ಚಾಲಕ ಕುಡಿದಿದ್ದರೆ ಸಾಗದು ಬಂಡಿಯು ಮುಂದೆ..

drunken driving identification
ಕುಡಿದು ವಾಹನ ಚಲಾಯಿಸಬೇಡಿ ಎಂಬ ಬೋರ್ಡನ್ನು ನಿಶೆಯಲ್ಲಿ ನೋಡುವರಿಗೆ ಇದು ನಿರಾಶೆಯ ಸುದ್ದಿ. ಆಲ್ಕೊಹಾಲ್ ಪತ್ತೆ ಸಾಧನದ ಮೂಲಕ ಅಥವಾ ಬಾಯಿ ಆ ಮಾಡಿ ಅಂತ ಹೇಳಿ "ಕುಡಿದಿದ್ದಾರ" ಅಂತ ಟೆಸ್ಟ್ ಮಾಡಿ ರೋಸಿ ಹೋದ ಟ್ರಾಫಿಕ್ ಪೋಲಿಸರಿಗೆ ಇದು ಸಿಹಿಸುದ್ದಿ. ಅದೆನೆಂದರೆ ಕುಡಿದು ಗಾಡಿ ಹತ್ತುವ ಚಾಲಕನ್ನು ಪತ್ತೆಹಚ್ಚುವ, ಚಾಲಕ ಕುಡಿದಿದ್ದರೆ ವಾಹನ ಸ್ಟಾರ್ಟ್ ಆಗದಂತಹ ಸಾಧನವೊಂದು ಅಭಿವೃದ್ಧಿಯಾಗುತ್ತಿದೆ.

ಇಂದು ಹೆಚ್ಚಿನ ರಸ್ತೆ ಅಪಘಾತಗಳಿಗೆ ಕಾರಣವಾಗಿರುವುದು ಚಾಲಕರ ಕುಡಿತ. ಬೆಂಗಳೂರಿನಂತಹ ನಗರಗಳಲ್ಲಿ ಕುಡಿದು ವಾಹನ ಚಲಾಯಿಸಿ ಎಷ್ಟೋ ಜನರು ಸಾವನಪ್ಪುತ್ತಿದ್ದಾರೆ. ಭವಿಷ್ಯದ ತಂತ್ರಜ್ಞಾನ ಕುಡುಕ ಡ್ರೈವರ್ ನನ್ನು ಸುಲಭವಾಗಿ ಪತ್ತೆ ಹಚ್ಚಲಿದೆ. ಕುಡಿದು ಚಾಲನೆ ಮಾಡುವುದರಿಂದ ಉಂಟಾಗುವ ಸಾವಿರಾರು ಅಮಾಯಕರ ಸಾವಿಗೆ ಅಂತ್ಯ ಹಾಡುವ ಇಂತಹ ಸಂಶೋಧನೆಯೊಂದು ನಡೆಯುತ್ತಿದೆ. ಇದರ ಮೂಲಕ ಡ್ರೈವರ್ ನ ರಕ್ತದಲ್ಲಿರುವ ಆಲ್ಕೊಹಾಲ್ ಪ್ರಮಾಣವನ್ನು ಸುಲಭವಾಗಿ ಪತ್ತೆ ಹಚ್ಚಲಾಗುತ್ತದೆ.

ಡ್ರೈವರ್ ಆಲ್ಕೊಹಾಲ್ ಡಿಟೆಕ್ಷನ್ ಸಿಸ್ಟಮ್ ಎಂಬ ಸಾಧನ ಎರಡು ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಡ್ರೈವರ್ ಉಸಿರಾಟ ಪರೀಕ್ಷೆ ಮೂಲಕ ಮತ್ತು ಆತನ ಚರ್ಮದ ಸ್ಪರ್ಷ ಮೂಲಕ ಈ ಸಾಧನ ಚಾಲಕನ ನಿಶೆಯನ್ನು ಪರೀಕ್ಷೆ ಮಾಡುತ್ತದೆ.

ನೂತನ ಸಾಧನ ಸ್ಟೇರಿಂಗ್ ಮತ್ತು ಡೋರ್ ಲಾಕ್ ಗೆ ಅಳವಡಿಸಿರುವ ಟಚ್ ಸೆನ್ಸಾರ್ ಗಳ ಮೂಲಕ ಚಾಲಕನ ನಿಶೆಯನ್ನು ಪರೀಕ್ಷೆ ಮಾಡಲಿದೆ. ಆಲ್ಕೊಹಾಲ್ ಮಿತಿ 08ಕ್ಕಿಂತ ಹೆಚ್ಚಿದ್ದಲ್ಲಿ ಡ್ರೈವರ್ ವಾಹನವನ್ನು ಚಾಲು ಮಾಡೋ ಆಗಿಲ್ಲ. ಹೀಗಾಗಿ ಕುಡಿದು ಬಂದರೆ ಬಂಡಿ ಸಾಗದು ಮುಂದೆ. ಈಗ ಉತ್ತರ ಅಮೆರಿಕದ ಕ್ಯೂಂಟಿಕ್ಯೂ ನಾರ್ತ್ ಅಮೆರಿಕಾ ಐಎನ್ ಸಿಯ ಆರ್ ಆಂಡ್ ಡಿ ತಂಡ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ.

ನೂತನ ತಂತ್ರಜ್ಞಾನ ಪ್ರಸಕ್ತ ಚಾಲ್ತಿಯಲ್ಲಿರುವ ಉಸಿರಾಟದ ಮೂಲಕ ಮಾಡುವ ಆಲ್ಕೊಹಾಲ್ ಪರೀಕ್ಷೆಯಂತಲ್ಲ. ಇದಕ್ಕಿಂತ ಎಷ್ಟೋ ಬೇಗದಲ್ಲಿ ಅಂದರೆ ಕ್ಷಣಾರ್ಧದಲ್ಲಿ ಆಲ್ಕೊಹಾಲ್ ಪರೀಕ್ಷೆ ಮಾಡುತ್ತದೆ ಎಂದು ಕಂಪನಿ ಮೂಲಗಳು ಹೇಳಿವೆ. ನ್ಯಾಷನಲ್ ಹೈವೆ ಟ್ರಾಫಿಕ್ ಅಡ್ಮಿಷನ್ ನೆರವಿನಿಂದ ಇದರ ಸಂಶೋಧನೆ 2008ರಲ್ಲಿಯೇ ಆರಂಭವಾಗಿತ್ತು. ಈ ಸಂಶೋಧನೆಗಾಗಿ 20 ಲಕ್ಷ ಡಾಲರ್ ಹೂಡಿಕೆ ಮಾಡಲಾಗಿದೆ. ಆದರೆ ನೂತನ ತಂತ್ರಜ್ಞಾನ ಕಾರ್ಯನಿರ್ವಹಿಸಲು ಇನ್ನೂ 8-10 ವರ್ಷ ಕಾಯಬೇಕು ಎಂದು ಕ್ಯೂಂಟಿಕ್ಯೂ ಹೇಳಿದೆ.

More from DriveSpark

Article Published On: Thursday, February 3, 2011, 9:54 [IST]
English summary
English Sumamruy: The technology of the future will easily identify the drunken nature of the drivers. The research on this aspect is mooted in a bid to save lot of human lives thereby the driver’s blood alcohol limit will be measured.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+