ಭಾರತಕ್ಕೆ ಬರುತ್ತಿವೆ ಚೀನಾದ ವಾಹನ ಕಂಪನಿಗಳು

Chinese automobile
ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತ ಜಗತ್ತಿನ ನಾಲ್ಕನೇ ಬೃಹತ್ ವಾಹನ ಮಾರುಕಟ್ಟೆಯಾಗುವತ್ತ ದಾಪುಗಾಲಿಡುತ್ತಿದೆ. ಇಲ್ಲಿನ ಅವಕಾಶಗಳ ಮೇಲೆ ಕಣ್ಣಿರಿಸಿದ ಚೀನಾದ ವಾಹನ ಕಂಪನಿಗಳು ಇತ್ತ ಮುಖ ಮಾಡಲಿವೆ. ಜಿಯಾಂಗೈ ಆಟೋಮೊಬೈಲ್ ಕಂಪನಿ(ಜೆಎಸಿ), ಬ್ರಿಲಿಯೆನ್ಸ್ ಆಟೊ, ಚೆರಿ ಇಂಟರ್ ನ್ಯಾಷನಲ್, ಬುಲ್ಡ್ ಯುವರ್ ಡ್ರೀಮ್ಸ್ (ಬಿವೈಡಿ) ಮುಂತಾದ ಕಂಪನಿಗಳು ದೇಶದಲ್ಲಿ ಡ್ರೈವ್ ಮಾಡಲು ಯೋಜಿಸಿವೆ.

"ಭಾರತ ಮತ್ತು ಚೀನಾದ ವಾಹನೋದ್ಯಮದ ನಡುವೆ ಸಾಕಷ್ಟು ಡೀಲ್ ಆರಂಭವಾಗಿದೆ. ಶಾಂಘೈ ಆಟೋಮೋಟಿವ್ ಇಂಡಿಸ್ಟ್ರಿ ಕಾರ್ಪೊರೇಷನ್ ಈಗಾಗಲೇ ದೇಶವನ್ನು ಪ್ರವೇಶಿಸುವ ಪ್ರಕ್ರಿಯೆ ಆರಂಭಿಸಿದೆ. ಚೆರಿ, ಬ್ರಿಲಿಯನ್ಸ್, ಜೆಎಸಿ, ಬಿವೈಡಿ ಮುಂತಾದ ಕಂಪನಿಗಳು ಇಲ್ಲಿ ವಹಿವಾಟು ಆರಂಭಿಸುವ ಪ್ರಕ್ರಿಯೆಯಲ್ಲಿವೆ" ಎಂದು ಉದ್ಯಮ ಮೂಲಗಳು ತಿಳಿಸಿವೆ. ಈ ಕುರಿತು ಚೀನಾ ಕಂಪನಿಗಳಿಗೆ ಇಮೇಲ್ ಮಾಡಿದ್ದರೂ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ.

ಜಗತ್ತಿನ ಎರಡನೇ ಬೃಹತ್ ವಾಹನ ಮಾರುಕಟ್ಟೆ ಇನ್ನು ಮುಂದೆ ಭಾರತದಲ್ಲಿ ಉತ್ಪಾದನೆ ಆರಂಭಿಸಲಿದೆ. ಇದರಲ್ಲಿ ಚೀನಾದ ಪ್ರಮುಖ ಪ್ರಯಾಣಿಕ ಕಾರ್ ಚೆರಿ ಇಂಟರ್ ನ್ಯಾಷನಲ್ ದೇಶದ ಮಾರುಕಟ್ಟೆಗೆ ಪ್ರವೇಶಿಸುವ ಪ್ರಕ್ರಿಯೆಗೆ ತೊಡಗಿದೆ. ಇದೇ ರೀತಿ ಬ್ರಿಲಿಯನ್ಸ್ ಆಟೋ ಕೂಡ ತನ್ನ ಪ್ರಯಾಣಿಕ ಕಾರ್ "ಬ್ರಿಲಿಯೆನ್ಸ್" ಮೂಲಕ ದೇಶದ ಮಾರುಕಟ್ಟೆಗೆ ಪ್ರವೇಶಿಸಲಿದೆ. ಕಂಪನಿ ಮಿನಿ ಬಸ್ ಮತ್ತು ಕಾರ್ಗೊ ವ್ಯಾನ್ ಗಳನ್ನು ಕೂಡ ಇಲ್ಲಿ ಮಾರಾಟ ಮಾಡುವ ನಿರೀಕ್ಷೆಯಿದೆ.

More from DriveSpark

Article Published On: Saturday, February 19, 2011, 15:06 [IST]
English summary
Chinese automobile manufacturers such as Jianghuai Automobile Company (JAC), Brilliance Auto, Chery International, Build Your Dreams (BYD) and Beiqi Foton are all exploring opportunities to set up shop in the country.
Read more on ಚೀನಾ china
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+