ಹೈಬ್ರಿಡ್ ಕಾರ್: ಪರಿಸರ ಸ್ನೇಹಿ ಸವಾರಿಯತ್ತ ಜಿಎಂ

General Motors
ಕೆಲವು ದಿನದ ಹಿಂದೆ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಒಂದಿಷ್ಟು ಉತ್ತೇಜನದ ಮಾತು ಕೇಳಿಬಂದಿತ್ತು. ಇದರಿಂದ ಉತ್ತೇಜನ ಪಡೆದಂತೆ ಜನರಲ್ ಮೋಟರ್ಸ್ ಮುಂದಿನ ತಿಂಗಳು ಎಲೆಕ್ಟ್ರಿಕ್ ವರ್ಷನ್ ಕಾರೊಂದನ್ನು ಪ್ರದರ್ಶಿಸಲು ನಿರ್ಧರಿಸಿದೆ. "ಆದರೆ ಕಂಪನಿಯು ಮುಂದಿನ ತಿಂಗಳು ಪರಿಚಯಿಸುವ ಎಲೆಕ್ಟ್ರಿಕ್ ಆವೃತ್ತಿ ಕೇವಲ ಪ್ರದರ್ಶನಕ್ಕೆ, ಹೊರತು ಉತ್ಪಾದನೆಗಲ್ಲ"ವೆಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಕಂಪನಿಯ ಎಲೆಕ್ಟ್ರಿಕ್ ಕಾರ್ ವಿಭಾಗದ ಜ್ಞಾನ ಪರಿಚಯಿಸಲು ಮತ್ತು ವಿವಿಧ ವಿಶ್ಲೇಷಕರ ಪ್ರತಿಕ್ರಿಯೆ ಪಡೆಯುವ ಉದ್ದೇಶದಿಂದ ಆ ಮಿನಿ ಕಾರ್ ಅನಾವರಣ ಮಾಡಲಾಗುವುದು ಎಂದಿದ್ದಾರೆ. ನೂತನ ಮಿನಿ ಎಲೆಕ್ಟ್ರಿಕ್ ಕಾರ್ ಬೆಂಗಳೂರು ಮತ್ತು ಅಮೆರಿಕ ಘಟಕದ ಎಂಜಿನಿಯರ್ ಗಳ ಸಾಧನೆ ಎಂದಿದ್ದಾರೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರ್ ಬೇಡಿಕೆ ಕುರಿತು ಒಂದಿಷ್ಟು ಕಾಲ ಪರಿಶೀಲಿಸಿ ಮುಂದುವರೆಯಲು ಕಂಪನಿ ನಿರ್ಧರಿಸಿದೆ.

ಷೆವರ್ಲೆ ಬ್ರಾಂಡ್ ಮೂಲಕ ಜನರಲ್ ಮೋಟರ್ಸ್ ದೇಶದಲ್ಲಿ ವಿನೂತನ ವಾಹನಗಳನ್ನು ಪರಿಚಯಿಸುತ್ತಿದೆ. ಷೆವರ್ಲೆ ಸ್ಪಾರ್ಕ್, ಅವಿಯೊ-ಯುವಿಎ, ಅವಿಯೊ, ತವೆರಾ, ಆಪ್ಟ್ರಾ, ಕ್ರೂಝ್, ಬೀಟ್ ಮತ್ತು ಕ್ಯಾಪ್ಟಿವಾ ಮುಂತಾದ ಷೆವರ್ಲೆ ಬ್ರಾಂಡ್ ಕಾರ್ ಗಳು ರಸ್ತೆಯಲ್ಲಿವೆ. ಷೆವರ್ಲೆ ವೋಲ್ಟ್, ಕ್ರೂಝ್ ಎಲೆಕ್ಟ್ರಿಕ್ ಮೂಲಕ ಕಂಪನಿಯು ಜಾಗತಿಕವಾಗಿ ಈಗಾಗಲೇ ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ಪ್ರವೇಶಿಸಿದೆ.

More from DriveSpark

Article Published On: Monday, March 7, 2011, 12:36 [IST]
English summary
The recent budget from the Indian government sounded too good for hybrid and electric version vehicle makers with sops offered. General Motors is initiating its efforts to display its mini electric version car next month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+