ಅಂಬಾಸಡರ್ ಕಾರಿಗೆ ಪ್ರಣಬ್ ಮುಖರ್ಜಿ ಗುಡ್ ಬೈ

ದೇಶದ ಹದಿಮೂರನೇ ರಾಷ್ಟ್ರಪತಿಯಾಗಿ ಪ್ರಣಬ್ ಮುಖರ್ಜಿ ಆಯ್ಕೆಯಾಗಿದ್ದಾರೆ. ಜುಲೈ 25 ರಂದು ಪ್ರಣಬ್ ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರತಿಭಾ ಪಾಟೀಲ್ ಅಧಿಕಾರ ಅವಧಿ ಜುಲೈ 24ರಂದು ಕೊನೆಗೊಳ್ಳಲಿದೆ. ನಂತರ ಅಂಬಾಸಡರ್ ಕಾರಿಗೆ ಟಾಟಾ ಹೇಳಿ ಪ್ರಣಬ್ ಮುಖರ್ಜಿ ಅದ್ದೂರಿ ಬೆಂಝ್ ಕಾರು ಬಳಕೆ ಮಾಡಲಿದ್ದಾರೆ.

ಇಲ್ಲಿವರೆಗೆ ಪ್ರಣಬ್ ಮುಖರ್ಜಿ ದೇಶದ ಐಕಾನಿಕ್ ಬ್ರಾಂಡಿನ ಅಂಬಾಸಡರ್ ಕಾರು ಬಳಕೆ ಮಾಡುತ್ತಿದ್ದರು. ಆದರೆ ರಾಷ್ಟ್ರಪತಿಯಾದ್ಮೆಲೆ ಹತ್ತು ಹಲವು ಸುರಕ್ಷತೆಯ ಫೀಚರುಗಳಿರುವ ಮರ್ಸಿಡಿಸ್ ಬೆಂಝ್ ಎಸ್600ಎಲ್ ಪಾಲ್ ಮ್ಯಾನ್ ಕಾರಲ್ಲಿ ಪ್ರಯಾಣಿಸಲಿದ್ದಾರೆ.

ಮರ್ಸಿಡಿಸ್ ಬೆಂಝ್ ಎಸ್600ಎಲ್ ಪಾಲ್ ಮ್ಯಾನ್ ಕಾರಿನಲ್ಲಿ ಮಿಲಿಟರಿ ದರ್ಜೆಯ ವಿಶೇಷ ಸುರಕ್ಷತಾ ಫೀಚರುಗಳಿವೆ. ಗ್ರೇನೆಡ್ ದಾಳಿ, ಸ್ಪೋಟಕಗಳಿಂದ ಪಾರಾಗುವ ಶಕ್ತಿ ಈ ಕಾರಿಗಿದೆ. ಪ್ರತಿಭಾ ಪಾಟೀಲ್ ಗೆ ಈ ಕಾರನ್ನು ಬಳಕೆ ಮಾಡಲು ಸಿಕ್ಕಿದ್ದು ಕೇವಲ 8 ತಿಂಗಳು ಮಾತ್ರ!

ರಾಷ್ಟ್ರಪತಿ ಬಳಕೆ ಮಾಡುವ ಬೆಂಝ್ ಕಾರಿನ ದರ ಸುಮಾರು 6 ಕೋಟಿ ರುಪಾಯಿ. ಇದು ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಕಾರುಗಳಿಗೆ ಹೋಲಿಸಿದರೆ ಉದ್ದವಾದ ಕಾರು. ಇದು ಬೈಟರ್ಬೊ ಎಂಜಿನ್ ಹೊಂದಿದ್ದು 517 ಹಾರ್ಸ್ ಪವರ್ ನೀಡುತ್ತದೆ.

ಅಂದಹಾಗೆ ರಾಷ್ಟ್ರಪತಿಯಾದ್ಮೆಲೆ ಪ್ರಣಬ್ ಮುಖರ್ಜಿ ತಿಂಗಳ ವೇತನ ಸುಮಾರು 1.50 ಲಕ್ಷ ರುಪಾಯಿ.

ಓದಿ: ಮಾರುತಿ 800 ಹೆಮ್ಮೆಯ ಮಾಲಿಕ ಪ್ರಧಾನಿ ಸಿಂಗ್!

Most Read Articles

Kannada
English summary
India's 13th president Pranab Mukherjee car. President bulletproof Mercedes Benz Car. Pranab previous car white Ambassador.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X