ಕ್ರಿಕೆಟ್ ತಾರೆಗಳ ಕಾರ್ ಬೈಕ್ ಲೋಕ, ಲಕ್ಷುರಿ ವಾಹನಗಳಿಗೆ ಕ್ಲೀನ್ ಬೌಲ್ಡ್

ಪ್ರತಿಭಾವಂತ ಕ್ರಿಕೆಟಿಗರಿಗೂ ಕಾರುಗಳಿಗೂ ಸುಲಭವಾದ ನಂಟಿದೆ. ಇವರು "ಮ್ಯಾನ್ ಆಫ್ ಸೀರಿಸ್", "ಮ್ಯಾನ್ ಆಫ್ ಮ್ಯಾಚ್", "ಬೆಸ್ಟ್ ಬ್ಯಾಟ್ಸ್ ಮ್ಯಾನ್" ಇತ್ಯಾದಿ ಬಿರುದುಗಳೊಂದಿಗೆ ಕಾರ್ ಬೈಕ್ ಗಳನ್ನು ಗಿಫ್ಟಾಗಿ ಪಡೆಯುತ್ತಾರೆ. ನಮ್ಮಲ್ಲಿ ಕೆಲವರಿಗೆ ಹಳೆಯ ಸ್ಟಾಂಪ್, ಕ್ವಾಯಿನ್ ಸಂಗ್ರಹದ ಹುಚ್ಚಿರುವಂತೆ ಇವರಿಗೆ ಹೊಸತು ಹಳೆಯ ಮಾಡೆಲ್ ಕಾರ್ ಗಳನ್ನು ಸಂಗ್ರಹಿಸುತ್ತಾರೆ. ಸದ್ಯ ನಮ್ಮ ದೇಶದ ಹೆಮ್ಮೆಯ ಕ್ರಿಕೆಟ್ ಆಟಗಾರರ ಇಷ್ಟದ ವಾಹನಗಳ ಮೇಲೊಂದು ಡ್ರೈವ್ ಮಾಡೋಣ.
ಕ್ರಿಕೆಟ್ ವೃತ್ತಿಯ ಉತ್ತುಂಗದಲ್ಲಿರುವ ಸಚಿನ್ ತೆಂಡೂಲ್ಕರ್ ಗೆ ಕಾರ್ ಗಳೆಂದರೆ ತುಂಬಾ ಇಷ್ಟವಂತೆ. ಸಚಿನ್ ಬಳಿ ಫೆರಾರಿ ಮತ್ತು ಬಿಎಂಡಬ್ಲ್ಯು ಕಾರ್ ಗಳಿವೆ. 29ನೇ ಟೆಸ್ಟ್ ಶತಕ ಪಡೆದಾಗ ಫಿಯೆಟ್ ಕಂಪನಿ ಇವರಿಗೆ ಫೆರಾರಿ 360 ಕಾರನ್ನು ಉಡುಗರೆಯಾಗಿ ನೀಡಿತ್ತು. ಮರ್ಸಿಡಿಸ್ ಬೆಂಝ್ ಮತ್ತು ಒಪೆಲಾ ಕಾರ್ ಗಳು ತೆಂಡೂಲ್ಕರ್ ಬಳಿಯಿವೆ.
ಹರ್ಬಜನ್ ಸಿಂಗ್ ಕಾರ್ ಸ್ಟೋರಿ ನೀವು ಮರೆತಿರಲಿಕ್ಕಿಲ್ಲ. ಅವರಿಗೆ ಹಮ್ಮರ್ ಅಂದ್ರೆ ಇಷ್ಟ. ಇಂಗ್ಲೆಂಡಿನಿಂದ ಸುಮಾರು 70 ಲಕ್ಷ ರೂಪಾಯಿ ದರದ ಹಮ್ಮರ್ ಕಾರ್ ನ್ನು ಆಮದು ಮಾಡಿಕೊಂಡಿದ್ದರು. ಆಮದು ಸುಂಕ ಇತ್ಯಾದಿಗಳೆಲ್ಲ ಸೇರಿ ಅದರ ದರ ಒಂದು ಕೋಟಿ ರೂ.ಗಿಂತಲೂ ಹೆಚ್ಚಾಗಿತ್ತು. ಆಮೇಲೆ ನಂಬರ್ ಇಲ್ಲದೇ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಹರ್ಭಜನ್ ಸಿಂಗ್, 3 ಸಾವಿರ ರುಪಾಯಿ ದಂಡ ತೆತ್ತಿದ್ದರು. ಹರ್ಬಜನ್ ಬಳಿಯಲ್ಲಿ ಫೋರ್ಡ್ ಎಂಡೊವರ್ ಕಾರ್ ಕೂಡ ಇದೆ.
