ಕೂಲಾಗಿ ಕೆಲಸ ಮಾಡಲು 10 ಆಟೋಮೊಬೈಲ್ ಉದ್ಯೋಗಗಳು

Written By:

ಇಂದಿನ ಆಧುನಿಕ ಜಗತ್ತಿನಲ್ಲಿ ಅವಕಾಶಗಳು ಹೇರಳವಾಗಿದೆ. ಆದರೆ ಅವುಗಳನ್ನು ಹುಡುಕಿಕೊಂಡು ನಾವು ಸಾಗಬೇಕಾಗುತ್ತದೆ. ನಮ್ಮ ಕಲಿಕೆಗೆ ತಕ್ಕಂತೆ ಅತ್ಯುತ್ತಮ ಉದ್ಯೋಗವನ್ನು ಹುಡುಕಬೇಕು. ಹೀಗೆ ಒಂದು ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಅದರತ್ತ ನಿಷ್ಠೆಯನ್ನು ತೋರಿಸಿದರೆ ಖಂಡಿತ ಗುರಿ ಮುಟ್ಟಬಹುದು.

ಅದೇ ರೀತಿ ಆಟೋಮೊಬೈಲ್ ಕ್ಷೇತ್ರದಲ್ಲಿ ಉದ್ಯೋಗ ಹರಸಿಕೊಳ್ಳುವುದು ಹಲವರ ಕನಸಾಗಿರುತ್ತದೆ. ಲಂಬೋರ್ಗಿನಿ, ಫೆರಾರಿಗಳಂತಹ ಸೂಪರ್ ಕಾರುಗಳ ಕಾರ್ಖಾನೆಯಲ್ಲಿ ಕೆಲಸ ಮಾಡುವವರ ಪರಿಸ್ಥಿತಿ ಹೇಗಿರಬಹುದು? ಹೀಗೆ ಚಿಂತನೆ ಮಾಡಿರುವ ನಮ್ಮ ತಂಡ ಆಟೋಮೊಬೈಲ್ ಕ್ಷೇತ್ರದ 10 ಸುಲಭ ಉದ್ಯೋಗಗಳನ್ನು ಪಟ್ಟಿ ಮಾಡಿ ಕೊಡಲಿದ್ದೇವೆ.

10. ಸೂಪರ್ ಎಂಜಿನ್ ನಿರ್ಮಾತ

10. ಸೂಪರ್ ಎಂಜಿನ್ ನಿರ್ಮಾತ

ಎಂಜಿನ್ ಗಳು ಕಾರುಗಳ ಹೃದಯ ಬಡಿತವಿದ್ದಂತೆ. ಅವುಗಳಿಲ್ಲದಿದ್ದರೆ ಕಾರುಗಳ ಚಲನೆ ನಿಶ್ಛಲ. ಹಾಗೆಯೇ ಸೂಪರ್ ಕಾರು ಎಂಜಿನ್ ತಯಾರಕರು ಅತ್ಯಂತ ಸುಲಭ ಕೆಲಸವನ್ನು ಹೊಂದಿರುತ್ತದೆ. ಉದಾಹರಣೆಗೆ ಜರ್ಮನಿಯ ಗರಿಷ್ಠ ನಿರ್ವಹಣೆಯ ಮರ್ಸಿಡಿಸ್ ನ ಎಎಂಜಿ ಎಂಜಿನ್ ಗಳನ್ನು ಒಬ್ಬ ವ್ಯಕ್ತಿ ಮಾತ್ರ ನಿರ್ಮಿಸುತ್ತಾರೆ.

9. ವಿಂಟೇಜ್ ಕಾರು ಶೇಖರಣೆಗಾರ

9. ವಿಂಟೇಜ್ ಕಾರು ಶೇಖರಣೆಗಾರ

ಆಟೋಮೊಬೈಲ್ ಕ್ಷೇತ್ರದಲ್ಲಿ ಇಂತಹ ಕೆಲಸ ಮಹತ್ವ ಗೊತ್ತಿಲ್ಲದಿದ್ದರೆ ನಮಗಿಂದು ಜಗತ್ತಿನ ಅತ್ಯುತ್ತಮ ಸೃಷ್ಟಿಯನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ. ಇದೇ ಕಾರಣಕ್ಕಾಗಿ ವಿಂಟೇಜ್ ಕಾರು ಶೇಖರಣೆಗಾರರ ಮಹತ್ವ ನಮಗೆ ಅರಿವಾಗುತ್ತದೆ. ಅದಕ್ಕಾಗಿಯೇ ಜಗತ್ತಿನ ಕೂಲಾಗಿ ಮಾಡುವ ಕೆಲಸ ಇದಲ್ಲವೇ?

