ಇ-ಇಂಡಿಕಾ: ವಿಸ್ಟಾಕ್ಕೆ ಬ್ಯಾಟರಿ ಜೋಡಿಸಿದ ಟಾಟಾ

ಟಾಟಾ ಮೋಟರ್ಸ್ ವರ್ಷಕ್ಕೆ ಸುಮಾರು ಒಂದುವರೆ ಸಾವಿರ ಇ-ಇಂಡಿಕಾ ಕಾರ್ ಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. ನೂತನ ಎಲೆಕ್ಟ್ರಿಕ್ ಆವೃತ್ತಿಯನ್ನು ಟಾಟಾ ಮೋಟರ್ಸ್ ಎಲೆಕ್ಟ್ರಿಕ್ ಸೆಂಟರ್ ನ ಎಂಜಿನಿಯರ್ ಗಳು ನಿರ್ಮಿಸಿದ್ದಾರೆ. ಇ-ಇಂಡಿಕಾ ಈ ವರ್ಷದ ಮಧ್ಯಾವಧಿಯಲ್ಲಿ ರಸ್ತೆಗಿಳಿಯುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.
ಇಂಗ್ಲೆಂಡ್ ನಲ್ಲಿ ಇ-ಇಂಡಿಕಾ ದರ ಸುಮಾರು 20 ಸಾವಿರ ಪೌಂಡ್(14.33 ಲಕ್ಷ ರೂ.) ಆಗಿರಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ. ನೂತನ ಕಾರ್ ನ್ನು ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಸುಮಾರು 100 ಮೈಲು(160 ಕಿ.ಮೀ.) ಸಾಗುತ್ತದೆ. ಇದಕ್ಕೆ ತಗಲುವ ವೆಚ್ಚ ಭಾರತದ 107 ರೂಪಾಯಿ ಎಂದು ಕಂಪನಿ ತಿಳಿಸಿದೆ. ಇ-ಇಂಡಿಕಾದಲ್ಲಿ ಪ್ರತಿಗಂಟೆಗೆ 114 ಕಿ.ಮೀ. ವೇಗದಲ್ಲಿ ಸಾಗಬಹುದು. ನಾಲ್ಕು ಸೀಟಿನ ಫ್ಯಾಮಿಲಿ ಹ್ಯಾಚ್ ಬ್ಯಾಕ್ ಕಾರ್ ಸಾಕಷ್ಟು ಲಗೇಜ್ ಸ್ಥಳಾವಕಾಶ ಹೊಂದಿದೆ. ಇ-ಇಂಡಿಕಾ ಲೀಥಿಯಂ ಐಯಾನ್ ಬ್ಯಾಟಿ ಹೊಂದಿದೆ ಎಂದು ಕಂಪನಿ ಮಾಹಿತಿ ನೀಡಿದೆ.


Click it and Unblock the Notifications








