ಕಳೆದೆರಡು ವರ್ಷಗಳಲ್ಲಿ 30 ಲಕ್ಷ ಉದ್ಯೋಗ ನಷ್ಟ?
ಇದು ನಿಜಕ್ಕೂ ಬೆಚ್ಚಿಬೀಳಿಸುವಂತಹ ಸುದ್ದಿ ಅಂತನೇ ಹೇಳಬಹುದು. ಭಾರತೀಯ ವಾಹನೋದ್ಯಮದಲ್ಲಿ ಕಳೆದೆರಡು ವರ್ಷಗಳಲ್ಲಿ 25ರಿಂದ 30 ಲಕ್ಷಗಳಷ್ಟು ಉದ್ಯೋಗ ನಷ್ಟಗೊಂಡಿದೆ ಎಂದು ಟೊಯೊಟಾ ಕಿರ್ಲೊಸ್ಕರ್ ಮೋಟಾರು ಉಪಾಧ್ಯಕ್ಷರಾಗಿರುವ ವಿಕ್ರಂ ಕಿರ್ಲೊಸ್ಕರ್ ಹೇಳಿದ್ದಾರೆ.
ಬೆಳವಣಿಗೆ ದರ ಇಳಿಕೆ ಹಾಗೂ ವಾಣಿಜ್ಯ ವಾಹನಗಳ ಕುಸಿತವು ಇಂತಹದೊಂದು ದಯನೀಯ ಪರಿಸ್ಥಿತಿಗೆ ಕಾರಣವಾಗಿದೆ ಎಂದವರು ಬೊಟ್ಟು ಮಾಡಿ ತೋರಿಸಿದರು.

37ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಮಾತಾನಾಡುತ್ತಾ ತಿಳಿಸಿರುವ ವಿಕ್ರಂ ಕಿರ್ಲೊಸ್ಕರ್, ಒಟ್ಟಾರೆಯಾಗಿ ಕೈಗಾರಿಕೆಯಲ್ಲಿ ಶೇಕಡಾ 10ರಷ್ಟು ಉದ್ಯೋಗ ನಷ್ಟಗೊಂಡಿದ್ದು, ಇಂದೊಂದು ಗಂಭೀರ ವಿಚಾರವಾಗಿದೆ ಎಂದಿದ್ದಾರೆ.
ಕೇವಲ ನಗರ ಪ್ರದೇಶದ ಮಾತ್ರವಲ್ಲದೆ ವಾಹನ ಸಂವಹನ ವಿಚಾರದಲ್ಲಿ ಗ್ರಾಮೀಣ ಪ್ರದೇಶದಲ್ಲೂ ಅಭಿವೃದ್ಧಿ ಕಾಣಬೇಕಾಗಿದೆ ಎಂದವರು ತಿಳಿಸಿದರು. ಇನ್ನು ರಫ್ತು ಹೆಚ್ಚಿಸುವ ನಿಟ್ಟಿನಲ್ಲಿ ಗುಣಮಟ್ಟದ ಉತ್ಪನ್ನ ತಯಾರಿಕೆ ಅತಿ ಅಗತ್ಯ ಎಂದಿದ್ದಾರೆ.


Click it and Unblock the Notifications








