ಮಹೀಂದ್ರ ಕಾಂಪ್ಯಾಕ್ಟ್ ಕ್ಯಾಬ್, ರಸ್ತೆಗಿಳಿಯಲು ರೆಡಿ

ನೂತನ ಕ್ಯಾಬ್ ಗೆ ಬೇಡಿಕೆ ಏರಿಕೆ ಕಾಣಲು ಆರಂಭವಾದಗ ಕಂಪನಿಯು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಕಂಪನಿಯ ಹಿರಿಯ ಉಪಾಧ್ಯಕ್ಷರು ಹೇಳಿದ್ದಾರೆ. ಪಿಯಾಗಿಯೊ ಕಂಪನಿಯ ಮೂರು ಚಕ್ರದ ಡೀಸಲ್ ಕ್ಯಾಬ್ ಮತ್ತು ಟಾಟಾ ಕಂಪನಿಯ ನಾಲ್ಕು ಚಕ್ರದ ಟಾಟಾ ಮ್ಯಾಜಿಕ್ ಗಳೊಂದಿಗೆ ನೂತನ ಜಿಯೊ ಪೈಪೋಟಿ ನಡೆಸುವ ನಿರೀಕ್ಷೆಯಿದೆ. ಗ್ರಾಮೀಣ ಮತ್ತು ನಗರವನ್ನು ತಲುಪಲು ಮಹೀಂದ್ರ ಆಂಡ್ ಮಹೀಂದ್ರ ಎರಡನೇ ಮತ್ತು ಮೂರನೇ ಶ್ರೇಣಿಯ ನಗರಗಳಲ್ಲಿ ಜಿಯೊ ಕ್ಯಾಬ್ ಮಾರಾಟಕ್ಕೆ ಹೆಚ್ಚು ಒತ್ತು ನೀಡಲಿದೆ.
ಈಗ ವರ್ಷಕ್ಕೆ ಸುಮಾರು 1.89 ಲಕ್ಷ ಯೂನಿಟ್ ನಷ್ಟು ಮೂರು ಚಕ್ರದ ಡೀಸಲ್ ಕ್ಯಾಬ್ ಮಾರಾಟವಾಗುತ್ತಿದೆ. ಇದರಲ್ಲಿ ಶೇ. 60ರಷ್ಟು ಪಾಲನ್ನು ಪಿಯಾಗಿಯೋ ಪಡೆದಿದೆ. ಮಹೀಂದ್ರ ಆಂಡ್ ಮಹೀಂದ್ರ ಪಾಲು ಶೇ. 20ರಿಂದ 25ರಷ್ಟಿದೆ. ನಾಲ್ಕು ಚಕ್ರದ ಕ್ಯಾಬ್ ಸೆಗ್ಮೆಂಟ್ ನಲ್ಲಿ ವರ್ಷಕ್ಕೆ ಸುಮಾರು 50 ಸಾವಿರ ಟಾಟಾ ಮ್ಯಾಜಿಕ್ ಮಾರಾಟವಾಗುತ್ತಿದೆ.
ಮೂರು ಚಕ್ರದ ಕ್ಯಾಬ್ ದರ ಸುಮಾರು 1.55 ಲಕ್ಷ ರೂ. ಇದ್ದರೆ ನಾಲ್ಕು ಚಕ್ರದ ಕ್ಯಾಬ್ ದರ ಸುಮಾರು 3.2 ಲಕ್ಷ ರೂ. ಆಸುಪಾಸಿನಲ್ಲಿದೆ. ಆದರೆ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ನೂತನ ಜಿಯೋ ದರ ಸುಮಾರು 1.95 ಲಕ್ಷ ರೂ. ಆಸುಪಾಸಿನಲ್ಲಿದೆ. ದರ ಕಡಿಮೆ ಇರುವ ಕಾರಣ ಗ್ರಾಹಕರು ಮೂರು ಚಕ್ರದಿಂದ ನಾಲ್ಕು ಚಕ್ರದ ಸೆಗ್ಮೆಂಟ್ ಗೆ ಬರುವರೆಂಬ ನಿರೀಕ್ಷೆ ಮಹೀಂದ್ರ ಕಂಪನಿಯದ್ದು.


Click it and Unblock the Notifications