ಅಂಬಾಸಡರ್ ಕುಟುಂಬದಿಂದ ಸಣ್ಣ ಕಾರ್

ಕಂಪನಿಯ ಮೊದಲ ಸಣ್ಣ ಕಾರ್ ಮಾದರಿಯನ್ನು 2011 ಜುಲೈ ಮೊದಲ ವಾರದಲ್ಲಿ ಅನಾವರಣ ಮಾಡಲಾಗುವುದೆಂದು ಕಂಪನಿಯ ಮೂಲಗಳು ಹೇಳಿವೆ. ಅಂಬಾಸಡರ್ ಪ್ಲಾಟ್ ಫಾರ್ಮ್ ನಲ್ಲಿ ನೂತನ ಕಾರ್ ಹೊರತಂದರೂ ವಿನ್ಯಾಸದಲ್ಲಿ ಸಣ್ಣ ಕಾರ್ ಸಾಕಷ್ಟು ಭಿನ್ನವಾಗಿರಲಿದೆ. ಈ ಸಣ್ಣ ಕಾರ್ ಹ್ಯಾಚ್ ಬ್ಯಾಕ್ ಮತ್ತು ಸೆಡಾನ್ ಆವೃತ್ತಿಗಳೆರಡರಲ್ಲೂ ದೊರಕಲಿದೆ.
ನೂತನ ಸಣ್ಣಕಾರನ್ನು ಕಂಪನಿಯು ಪಶ್ಚಿಮ ಬಂಗಾಳದ ಘಟಕದಲ್ಲಿ ಉತ್ಪಾದಿಸಲಿದೆ. ಈ ಘಟಕದ ಉತ್ಪಾದನಾ ಸಾಮರ್ಥ್ಯವನ್ನು ಹಿಂದುಸ್ತಾನ್ ಮೋಟಾರ್ಸ್ ಹೆಚ್ಚಿಸಲಿದೆ.
ಈಗ ಪ್ರತಿತಿಂಗಳು ಸುಮಾರು 700ರಿಂದ 800 ಅಂಬಾಸಡರ್ ಕಾರ್ ಮಾರಾಟಗೊಳ್ಳುತ್ತಿವೆ ಎಂದು ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹಿಂದೂಸ್ತಾನ್ ಮೋಟಾರ್ಸ್ ಘಟಕ ನಿರ್ಮಾಣಕ್ಕಾಗಿ 314 ಎಕರೆ ಸ್ಥಳವನ್ನು ಪಡೆದಿದ್ದು ಶ್ರೀರಾಂ ಗ್ರೂಪ್ ನೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ. ಇವೆರಡು ಕಂಪನಿಗಳು ಜಂಟಿಯಾಗಿ ಶೀಘ್ರದಲ್ಲಿ ಐಟಿ ಪಾರ್ಕ್, ಟೌನ್ ಷಿಪ್ ಯೋಜನೆ ಆರಂಭಿಸುವ ನಿರೀಕ್ಷೆಯಿದೆ.


Click it and Unblock the Notifications








