ಜಾಗ್ಗ್ವಾರ್ ಲ್ಯಾಂಡ್ ರೋವರ್ ನಲ್ಲಿ 2 ಸಾವಿರ ಉದ್ಯೋಗವಕಾಶ

ಕಂಪನಿಯ ಕಾರ್ ಮಾರಾಟ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಹೀಗಾಗಿ ಮುಂದಿನ 2 ವರ್ಷಗಳಲ್ಲಿ ಟಾಟಾ ಮೋಟರ್ಸ್ ಸುಮಾರು 2 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಳ್ಳಲಿದೆ. ಆದರೆ ಈ ವರ್ಷ ಇಂಗ್ಲೆಂಡ್ ನಲ್ಲಿ ಜಾಗ್ವರ್ ಆಂಡ್ ಲ್ಯಾಂಡ್ ರೋವರ್ ಶೇ. 11ರಷ್ಟು ಉದ್ಯೋಗ ಕಡಿತ ಮಾಡಿ, ಸುಮಾರು 400 ಸಿಬ್ಬಂದಿಗಳಿಗೆ ಗೇಟ್ ಪಾಸ್ ನೀಡುವುದಾಗಿ ಹೇಳಿತ್ತು.
ಈಗ ಕಂಪನಿಯು ಒಟ್ಟು 18 ಸಾವಿರ ಸಿಬ್ಬಂದಿಗಳನ್ನು ಹೊಂದಿದ್ದು ಮುಂದಿನ 2 ವರ್ಷಗಳಲ್ಲಿ 20 ಸಾವಿರ ಗಡಿ ಮುಟ್ಟಿಸಲು ಬಯಸಿದೆ. ಕಂಪನಿಯು ಪ್ರಸಕ್ತ ವರ್ಷ ಹೊರತರಲು ಉದ್ದೇಶಿಸಿರುವ ಹೊಸ ಉತ್ಪನ್ನಗಳಿಗಾಗಿ ನೇಮಕಾತಿ ಕೈಗೊಳ್ಳಲಿದೆ. ಜಾಗ್ವಾರ್ ಆಂಡ್ ಲ್ಯಾಂಡ್ ರೋವರ್ ಕಂಪನಿಯು ತನ್ನ ಹಣಕಾಸು, ಮಾರುಕಟ್ಟೆ, ಎಂಜಿನಿಯರಿಂಗ್ ಅಭಿವೃದ್ಧಿ ಮತ್ತು ಐಟಿ ವಿಭಾಗಕ್ಕೆ ನೇಮಕಾತಿ ಮಾಡಲಿದೆ.


Click it and Unblock the Notifications