ಮಹೀಂದ್ರ ಸಿಂಗ್ ಧೋನಿ ಬಳಿಯಲ್ಲಿರುವುದು ಹಮ್ಮರ್ ಮತ್ತು ಮಿತ್ಸುಬಿಸಿ ಪಜೆರೊ ಕಾರ್. ಕೇವಲ ಕಾರ್ ಮಾತ್ರವಲ್ಲದೇ ಬೈಕ್ ಕೂಡ ಇವರಿಗೆ ಇಷ್ಟ. ಹರ್ಲಿ ಡೇವಿಡ್ ಸನ್, ಯಮಾಹ 650 ಸ್ಪೋರ್ಟ್ಸ್ ಬೈಕ್, ಕವಾಸಕಿ ನಿಂಝಾ ಮುಂತಾದ ಬೈಕ್ ಧೋನಿ ಬಳಿಯಿವೆ.
ಯುವರಾಜ್ ಸಿಂಗ್ ಬಿಎಂಡಬ್ಲ್ಯು ಎಂ-5, ಬಿಎಂಡಬ್ಲ್ಯು ಎಂ 3 ಕಾರ್ ಓನರ್. ಮೆರ್ಕ್, ಪೋರ್ಷ್ 911 ಕಾರ್ ಕೂಡ ಸಿಂಗ್ ಬಳಿಯಲ್ಲಿದೆ. ಅನಿಲ್ ಕುಂಬ್ಲೆ ಫೋರ್ಡ್ ಎಂಡೊವರ್ ಕಾರ್ ಹೊಂದಿದ್ದಾರೆ. ರಾಹುಲ್ ಡ್ರಾವಿಡ್ ಹ್ಯುಂಡೈ ಟಾಕ್ಸ್ ನ್ ಕಾರ್ ಮೂಲಕ ಹ್ಯಾಪಿ ಡ್ರೈವಿಂಗ್ ಮಾಡಿದರೆ, ವಿರೇಂದ್ರ ಸೆಹ್ವಾಗ್ ಬಿಎಂಡಬ್ಲ್ಯು 5 ಸೀರಿಸ್ ಕಾರ್ ಮೂಲಕ ಸವಾರಿ ಮಾಡುತ್ತಾರೆ.
ಹೆಚ್ಚಿನ ಕ್ರಿಕೆಟ್ ತಾರೆಗಳಿಗೆ ಬಿಎಂಡಬ್ಲ್ಯು ಸೀರಿಸ್ ಕಾರುಗಳಿಷ್ಟ. ಗೌತಮ್ ಗಂಭೀರ್ ಬಿಎಂಡಬ್ಲ್ಯು ಅಂದ್ರೆ ಫೇವರಿಟ್ ಕಾರಂತೆ. ಗಂಭೀರ್ ಸದ್ಯ ಹೊಂದಿರುವುದು ಸ್ಯಾಂಟ್ರೊ, ಟೊಯೊಟೊ ಕರೊಲಾ ಮತ್ತು ಮಾರುತಿ ಎಸ್ ಎಕ್ಸ್ 4 ಕಾರ್ ಗಳನ್ನು. ರೋಹಿತ್ ಶರ್ಮಾ ಅವರಿಗೆ ಸ್ಕೂಡಾ ಲೌರ ಮತ್ತು ಬಿಎಂಡಬ್ಲ್ಯು ಕಾರ್ ಅಂದ್ರೆ ಇಷ್ಟವಂತೆ.
ಶ್ರಿಶಾಂತ್ ಹೋಂಡಾ ಸಿವಿಕ್ ಕಾರ್ ಹೊಂದಿದ್ದಾರೆ. ಆದರೆ ಇರ್ಫಾನ್ ಪಠಾನ್ ಗೆ ಐಷಾರಾಮಿ ಕಾರ್ ಮೇಲೆ ಅಂತಹ ಮೋಹ ಏನಿಲ್ಲ. ಸದ್ಯ ಸ್ಕಾರ್ಪಿಯೊ ಕಾರ್ ಮೂಲಕ ಹ್ಯಾಪಿಯಾಗಿದ್ದಾರೆ. ಬೌಲರ್ ಪ್ರವೀಣ್ ಕುಮಾರ್ ಫೋರ್ಡ್ ಎಂಡೊವರ್ ಹೊಂದಿದ್ದಾರೆ. ಗಂಗೂಲಿ ಬಳಿ ಮರ್ಸಿಡಿಸ್, ಇಶಾಂತ್ ಶರ್ಮಾ ಬಳಿ ಹೋಂಡಾ ಸಿಟಿ ಕಾರಿದೆ.


Click it and Unblock the Notifications








