ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಅಂಬಾಸಡರ್ ಕಾರೇ ಗತಿ!

ದೇಶದ ಹದಿಮೂರನೇ ರಾಷ್ಟ್ರಪತಿಯಾಗಿ ಪ್ರಣಬ್ ಮುಖರ್ಜಿ ಆಯ್ಕೆಯಾಗಿ ತಿಂಗಳು ಕಳೆದಿದೆ. ಈ ಸಮಯದಲ್ಲಿ ಅಂಬಾಸಡರ್ ಕಾರಿಗೆ ಗುಡ್ ಬೈ ಹೇಳಿ ಹತ್ತು ಹಲವು ಸುರಕ್ಷತೆಯ ಫೀಚರುಗಳಿರುವ ಮರ್ಸಿಡಿಸ್ ಬೆಂಝ್ ಎಸ್600ಎಲ್ ಪಾಲ್ ಮ್ಯಾನ್ ಕಾರಲ್ಲಿ ನಿತ್ಯ ಪ್ರಯಾಣಿಸಬೇಕಾಯಿತು. ಆದರೆ ಇದೀಗ ಮತ್ತೆ ಪ್ರಣಬ್ ಗೆ ಅಂಬಾಸಡರ್ ಕಾರೇ ಗತಿಯಾಗಿದೆ!

ಸುಮಾರು 6 ಕೋಟಿ ರು. ವೆಚ್ಚದಲ್ಲಿ ಅತ್ಯಾಧುನಿಕವಾಗಿ ಮಾರ್ಪಾಡು ಮಾಡಿದ್ದ ಉದ್ದದ ಸುರಕ್ಷತೆಯ ಪಾಲ್ ಮ್ಯಾನ್ ಕಾರು ಈಗ ಹಾಳಾಗಿದೆ. ಅದರ ಎಂಜಿನ್ ನಡು ಪ್ರಯಾಣದಲ್ಲಿ ಒಮ್ಮೆಗೆ ಆಫ್ ಆಗುತ್ತದಂತೆ. ಈ ಸಮಸ್ಯೆಯನ್ನು ಖುದ್ದಾಗಿ ಮರ್ಸಿಡಿಸ್ ಬೆಂಝ್ ಫ್ಯಾಕ್ಟರಿಯ ಎಂಜಿನಿಯರುಗಳೇ ಪರಿಶೀಲಿಸಿದ್ದಾರೆ. ಆದರೆ ಇನ್ನೂ ಇದನ್ನು ಸರಿಪಡಿಸಲು ಆಗಿಲ್ಲವಂತೆ.

ಮರ್ಸಿಡಿಸ್ ಬೆಂಝ್ ಮಾತ್ರ ಹಾಳಾಗಿರುವುದಲ್ಲ. ರಾಷ್ಟ್ರಪತಿ ಪ್ರಯಾಣದ ಸಮಯದಲ್ಲಿ ಅನುಸರಿಸುವ ಅಂಬ್ಯುಲೆನ್ಸ್ ಕೂಡ ಬದಲಿ ವಾಹನವಾಗಿದೆ. ಒರಿಜಿನಲ್ ಅಂಬ್ಯುಲೆನ್ಸ್ ಪ್ರತಿಭಾ ಪಾಟೀಲ್ ಅಧಿಕಾರವಧಿಯಲ್ಲೇ ಹಾಳಾಗಿತ್ತು. ಸದ್ಯ ರಾಷ್ಟಪತಿಯವರಿಗೆ 10 ಲಕ್ಷ ರುಪಾಯಿಯ ಬುಲೆಟ್ ಪ್ರೂಫ್ ಕಾರನ್ನು ಆರ್ ಬಿ ಅಧಿಕಾರಿಗಳು ನೀಡಿದ್ದಾರೆ.

"ರಾಷ್ಟ್ರಪತಿ ಕಾರಿಗೆ ವಿಚಿತ್ರ ಸಮಸ್ಯೆಯಿದೆ. ಎಲ್ಲಾದರೂ ಪ್ರಯಾಣ ಮಾಡುವಾಗ ಅರ್ಧದಾರಿಯಲ್ಲಿ ಎಂಜಿನ್ ಒಮ್ಮೆಗೆ ಕೆಲಸ ಮಾಡುವುದನ್ನು ನಿಲ್ಲಿಸುತ್ತಿದೆ. ಹೀಗಾಗಿ ಅಂಬಾಸಡರ್ ಕಾರನ್ನು ಬ್ಯಾಕಪ್ ಆಗಿ ನೀಡಲಾಗಿದೆ" ಎಂದು ಆರ್ ಬಿ ಅಧಿಕಾರಿಗಳು ಹೇಳಿದ್ದಾರೆ.

"ರಾಷ್ಟ್ರಪತಿ ಈಗ ಪ್ರಯಾಣಿಸುತ್ತಿರುವ ಕಾರು ಎಲ್ಲಾ ಸುರಕ್ಷತೆಯ ಫೀಚರುಗಳನ್ನು ಹೊಂದಿದೆ. ಸುರಕ್ಷತೆ ಮತ್ತು ಭದ್ರತೆ ವಿಷಯದಲ್ಲಿ ಯಾವುದೇ ರಾಜಿ ಮಾಡಲಾಗುವುದಿಲ್ಲ" ಎಂದು ರಾಷ್ಟ್ರಪತಿಯವರ ಮಾಧ್ಯಮ ಕಾರ್ಯದರ್ಶಿ ಹೇಳಿದ್ದಾರೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಅಂಬಾಸಡರ್ ಕಾರೆಂದರೆ ಅಚ್ಚುಮೆಚ್ಚು. 2004ರಲ್ಲಿ ಮಗ ಉಡುಗೊರೆಯಾಗಿ ನೀಡಿದ್ದ ಫೋರ್ಡ್ ಐಕಾನ್ ಕಾರನ್ನು ತನ್ನ ಕಚೇರಿಯ ಸಿಬ್ಬಂದಿಗಳ ಬಳಕೆಗಾಗಿ ನೀಡಿ ತಾನು ಅಂಬಾಸಡರ್ ಕಾರಲ್ಲೇ ಪ್ರಯಾಣ ಮುಂದುವರೆಸಿದ್ದರು.

ಮರ್ಸಿಡಿಸ್ ಬೆಂಝ್ ಎಸ್600ಎಲ್ ಪಾಲ್ ಮ್ಯಾನ್ ಕಾರಿನಲ್ಲಿ ಮಿಲಿಟರಿ ದರ್ಜೆಯ ವಿಶೇಷ ಸುರಕ್ಷತಾ ಫೀಚರುಗಳಿವೆ. ಗ್ರೇನೆಡ್ ದಾಳಿ, ಸ್ಪೋಟಕಗಳಿಂದ ಪಾರಾಗುವ ಶಕ್ತಿ ಈ ಕಾರಿಗಿದೆ. ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಕಾರುಗಳಿಗೆ ಹೋಲಿಸಿದರೆ ಇದು ಉದ್ದವಾದ ಕಾರು. ಇದು ಬೈಟರ್ಬೊ ಎಂಜಿನ್ ಹೊಂದಿದ್ದು 517 ಹಾರ್ಸ್ ಪವರ್ ನೀಡುತ್ತದೆ.

Most Read Articles

Kannada
English summary
Indian president Pranabh Mukherjee is being driven in his favorite Ambassodor after the official presidential car, a Rs.6 crore bullet proof Mercedes-Benz S600 stopped working due to a technical snag. The Rs.10 lakh Ambassador meets all the security requirements.
Story first published: Monday, August 27, 2012, 12:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X