ಭಾರತಕ್ಕೆ ಫೆರಾರಿ ಕಾರ್: 2.2 ಕೋಟಿ ರೂ.ಗಿಂತ ದುಬಾರಿ

ಬೆಚ್ಚಿಬೀಳಿಸುವ ವಿಷ್ಯ ಇರುವುದು ಫೆರಾರಿ ಕಾರ್ ದರದಲ್ಲಿ. ಇದು ದುಬಾರಿ ಸವಾರಿ ಅನ್ನೋದರಲ್ಲಿ ಯಾವುದೇ ಸಂದೇಹವಿಲ್ಲ. ಇಲ್ಲಿಗೆ ಬರಲಿರುವ ಕಾರ್ ಗಳ ದರ ಸುಮಾರು 2.2 ಕೋಟಿ ರೂ.ಗಿಂತ ಕಡಿಮೆಯಿಲ್ಲ. ಕ್ಯಾಲಿಫೋರ್ನಿಯಾ ಆವೃತ್ತಿಗೆ ಸುಮಾರು 2.2 ಕೋಟಿ ರೂ, 458 ಇಟಲಿಯಾ ದರ 2.56 ಕೋಟಿ ರೂ. ಮತ್ತು 599 ಜಿಟಿಬಿ ಫಿಯಾರ್ನೊ ದರ ಸುಮಾರು 3.37 ಕೋಟಿ ರೂ. ಇರಲಿದೆ. ಇವೆಲ್ಲ ದೆಹಲಿ ಶೋರೂಂ ದರಗಳಾಗಿವೆ.
ತಿಂಗಳ ಹಿಂದೆ ಜಿನಿವಾ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿದ ಫೆರಾರಿಯ ಇತ್ತೀಚಿನ ಮಾಡೆಲ್ ಎಫ್ ಎಫ್ ಕೂಡ ಭಾರತದಲ್ಲಿ ದೊರಕಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇದರ ದರವನ್ನೂ ಕಂಪನಿ ಇನ್ನೂ ಪ್ರಕಟಿಸಿಲ್ಲ. ಭಾರತದಲ್ಲಿ ಆರಂಭವಾದ ನೂತನ "ಶ್ರೇಯಸ್ ಗ್ರೂಪ್" ಡೀಲರ್ ಮುಖಾಂತರ ಲಕ್ಷುರಿ ಕಾರ್ ಗಳನ್ನು ಖರೀದಿಸಬಹುದಾಗಿದೆ ಎಂದು ಕಂಪನಿ ತಿಳಿಸಿದೆ.


Click it and Unblock the Notifications








