ಮಾರುತಿ ಸುಜುಕಿಯಲ್ಲಿ ಒಂದು ಸಾವಿರ ಉದ್ಯೋಗಾವಕಾಶ

ನವದೆಹಲಿ, ಜು 30: ಮಾರುತಿ ಸುಜುಕಿ ಕಂಪನಿಯು ತನ್ನ ವಿವಿಧ ಘಟಕಗಳಿಗೆ ಹೊಸ ಸಿಬ್ಬಂದಿಗಳ ನೇಮಕಾತಿ ಮಾಡಿಕೊಳ್ಳಲು ಆರಂಭಿಸಿದೆ. ಮಾನೆಸರ್ ಮತ್ತು ಗುರ್ ಗಾಂವ್ ಘಟಕಕ್ಕೆ ಕಂಪನಿಯು ಸುಮಾರು ಒಂದು ಸಾವಿರ ನೌಕರರನ್ನು ನೇಮಕಾತಿ ಮಾಡಿಕೊಳ್ಳಲಿದೆ ಎಂದು ಮೂಲಗಳು ಹೇಳಿವೆ.

ಕಂಪನಿಯ ಮಾನೆಸರ್ ಘಟಕದಲ್ಲಿ ಇತ್ತೀಚೆಗೆ ನಡೆದ ಗಲಭೆಯಲ್ಲಿ ಕಾರ್ಮಿಕರಿಂದ ಮಾನವ ಸಂಪನ್ಮೂಲ ವಿಭಾಗದ ಮ್ಯಾನೆಜರ್ ಕಗ್ಗೊಲೆಯಾಗಿದ್ದರು. ನೂರಾರು ಸಿಬ್ಬಂದಿ ಗಾಯಗೊಂಡಿದ್ದರು. ಗಲಭೆಗೆ ಕಾರಣರಾದ ನೂರಾರು ಸಿಬ್ಬಂದಿಗಳನ್ನು ಪೊಲೀಸರು ಬಂಧಿಸಿದ್ದರು.

ಕಂಪನಿಯು ಹೊಸ ನೇಮಕಾತಿಯೊಂದಿಗೆ, ಗಲಭೆಗೆ ಕಾರಣರಾದ ಸುಮಾರು 500ರಷ್ಟು ಹಳೆಯ ಸಿಬ್ಬಂದಿಗಳನ್ನು ಮನೆಗೆ ಕಳುಹಿಸಲಿದೆ. ನೂತನ ನೇಮಕಾತಿ ಪ್ರಕ್ರಿಯೆಯಲ್ಲಿ ಬಹುಪಾಲು ಹೊಸ ನೌಕರರನ್ನು ಮಾನೆಸರ್ ಘಟಕಕ್ಕೆ ನೇಮಕಮಾಡಿಕೊಳ್ಳುವ ನಿರೀಕ್ಷೆಯಿದೆ.

ಮಾರುತಿ ಸುಜುಕಿ ಕಂಪನಿಯು ಮಾನೆಸರ್ ಘಟಕದಲ್ಲಿ ಸ್ವಿಫ್ಟ್ ಮತ್ತು ಡಿಜೈರ್ ಕಾರುಗಳನ್ನು ಉತ್ಪಾದಿಸುತ್ತಿದೆ. ಗಲಭೆ ನಂತರ ಇಲ್ಲಿ ಉತ್ಪಾದನೆ ಸ್ಥಗಿತಗೊಳಿಸಿ ಘಟಕಕ್ಕೆ ಬೀಗಮುದ್ರೆ ಜಡಿಯಲಾಗಿತ್ತು.

ಮಾನೆಸರ್ ಘಟಕದಲ್ಲಿನ ಗಲಭೆ ಹಿನ್ನಲೆಯಲ್ಲಿ ಕಂಪನಿಯು ದೀಪಾವಳಿ ಹಬ್ಬದ ವೇಳೆಗೆ ಪರಿಚಯಿಸಲು ಯೋಜಿಸಿದ್ದ ಮಾರುತಿ 800 ಬದಲಿ ಆವೃತ್ತಿಯ ಆಗಮನ ವಿಳಂಬವಾಗಿಲಿದೆ ಎಂದು ಕಂಪನಿ ಇತ್ತೀಚೆಗೆ ಪ್ರಕಟಿಸಿತ್ತು.

Most Read Articles

Kannada
English summary
Country's largest car maker Maruti Suzuki is gearing up to hire fresh workers in the aftermath of the Manesar Plant violence that left one general manager of the HR department dead and several injured. The auto major is eyeing numerous sources, including its own Gurgaon plant, to acquire a new workforce for the plant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X