8. ಕಸ್ಟಮ್ ಕಾರು ನಿರ್ಮಾತ

8. ಕಸ್ಟಮ್ ಕಾರು ನಿರ್ಮಾತ

ಯಾರೇ ಓರ್ವರು ಕಾರು ವಿನ್ಯಾಸಗೊಳಿಸುವುದು ಅತ್ಯುತ್ತಮ ಎಂದು ಅಂದುಕೊಂಡಿದ್ದರೆ ಅದನ್ನು ಮರು ವಿನ್ಯಾಸಗೊಳಿಸುವುದು ಅದಕ್ಕಿಂತಲೂ ಶ್ರೇಷ್ಠವಾದ ಕೆಲಸವಲ್ಲವೇ? ಇದಕ್ಕಾಗಿ ಸೃಜನಶೀಲ ಮನಸ್ಸು ಹಾಗೂ ಯುಕ್ತಿ ಬೇಕಾಗಿದೆ. ಇಂತವರು ಮಾನವ ಚಿಂತೆಗೂ ಮೀರಿ ತಮ್ಮ ವಿನ್ಯಾಸವನ್ನು ರಚಿಸುತ್ತಾರೆ.

7. ಶ್ರೀಮಂತ ಉದ್ಯಮಿಗಳ ಚಾಲಕ

7. ಶ್ರೀಮಂತ ಉದ್ಯಮಿಗಳ ಚಾಲಕ

ಶ್ರೀಮಂತ ಉದ್ಯಮಿ ಅಥವಾ ಫ್ಯಾಮಿಲಿಯ ಚಾಲಕರು ತುಂಬಾನೇ ನಿರಾಳವಾಗಿರುತ್ತಾರೆ. ಮಾಲಿಕನ ಬೇಡಿಕೆಗಾನುಸಾರವಾಗಿಯಾದರೂ ಸದಾ ಸೂಪರ್ ಲಗ್ಷುರಿ ಕಾರಲ್ಲಿ ತಿರುಗಾಡುವುದು ಇವರ ಹವ್ಯಾಸವಾಗಿದೆ.

6. ರೂಪದರ್ಶಿ

6. ರೂಪದರ್ಶಿ

ವಾಹನ ಜಗತ್ತು ಹಾಗೂ ರೂಪದರ್ಶಿಗಳಿಗೆ ಎಲ್ಲಿಲ್ಲದ ನಂಟು. ನಾವೇನು ಕಮ್ಮಿಯೇನಲ್ಲ. ಆಟೋ ಶೋ ಅಥವಾ ಯಾವುದೇ ಮಾದರಿಯ ಪ್ರದರ್ಶನ ವೇಳೆ ಬಟ್ಟೆ ಬಿಚ್ಚಿ ಫೋಸ್ ಕೊಡುವುದು ಇವರ ಕಾಯಕ.

5. ಸಿಇಒ

5. ಸಿಇಒ

ವಾಹನ ತಯಾರಕ ಸಂಸ್ಥೆಗಳ ಸಿಇಒ ಅತಿ ಹೆಚ್ಚು ಸಂಭಾವನೆ ಪಡೆಯುವವರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಸಂಸ್ಥೆಯೊಂದರ ಏಳಿಗೆಯಲ್ಲಿ ಸಿಇಒಗಳ ಕಾರ್ಯ ನಿರ್ವಹಣೆ ಬಹು ಮುಖ್ಯವೆನಿಸುತ್ತದೆ.

