾತೆಯರಿಗೆ ವಿನೂತನ ಉಡುಗೊರೆ ನೀಡುವಲ್ಲಿ ಯಶಸ್ವಿಯಾಗಿದೆ. ತಮಿಳುನಾಡಿನ ದೂರದ ಗ್ರಾಮೀಣ ಪ್ರದೇಶದಲ್ಲಿ ಗರ್ಭಿಣಿ ಮಹಿಳೆ ಹಾಗೂ ಶಿಶುಗಳಿಗೆ ಅಗತ್ಯದ ಚಿಕಿತ್ಸೆ ಒದಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷಾ ಪ್ರಕಾರ, ಶೇಕಡಾ 37ರಷ್ಟು ಭಾರತೀಯ ಗರ್ಭಸ್ಥ ಮಹಿಳೆಯರಿಗೆ ಸೂಕ್ತ ರೀತಿಯ ಪ್ರಸವಪೂರ್ವ ಆರೈಕೆ ಸಿಗುತ್ತಿಲ್ಲ. ಇದೇ ಕಾರಣಕ್ಕಾಗಿ ದೇಶದಲ್ಲಿ ಲಕ್ಷದಷ್ಟು ಮಹಿಳೆಯರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವಂತಾಗಿದೆ. ಹಾಗಿರುವಾಗ ಫೋರ್ಡ್ ಹಮ್ಮಿಕೊಂಡಿರುವಾಗ ಈ ಕಾರ್ಯಕ್ರಮವು ತಮಿಳುನಾಡು ಗ್ರಾಮೀಣ ಪ್ರದೇಶದ ಮೂಲೆ ಮೂಲೆಗೂ ತಲುಪಿಸುವಲ್ಲಿ ಯಶಸ್ವಿಯಾಗಿದೆ.

Ford SUMURR Program

ಕಳೆದ ವರ್ಷ ಜೂನ್ ತಿಂಗಳಲ್ಲಿ ಆರಂಭವಾಗಿದ್ದ ಪ್ರಸ್ತುತ Sustainable Urban Mobility with Uncompromised Rural Reach (SUMURR) ಕಾರ್ಯಕ್ರಮ ಈಗಷ್ಟೇ ಅಂತ್ಯಕಂಡಿದೆ. ಕಾರ್ಯಕ್ರಮದ ಅಂಗವಾಗಿ ತಮಿಳುನಾಡಿನ ಗ್ರಾಮೀಣ ಪ್ರದೇಶದಲ್ಲಿ ತಾತ್ಕಾಲಿಕ ಮಕ್ಕಳ ಹಾಗೂ ಸ್ತ್ರೀರೋಗ ಶಿಬಿರಗಳನ್ನು ತರೆಯಲಾಗಿತ್ತು. ಫೋರ್ಡ್ ಅಂಕಿಅಂಶ ಪ್ರಕಾರ 1600ರಷ್ಟು ಮಹಿಳೆ ಹಾಗೂ ಮಕ್ಕಳಿಗೆ ಅಗತ್ಯದ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲಾಗಿದೆ. 54 ಹಳ್ಳಿ ಪ್ರದೇಶಕ್ಕೆ ವ್ಯಾಪಿಸಿರುವ ಶಿಬಿರದಲ್ಲಿ ತಾಯಿ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗಿದೆ.

Ford SUMURR Program

ಫೋರ್ಡ್‌ನ ಈ ಮಹತ್ತರ ಯೋಜನೆಗೆ ತಮಿಳುನಾಡು ಸರಕಾರ ಆರೋಗ್ಯ ಮಂಡಳಿ, ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್ಸ್, ಜಾರ್ಜ್ ವಾಷಿಂಗ್ಟನ್ ಯುನಿವರ್ಸಿಟಿ, ಐಐಟಿ ಮದ್ರಾಸ್ ಗ್ರಾಮೀಣ ತಂತ್ರಜ್ಞಾನ ಹಾಗೂ ಬ್ಯುಸಿನೆಸ್ ಇಂಕ್ಯೂಬೇಟರ್, ಇಂಡಿಯನ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್, ರಿಯಲನ್ಸ್ ಐಐಟಿ ಸೆಂಟರ್ ಆಫ್ ಎಕ್ಸಲನ್ಸ್, ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಹಾಗೂ ಯುನಿವರ್ಸಿಟಿ ಆಫ್ ಮಿಚಿಗನ್ ಕೈಜೋಡಿಸಿಕೊಂಡಿದ್ದವು.

Ford SUMURR Program

ಈ ಬಗ್ಗೆ ಪ್ರತಿಕ್ರಿಯಿಸಿರುವ ಫೋರ್ಟ್ ನಾವೀನ್ಯತೆಯ ತಂತ್ರಜ್ಞಾನ ಹಿರಿಯ ಅಧಿಕಾರಿಯಾಗಿರುವ ಕೆ. ವೆಂಕೆಟೇಶ್ ಪ್ರಸಾದ್, ರಿಮೋಟ್ ಪ್ರದೇಶದಲ್ಲಿ ಶಿಬಿರಕ್ಕಾಗಿ ಫೋರ್ಡ್ ಎಂಡೋವರ್ ಕಾರನ್ನು ಬಳಕೆ ಮಾಡಲಾಗಿತ್ತು ಎಂದಿದ್ದಾರೆ. ಹಾಗೆಯೇ ರಿಮೋಟ್ ಪ್ರದೇಶದಲ್ಲಿ ಮೊಬೈಲ್ ಟವರ್ ಸಿಗ್ನಲ್ ಕೂಡಾ ತುಂಬಾನೇ ವಿರಳವಾಗಿದೆ ಎಂದು ವಿವರಿಸಿದ್ದಾರೆ.

English summary
This International Women's Day Ford India has provided mothers in India with a special gift. Last month marked the completion of the Ford initiative "Sustainable Urban Mobility with Uncompromised Rural Reach (SUMURR)" pilot program. A program undertaken by Ford India which provided expecting mothers and their infants in remote parts of Tamil Nadu with pre and post-natal care.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark