ಮಾರುತಿ ಸುಜುಕಿ ನೇಮಕಾತಿ ಪ್ರಕ್ರಿಯೆ ಶುರು

ದೇಶದ ಬೃಹತ್ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇದೀಗ ಮಾನೆಸರ್ ಘಟಕಕ್ಕೆ ಹೊಸ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿದೆ. ಕಂಪನಿಯು ಟ್ರೈನಿ ಮತ್ತು ಅನುಭವಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಿದೆ.

ಮಾನೆಸರ್ ಘಟಕದಲ್ಲಿ ಗಲಭೆಗೆ ಕಾರಣರಾದ ಎಲ್ಲಾ ಗುತ್ತಿಗೆ ಆಧರಿತ ಸಿಬ್ಬಂದಿಗಳನ್ನು ಮತ್ತು 500 ಖಾಯಂ ನೌಕರರನ್ನು ಕಂಪನಿಯು ಕೆಲಸದಿಂದ ತೆಗೆದು ಹಾಕಿತ್ತು. ಇದೀಗ ಆ ಖಾಲಿ ಹುದ್ದೆಗಳಿಗೆ ಹೊಸ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಿದೆ.

ಸುಮಾರು ಒಂದು ತಿಂಗಳ ಬೀಗಮುದ್ರೆಯ ನಂತರ ಮಾನೆಸರ್ ಘಟಕದಲ್ಲಿ ಉತ್ಪಾದನೆಯು ಈಗ ಸಹಜ ಸ್ಥಿತಿಗೆ ಬರುತ್ತಿದೆ. ಘಟಕದಲ್ಲಿ ಈಗ ಅನುಭವಿ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಅನುಭವಿಗಳನ್ನು ಮತ್ತು ಟ್ರೈನಿಗಳನ್ನು ಕಂಪನಿಯು ನೇಮಕಾತಿ ಮಾಡಿಕೊಳ್ಳಲಿದೆ. ಪ್ರಸಕ್ತ ತಿಂಗಳ ಅಂತ್ಯಕ್ಕೆ ಘಟಕದಲ್ಲಿ ಪೂರ್ಣಪ್ರಮಾಣದ ಉತ್ಪಾದನೆಯನ್ನು ಆರಂಭಿಸುವ ಯೋಜನೆಯನ್ನು ಕಂಪನಿ ಹೊಂದಿದೆ.

ಮಾರುತಿ ಸುಜುಕಿ ಕಂಪನಿಯು ಇತ್ತೀಚೆಗೆ ನೂತನ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿತ್ತು. ಹಬ್ಬದ ಸೀಸನಿನಲ್ಲಿ ಕಾರುಗಳಿಗೆ ಅತ್ಯಧಿಕ ಬೇಡಿಕೆಯಿರುವ ಕಾರಣ ಕಂಪನಿಯು ಉತ್ಪಾದನೆ ಹೆಚ್ಚಿಸುವ ಒತ್ತಡದಲ್ಲಿದೆ.

Most Read Articles

Kannada
English summary
Maruti Suzuki, the country's largest carmaker is looking to increase the number of workers at its Manesar plant to optimum levels soon. The company which fired all its contract workers and more than 500 permanent workers following the severe violence at the plant on July 18 has restarted production at the plant with a small number of workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X