4. ಡೈನೊ ಬೆಂಚ್ ಟೆಸ್ಟರ್

4. ಡೈನೊ ಬೆಂಚ್ ಟೆಸ್ಟರ್

ಎಂಜಿನ್ ವೊಂದರ ಟೆಸ್ಟಿಂಗ್ ಹಂತದಲ್ಲಿ ಡೈನೊ ಟೆಸ್ಟರ್ ನಿರ್ವಹಣೆ ನಿರ್ಣಾಯಕವೆನಿಸುತ್ತದೆ. ಇವರು ಸದಾ ಸಮಯ ಲಾಪ್ ಟಾಪ್ ಮುಂಭಾಗದಲ್ಲಿ ಸಾಫ್ಟ್ ವೇರ್ ನಲ್ಲಿ ಕಾರ್ಯ ನಿರ್ವಹಣೆಯಲ್ಲಿ ತೊಡಗಿರುತ್ತಾರೆ.

3. ಫಾರ್ಮುಲಾ ಒನ್ ಸೇಫ್ಟಿ ಕಾರು ಡ್ರೈವರ್

3. ಫಾರ್ಮುಲಾ ಒನ್ ಸೇಫ್ಟಿ ಕಾರು ಡ್ರೈವರ್

ಹೆಸರಲ್ಲೇ ಸೂಚಿಸಿರುವಂತೆಯೇ ಫಾರ್ಮುಲಾ ಒನ್ ಸೇಫ್ಟಿ ಕಾರು ಚಾಲಕರು ಎಫ್1 ಕಾರು ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಪರೀಶಿಲಿಸುತ್ತಾರೆ. ಇವರ ಕೆಲಸ ಅಷ್ಟೇ ಕೂಲ್!

2. ಮೊಟೊಜಿಪಿ ಟೆಸ್ಟ್ ರೈಡರ್

2. ಮೊಟೊಜಿಪಿ ಟೆಸ್ಟ್ ರೈಡರ್

ಎಫ್1 ಸೇಫ್ಟಿ ಕಾರು ಚಾಲಕರಿಗೆ ಸಮಾನವಾದ ರೀತಿಯಲ್ಲಿ ಮೊಟೊಜಿಪಿ ಟೆಸ್ಟ್ ರೈಡರ್ ಗಳು ಯಶಸ್ವಿ ಮೊಟೊ ಜಿಪಿ ರೇಸ್ ಚಾಲಕರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

1. ಡ್ರೈವ್ ಸ್ಪಾರ್ಕ್ - ಉಪಸಂಪಾದಕ

1. ಡ್ರೈವ್ ಸ್ಪಾರ್ಕ್ - ಉಪಸಂಪಾದಕ

ಲಾಸ್ಟ್ ಬಟ್ ನಾಟ್ ಲೀಸ್ಟ್ ಎಂಬಂತೆ ಜಗತ್ತಿನ ಸುಲಭವಾದ ಆಟೋಮೊಬೈಲ್ ಉದ್ಯೋಗಗಳ ಪಟ್ಟಿಯಲ್ಲಿ ಡ್ರೈವ್ ಸ್ಪಾರ್ಕ್ ಉಪಸಂಪಾದಕ ಹುದ್ದೆಯನ್ನು ನಾವಿಲ್ಲಿ ಉಲ್ಲೇಖಿಸಲು ಬಯಸುತ್ತೇವೆ. ಎಲ್ಲರೂ ಡ್ರೈವ್ ಸ್ಪಾರ್ಕ್ ಹುದ್ದೆ ಸುಲಭದ ಕೆಲಸ ಅಂಥ ಅಂದುಕೊಂಡಿದ್ದಾರೆ? ಯಾಕೆ ಅಂಥ ಗೊತ್ತೇ? ಇತರ ಸಂಪಾದಕೀಯಗಳನ್ನು ಹೊರತುಪಡಿಸಿದರೆ ಇಲ್ಲಿ ಕೆಲಸ ಮಾಡುವವರಿಗೆ ಕಾರು, ಬೈಕ್ ಗಳನ್ನು ಟೆಸ್ಟ್ ಡ್ರೈವ್ ನೊಂದಿಗೆ ತಮ್ಮ ಅನುಭವ ಹಂಚಿಕೊಳ್ಳುವ ಅವಕಾಶವಿರುತ್ತದೆ.

 

English summary
Top 10 coolest jobs in the automobile world. These jobs are quite possibly the most coolest jobs which any automobile enthusiast would love to do. 

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark