ಡ್ರೈವಿಂಗ್ ಮಾಡುತ್ತ ತೂಕಡಿಸಿದರೆ ಎಚ್ಚರಿಸುವ ಅಲಾರಂ ಸಾಧನ

ವಾಹನ ಚಲಾಯಿಸುತ್ತ ನಿದ್ದೆಗೆ ಜಾರುವರಿಗೆ, ತೂಕಡಿಸುವರಿಗಾಗಿ ವಿಶೇಷವಾಗಿ ಈ ಸುರಕ್ಷತೆಯ ಸಾಧನವನ್ನು ರೂಪಿಸಲಾಗಿದೆ. ಇಂತವರು ಇದನ್ನು ಕಿವಿಯಲ್ಲಿ ಸಿಲುಕಿಸಿಕೊಂಡು ಆರಾಮವಾಗಿ, ಯಾವುದೇ ಭಯವಿಲ್ಲದೆ ಡ್ರೈವಿಂಗ್ ಮಾಡಬಹುದು. ನಿಮಗೆ ನಿದ್ದೆ ಬಂದಾಗ ಈ ಸಾಧನ ಅಲಾರಂ ಹೊಡೆದು ನಿಮ್ಮನ್ನು ಎಬ್ಬಿಸುತ್ತದೆ. ಆ ಮೂಲಕ ಸಂಭಾವ್ಯ ಅಪಘಾತವನ್ನು ಈ ಪುಟ್ಟ ಸಾಧನ ತಪ್ಪಿಸುತ್ತದೆ.
ಇದು ಕೇವಲ ಚಾಲಕನನ್ನು ಮಾತ್ರ ಎಚ್ಚರಿಸುವುದಿಲ್ಲ. ಆ ಗಾಡಿಯಲ್ಲಿರುವ ಇತರರಿಗೂ ಈ ಅಲಾರಂ ಕೇಳುತ್ತದೆ. ಇದು ಹೇಗೆ ಕೆಲಸ ಮಾಡುತ್ತದೆ. ನಿದ್ದೆ ಮಾಡಿದರೆ ಆ ಸಾಧನಕ್ಕೆ ಹೇಗೆ ಗೊತ್ತಾಗುತ್ತದೆ ಅಂತ ನೀವು ಪ್ರಶ್ನಿಸಬಹುದು. ಇದರಲ್ಲಿ ಅಂತಹ ದೊಡ್ಡದಾದ ತಂತ್ರಜ್ಞಾನ ಏನಿಲ್ಲ. ಇದನ್ನು ಕಿವಿಗೆ ಸಿಲುಕಿಸಿಟ್ಟರೆ ಸಾಕು. ನಿದ್ದೆ ಬಂದು, ಅಥವಾ ಮಂಪರು ಕವಿದು ಸ್ವಲ್ಪ ಒಂದು ಕಡೆ ತಲೆ ವಾಲಿಸಿದರೆ ಸಾಕು. ಅಲಾರಂ ಹೊಡೆದುಕೊಳ್ಳುತ್ತದೆ.
ಒಂದು ಕಡೆಗೆ ತಲೆವಾಲಿಸಿದಾಗ ಇದರ ಅಲಾರಂ ಹೊಡೆದುಕೊಳ್ಳುತ್ತಾದೆ. ಹೀಗಾಗಿ ನೀವು ಸುಮ್ಮಗೆ ತಲೆ ವಾಲಿಸಿದರೂ ಇದು ಸದ್ದು ಮಾಡುತ್ತದೆ. ನೇರವಾಗಿ ಕುಳಿತು ಡ್ರೈವಿಂಗ್ ಮಾಡುವರು ಇದನ್ನು ಅಳವಡಿಸಿಕೊಳ್ಳಬಹುದು. ಅಥವಾ ಸುಮ್ಮಗೆ ತಲೆವಾಲಿಸುವರು ನೀವಾದರೆ ಅಲಾರಂ ಪಕ್ಕಕ್ಕಿಟ್ಟು ತೂಕಡಿಕೆ ಆರಂಭವಾಗೋ ಸಂದರ್ಭದಲ್ಲಿ ಕಿವಿಗೆ ಅಳವಡಿಸಿ ನೇರವಾಗಿ ಕುಳಿತು ಡ್ರೈವಿಂಗ್ ಮಾಡಿದರೆ ಆಯ್ತು.
ಇದು ಬಳಕೆ ಕಷ್ಟವೇನಲ್ಲ. ಇದನ್ನು ಚಾಲಕನ ಎಡಕಿವಿಗೆ ಸಿಕ್ಕಿಸಿಟ್ಟರೆ ಸಾಕು. ಆತ ತೂಕಡಿಸಲು ಆರಂಭಿಸಿ ತಲೆ ಚೂರು ವಾಲಿಸಿದಾಗ ಅಲಾರಂ ಹೊಡೆದು ಆತನನ್ನು ಎಚ್ಚರಿಸುತ್ತದೆ. ರಾತ್ರಿ ನಿತ್ಯ ಪ್ರಯಾಣ ಮಾಡುವರು ಇದನ್ನು ಖಂಡಿತ ಖರೀದಿಸಬಹುದು. ಇದು ದುಬಾರಿ ಸಾಧನವಲ್ಲ ಸುಮಾರು 350 ರೂಪಾಯಿಗೆ ಈ ಸೇಫ್ಟಿ ಗ್ಯಾಜೆಟ್ ದೊರಕುತ್ತದೆ. ಹಗುರವಾಗಿದ್ದು ಸುಲಭವಾಗಿ ಬಳಕೆ ಮಾಡಬಹುದಾಗಿದೆ.


Click it and Unblock the Notifications