ತ್ವರೆ ಮಾಡಿ; ಟಾಟಾದಲ್ಲಿ 3,000 ಉದ್ಯೋಗವಕಾಶಗಳು

Posted By:

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಹೊಸದಾಗಿ 3,000 ಉದ್ಯೋಗಿಗಳನ್ನು ನೇಮಕ ಮಾಡಲು ನಿರ್ಧರಿಸಿದೆ. ಬಲ್ಲ ಮೂಲಗಳ ಪ್ರಕಾರ ಟಾಟಾದಿಂದ ನೇಮಕಗೊಳ್ಳಲಿರುವ ಉದ್ಯೋಗಿಗಳು ದೇಶದಲ್ಲಿ ಸ್ಥಿತಗೊಂಡಿರುವ 200 ಡೀಲರ್‌ಶಿಪ್‌ಗಳಲ್ಲಿ ಕೆಲಸ ಮಾಡಲಿದ್ದಾರೆ.

ಇದರಲ್ಲಿ ಟೀಮ್ ಲೀಡರ್, ಸೇಲ್ಸ್ ಮ್ಯಾನೇಜರ್, ಕಸ್ಟಮರ್ ಅಡೈಸರ್ ಮುಂತಾದ ಕೆಲಸಗಳು ಸೇರಿವೆ. ಈ ನಿಟ್ಟಿನಲ್ಲಿ ಅರ್ಹ ಅಭ್ಯರ್ಥಿಗಳ ಅರ್ಜಿಗಳಿಂದ ತಾತ್ಕಾಲಿಕ ಪಟ್ಟಿ ರೂಪಿಸಲಿರುವ ಸಂಸ್ಥೆಯು ಬಳಿಕ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲಿದೆ.

To Follow DriveSpark On Facebook, Click The Like Button
Tata Motors

ಬಹುನಿರೀಕ್ಷಿತ ಬೋಲ್ಟ್ ಹ್ಯಾಚ್‌ಬ್ಯಾಕ್ ಹಾಗೂ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರುಗಳು ನಿಕಟ ಭವಿಷ್ಯದಲ್ಲೇ ಬಿಡುಗಡೆಗೊಳ್ಳಲಿರುವಂತೆಯೇ ಟಾಟಾದಿಂದ ಇಂತಹದೊಂದು ನಡೆ ಕಂಡುಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸ್ಥೆಯು, ಗ್ರಾಹಕರಿಗೆ ಉತ್ಕೃಷ್ಟ ಖರೀದಿ ಅನುಭವ ನೀಡುವುದು ಸಂಸ್ಥೆಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ಶೋ ರೂಂಗಳನ್ನು ಪರಿಷ್ಕೃತಗೊಳಿಸುವುದು, ಹೊಸ ಡೀಲರ್‌ಶಿಪ್‌ಗಳ ಸ್ಥಾಪನೆಯಾಗುತ್ತಿದೆ ಎಂದಿದೆ.

English summary
Tata Motors will be requiring approximately 3000 new employees. They will place these new employees around their 200 dealerships within the country. Jobs such as team leaders, sales managers and customer advisors are available.
Story first published: Thursday, May 8, 2014, 15:00 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark