ಆಪೆಗೊಬ್ಬ ತಮ್ಮ, ಪಿಯಾಗಿಯೊ "ಆಪೆ ಮಿನಿ"

Ape mini
ಸ್ವ-ಉದ್ಯೋಗಿಗಳ ಪಾಲಿಗೆ ಆಪೆ ಅಂದ್ರೆ ಚಿಕ್ಕ ಆನೆಯ ತರಹ. ಈಗ ಟ್ರಕ್ ಮತ್ತು ಟ್ರಾಕ್ಟರ್ ಮುಂತಾದ ಸೆಗ್ಮೆಂಟ್ ಗೆ ಬೇಡಿಕೆ ಹೆಚ್ಚಾಗುತ್ತಿದೆ. ಈಗ ಹೆಚ್ಚಿನ ಕಂಪನಿಗಳು ತಮ್ಮ ಕಾಂಪ್ಯಾಕ್ಟ್ ಸೆಗ್ಮೆಂಟ್ ಮೂಲಕ ಹಲವು ಕಂಪನಿಗಳು ಗ್ರಾಹಕರನ್ನು ತಲುಪಲು ಯತ್ನಿಸುತ್ತಿವೆ. ಇದರಲ್ಲಿ ಪಿಯಾಜಿಯೊ ಮುಂಚೂಣಿಯಲ್ಲಿದ್ದು ಆಪೆಯಂತಹ ಪುಟ್ಟ ಟ್ರಕ್ ಹೊರತರುತ್ತಿದೆ. ಕಂಪನಿ ಈಗ ಔಪಚಾರಿಕವಾಗಿ "ಆಪೆ ಮಿನಿ" ಎಂಬ ನಾಲ್ಕು ಚಕ್ರದ ಟ್ರಕ್ ಹೊರತಂದಿದೆ.

ಆಪೆ ಮಿನಿ ಎಂಬುದು 0.5 ಟನ್ ಸಾಮರ್ಥ್ಯದ ಟ್ರಕ್. ಗ್ರಾಹಕರ ಕೈಸೇರಲು ಇನ್ನೂ ನಾಲ್ಕು ತಿಂಗಳು ಕಾಯಬೇಕು. ಇದರ ದರ 1.73 ಲಕ್ಷ ರೂ. ಎಂದು ಕಂಪನಿ ಪ್ರಕಟಿಸಿದೆ. ಮೂರು ಚಕ್ರದ ಆಪೆಯೊಂದಿಗೆ ನೂತನ ನಾಲ್ಕು ಚಕ್ರದ ಆಪೆ ಮಿನಿ ತನ್ನ ಸೆಗ್ಮೆಂಟ್ ನಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಳ್ಳುವ ನಿರೀಕ್ಷೆಯನ್ನು ಕಂಪನಿಯ ನಿರ್ದೇಶಕರು ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಪಿಯಾಜಿಯೊ ಸುಮಾರು 1.96 ಲಕ್ಷ ಮೂರು ಚಕ್ರದ ವಾಹನಗಳನ್ನು ಮಾರಾಟ ಮಾಡಿತ್ತು.

ಮಹಾರಾಷ್ಟ್ರದ ಘಟಕದಲ್ಲಿ ವಾರ್ಷಿಕವಾಗಿ 2 ಲಕ್ಷ ಯೂನಿಟ್ ಮೂರು ಚಕ್ರದ ವಾಹನಗಳನ್ನು ಮತ್ತು ನಾಲ್ಕು ಚಕ್ರದ ಒಂದು ಲಕ್ಷ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಿಯಾಜಿಯೊ ಹೊಂದಿದೆ. ದೊಡ್ಡ ವಾಹನಗಳಿಗಿಂತ ಇಂತಹ ಸಣ್ಣ ವಾಹನಗಳು ಬೃಹತ್ ನಗರಗಳಲ್ಲಿ ಉಪಯೋಗಿಯಾಗಿದ್ದು, ಸಂಚಾರ ದಟ್ಟಣೆಯನ್ನೂ ಕಡಿಮೆ ಮಾಡುತ್ತವೆ ಎಂದು ಅವರು ಹೇಳಿದ್ದಾರೆ.

More from DriveSpark

Article Published On: Saturday, February 19, 2011, 9:41 [IST]
English summary
Piaggio is making a bid to please the customers with its Ape Mini in 0.5 tonne category 4 wheeler carrier truck. This is introduced amidst fierce competition at Rs1.73 lakh which is slated for commercial launch in another four months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+