ಬಜೆಟ್ 2011: ಭಯ ಮತ್ತು ನಿರೀಕ್ಷೆಯಲ್ಲಿ ವಾಹನ ಕಂಪನಿಗಳು

ವಾಹನ ಷೇರುಗಳು ಪಂಕ್ಚರ್: ಉತ್ಪಾದನಾ ವೆಚ್ಚ ಹೆಚ್ಚಳ, ಅಬಕಾರಿ ಸುಂಕದ ಕುರಿತ ತಳಮಳದಿಂದಾಗಿ ವಾಹನ ಷೇರುಗಳು ಭಯದಲ್ಲಿದ್ದು, ಇಂದಿನ ವಹಿವಾಟಿನ ಆರಂಭದಲ್ಲಿಯೇ ವಾಹನ ಷೇರುಗಳು ಇಳಿಕೆ ಕಂಡಿವೆ. ಇಂದಿನ ವಹಿವಾಟಿನಲ್ಲಿ ಹೀರೋ ಹೋಂಡಾ ಷೇರು ದರ 1,469 ರೂ.ಗೆ ತಲುಪಿದ್ದು ಶೇ. 2ರಷ್ಟು ಇಳಿಕೆ ಕಂಡಿದೆ. ಟಾಟಾ ಮೋಟರ್ಸ್ ಮತ್ತು ಬಜಾಜ್ ಆಟೋ ಷೇರುಗಳು ಕ್ರಮವಾಗಿ 1,086 ರೂ. ಮತ್ತು 1,264 ರೂ.ಗೆ ತಲುಪಿದ್ದು ಶೇ. 1.5ರಷ್ಟು ಇಳಿಕೆ ಕಂಡಿವೆ. ಮಹೀಂದ್ರ ಮತ್ತು ಮಹೀಂದ್ರ, ಮಾರುತಿ ಸುಜುಕಿ ಷೇರುಗಳೂ ಗಣನೀಯವಾಗಿ ಇಳಿಕೆ ಕಂಡಿವೆ.
ಇಂಧನ ದರ ಹೆಚ್ಚಳ, ಹಣದುಬ್ಬರ ಏರಿಳಿತ ಮತ್ತು ಬಡ್ಡಿದರಗಳು ಏರಿಕೆ ಕಂಡರೂ ವಾಹನ ಕ್ಷೇತ್ರದ ಸಕ್ಸಸ್ ಸ್ಟೋರಿಗೆ ಏನೂ ಕುಂದಾಗಿರಲಿಲ್ಲ. ತೆರಿಗೆ ಸಂಗ್ರಹ ಗುರಿ ಮತ್ತು ಇತರ ಆದಾಯಗಳು ಏರಿಕೆ ಕಂಡು ಆರ್ಥಿಕತೆ ಗಮನಾರ್ಹ ಪ್ರಗತಿಯತ್ತ ಮುಖ ಮಾಡಿರುವುದರಿಂದ ವಾಹನ ಮಾರುಕಟ್ಟೆಯೂ ಸಾಕಷ್ಟು ಪ್ರಗತಿ ದಾಖಲಿಸಿದೆ. ಆದರೆ ಪ್ರಸಕ್ತ ಮುಂಗಡ ಪತ್ರದಲ್ಲಿ ವಾಹನೋದ್ಯಮಕ್ಕೆ ಏನು ದೊರೆಯಲಿದೆ ಮತ್ತು ಸರಕಾರ ನೀಡಿರುವ ಉತ್ತೇಜನ ಪ್ಯಾಕೇಜ್ ಗಳಲ್ಲಿ ಏನನ್ನು ಕಸಿದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.


Click it and Unblock the Notifications








