ಬೃಹತ್ ಉದ್ಯೋಗ ಕಡಿತಕ್ಕೆ ಮಾರುತಿ ಸುಜುಕಿ ಸಜ್ಜು

ಮಾನೆಸರ್ ಘಟಕದಲ್ಲಿ ಗಲಭೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣರಾದ ಸುಮಾರು 500 ಖಾಯಂ ಸಿಬ್ಬಂದಿಗಳ ಸೇವೆಯನ್ನು ರದ್ದುಪಡಿಸಲು ಮಾರುತಿ ಸುಜುಕಿ ಇಂಡಿಯಾ ನಿರ್ಧರಿಸಿದೆ. ಜೊತೆಗೆ ಕಂಪನಿಯು ಸುಮಾರು 500ರಷ್ಟು ಗುತ್ತಿಗೆ ಆಧಾರಿತ ಸಿಬ್ಬಂದಿಗಳ ಉದ್ಯೋಗ ಕಡಿತ ಮಾಡಲು ನಿರ್ಧರಿಸಿದೆ.

ಗಲಭೆಗೆ ಮುನ್ನ ಮಾರುತಿ ಸುಜುಕಿ ಮಾನೆಸರ್ ಘಟಕದಲ್ಲಿ ಒಟ್ಟು 3,300 ಸಿಬ್ಬಂದಿಗಳಿದ್ದರು. ಅದರಲ್ಲಿ ಸುಮಾರು 1,528 ಖಾಯಂ ಸಿಬ್ಬಂದಿಗಳಾಗಿದ್ದರು. ನೂತನ ಉದ್ಯೋಗ ಕಡಿತದ ನಂತರ ಉಂಟಾಗುವ ಸಿಬ್ಬಂದಿ ಬಿಕ್ಕಟು ಪರಿಹರಿಸಲು ಕಂಪನಿಯು ಹೊಸ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲಿದೆ. ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಸೆಪ್ಟೆಂಬರ್ 2ರಿಂದ ಆರಂಭವಾಗಲಿದೆ.

"ಉತ್ಪಾದನಾ ವಿಭಾಗಕ್ಕೆ ನಾವು ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡುವುದಿಲ್ಲ. ಆದರೆ ತಾತ್ಕಾಲಿಕವಾಗಿ ಸುಮಾರು ಶೇಕಡ 20ರಷ್ಟು ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಿದ್ದೇವೆ" ಎಂದು ಇತ್ತೀಚೆಗೆ ಮಾರುತಿ ಸುಜುಕಿ ಇಂಡಿಯಾ ಚೇರ್ಮನ್ ಆರ್. ಸಿ. ಭಾರ್ಗವ ಹೇಳಿದ್ದರು.

ಮಾರುತಿ ಸುಜುಕಿ ಕಂಪನಿಯು 500 ಖಾಯಂ ಸಿಬ್ಬಂದಿಗಳ ಉದ್ಯೋಗ ಕಡಿತ ಮಾಡಲು ನಿರ್ಧರಿಸಿರುವುದನ್ನು ವಿವಿಧ ಕಾರ್ಮಿಕ ಸಂಘಟನೆಗಳು ವಿರೋಧಿಸಿವೆ. ಸಿಪಿಐ ನೇತೃತ್ವದ ಆಲ್ ಇಂಡಿಯಾ ಟ್ರೇಡ್ ಯುನಿಯನ್ ಕಾಂಗ್ರೆಸ್ ಮತ್ತು ಸಿಪಿಐ(ಎಂ) ನೇತೃತ್ವದ ಇಂಡಿಯನ್ ಟ್ರೇಡ್ ಯುನಿಯನ್ ವಿರೋಧಿಸಿವೆ.

ಈ ಎಲ್ಲಾ ಸಂಘಟನೆಗಳು ಇಂದು(ಆಗಸ್ಟ್ 21)ರಂದು ಸಭೆ ಸೇರಿ ಉದ್ಯೋಗ ಕಡಿತದ ವಿರುದ್ಧ ಬೃಹತ್ ರಾಲಿ ನಡೆಸುವ ಕುರಿತು ತೀರ್ಮಾನಿಸಲಿವೆ. ಇದರೊಂದಿಗೆ ಮಾರುತಿ ಗುರ್ ಗಾಂವ್ ಘಟಕದ ಮಾರುತಿ ಉದ್ಯೋಗ್ ಕಾಂಮ್ ಗಾರ್ ಯೂನಿಯನ್ ಕೂಡ ಉದ್ಯೋಗ ಕಡಿತ ವಿರೋಧಿಸಿದೆ.

ಮಾರುತಿ ಸುಜುಕಿ ಕಂಪನಿಯು ಈ ಎಲ್ಲಾ ವಿರೋಧಗಳ ನಡುವೆಯೂ ಉದ್ಯೋಗ ಕಡಿತ ಕುರಿತು ಯಾವ ತೀರ್ಮಾನ ಕೈಗೊಳ್ಳುವುದೋ ಕಾದು ನೋಡಬೇಕಿದೆ. ಇದರೊಂದಿಗೆ ಕಂಪನಿಯು ಗುಜರಾತಿನಲ್ಲಿ ಘಟಕ ನಿರ್ಮಿಸುವ ಕುರಿತು ಗಂಭೀರವಾಗಿ ಆಲೋಚಿಸುತ್ತಿದೆ ಎಂದು ಮೂಲಗಳು ಹೇಳಿವೆ.

More from DriveSpark

Article Published On: Tuesday, August 21, 2012, 11:49 [IST]
English summary
Maruti Suzuki India decided to terminate services of 500 permanent and 500 contract workers. Major central trade unions had opposed the mass sacking at the Manesar plant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+