ನಮ್ಮ ಡಿಮಾಂಡ್ ನೋಡಿದ ರೋಲ್ಸ್ ರಾಯ್ಸ್ ಟೈರ್ ಠುಸ್ಸೆಂದಿತ್ತು!

Rolls Royce India
ಏನೋ...ಒಂದಿಷ್ಟು ಬೆರಳೆಣಿಕೆಯ ಕಾರ್ ಗಳಿಗೆ ಬೇಡಿಕೆ ಬರಬಹುದೆಂದು ದೇಶದ ಮಾರುಕಟ್ಟೆಗೆ ಕಾಲಿಟ್ಟ ರೋಲ್ಸ್ ರಾಯ್ಸ್ ಗೆ ಅಚ್ಚರಿ. ಇಲ್ಲಿನ ಲಕ್ಷುರಿ ಕಾರ್ ಬೇಡಿಕೆಗೆ ತಕ್ಕಂತೆ ಪೂರೈಸಲಾಗಲಿಲ್ಲವಂತೆ ಅದಕ್ಕೆ. ದೇಶದಲ್ಲಿ ಐಷಾರಾಮಿ ಕಾರ್ ಗಳಿಗೆ ಸಾಕಷ್ಟು ಬೇಡಿಕೆಯಿದ್ದು, ಕಳೆದ ಡಿಸೆಂಬರ್ ನಲ್ಲಿ ಗ್ರಾಹಕರ ಬೇಡಿಕೆಯ ವೇಗಕ್ಕೆ ತಕ್ಕಂತೆ ಪೂರೈಸಲಾಗಲಿಲ್ಲ ಎಂದು ಸ್ವತಃ ರೋಲ್ಸ್ ರಾಯ್ಸ್ ನ ಜಾಗತಿಕ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಹೇಳಿದ್ದಾರೆ.

ಕಳೆದ ವರ್ಷ ದೇಶದ ಗ್ರಾಹಕರಿಂದ ಸಾಕಷ್ಟು ಲಕ್ಷುರಿ ಕಾರ್ ಗಳಿಗೆ ಬೇಡಿಕೆ ಬಂದಿದ್ದರೂ, ಸಮರ್ಥವಾಗಿ ಪೂರೈಕೆ ಮಾಡಲಾಗಲಿಲ್ಲ ಎಂದು ಕಂಪನಿ ತಿಳಿಸಿದೆ. 2010ರಲ್ಲಿ ಜಾಗತಿಕ ಮತ್ತು ಭಾರತದ ಮಾರುಕಟ್ಟೆಯು ಲಕ್ಷುರಿ ಕಾರ್ ಮಾರಾಟಕ್ಕೆದಾಖಲೆಯ ವರ್ಷವಾಗಿದೆ. ಏಷ್ಯಾ ಪೆಸಿಫಿಕ್ ಎಂಬುದು ಲಕ್ಷುರಿ ಕಾರ್ ಗ್ರಾಹಕರ ಹಬ್ ಆಗಿ ಹೊರಹೊಮ್ಮಿತ್ತು.

ದೆಹಲಿ ಮತ್ತು ಮುಂಬೈನಲ್ಲಿ ಎರಡು ಡೀಲರ್ ಷಿಪ್ ಕೇಂದ್ರಗಳಿಗೆ ಚಾಲನೆ ನೀಡುತ್ತ ಅವರು ಪೂರೈಕೆಯಲ್ಲಿ ಉಂಟಾದ ಹಿನ್ನಡೆಯನ್ನು ತಿಳಿಸಿದ್ದಾರೆ. ಬೆಂಗಳೂರು ಮತ್ತು ಹೈದರಾಬಾದ್ ಗೂ ಡೀಲರ್ ಷಿಪ್ ಕೇಂದ್ರಗಳನ್ನು ವಿಸ್ತರಿಸುವ ಯೋಜನೆಯನ್ನು ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕರು ವ್ಯಕ್ತಪಡಿಸಿದ್ದಾರೆ.

2009ರ ವರ್ಷಕ್ಕೆ ಹೋಲಿಸಿದರೆ 2010ರಲ್ಲಿ ರೋಲ್ಸ್ ರಾಯ್ಸ್ ಮಾರಾಟ ಸುಮಾರು 7 ಪಟ್ಟು ಏರಿಕೆ ಕಂಡಿದೆ. ಕಳೆದ ವರ್ಷ ಒಟ್ಟಾರೆ ಜಾಗತಿಕವಾಗಿ ಸುಮಾರು 2,711 ರೋಲ್ಸ್ ರಾಯ್ಸ್ ಕಾರ್ ಮಾರಾಟಗೊಂಡಿದೆ. ಅಂದರೆ ದೇಶದಲ್ಲಿ ಸುಮಾರು ಶೇ. 171ರಷ್ಟು ಮಾರಾಟ ಏರಿಕೆ ಕಂಡಿದೆ. ಇಲ್ಲಿನ ಬೇಡಿಕೆಯ ವೇಗಕ್ಕೆ ವೇಗದ ಕಾರ್ ರೋಲ್ಸ್ ರಾಯ್ಸ್ ನ ಟೈರ್ ಠುಸ್ಸಾಗಿದೆ ಅಂತ ನಾವು ಹೆಮ್ಮೆ ಪಡಬಹುದು.

More from DriveSpark

Article Published On: Friday, February 18, 2011, 16:30 [IST]
English summary
The world luxury car maker Rolls Royce has moaning remarks about its operations in India, as evidenced by its Global Chief Executive. He lamented that the company could not meet the demand in this potential market by December when it received more orders than what could be supplied.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+