ಇಂಡಿಕಾ ಇವಿ2: ಭಾರತದಲ್ಲಿ ಅತ್ಯಧಿಕ ಮೈಲೇಜ್ ನ ಕಾರಿದು

Tata New Indica EV2
ಸದ್ಯ ರಸ್ತೆಯಲ್ಲಿರುವ ಕಾರ್ ಗಳೆಲ್ಲ ಅಬ್ಬಬ್ಬಾ ಅಂದ್ರೆ ಪ್ರತಿಲೀಟರ್ ಗೆ 20ರಿಂದ 21 ಕಿ.ಮೀ. ತಪ್ಪಿದರೆ 22 ಕಿ.ಮೀ. ಮೈಲೇಜ್ ನೀಡುತ್ತಿವೆ. ಆದರೆ ಟಾಟಾ ಮೋಟರ್ಸ್ ಸುಮಾರು 25 ಕಿ.ಮೀ. ಮೈಲೇಜ್ ನ ಕಾರೊಂದನ್ನು ಹೊರತಂದಿದೆ. ಅದರ ಹೆಸರು ಇಂಡಿಕಾ ಇವಿ2.

ಇದು ಟಾಟಾ ಇಂಡಿಕಾದ ಹೊಸ ಹ್ಯಾಚ್ ಬ್ಯಾಕ್ ಆವೃತ್ತಿ. ಡೀಸಲ್ ಮತ್ತು ಪೆಟ್ರೋಲ್ ಆವೃತ್ತಿಗಳೆರಡರಲ್ಲೂ ದೊರಕುತ್ತದೆ. ಇದರ ದೆಹಲಿ ಎಕ್ಸ್ ಶೋರೂಂ ದರ ಸುಮಾರು 2.95 ಲಕ್ಷ ರೂ.ನಿಂದ 3.95 ಲಕ್ಷ ರೂ.ವರೆಗಿದೆ. ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರಕಾರ ನೂತನ ಡೀಸಲ್ ಆವೃತ್ತಿ ಪ್ರತಿಲೀಟರ್ ಇಂಧನಕ್ಕೆ ಸುಮಾರು 25 ಕಿ.ಮೀ.ಯಷ್ಟು ಮೈಲೇಜ್ ನೀಡುವುದಾಗಿ ಕಂಪನಿಯು ತಿಳಿಸಿದೆ. ಹಾಗಾದಲ್ಲಿ ಇದು ಭಾರತದ ಅತ್ಯಂತ ಹೆಚ್ಚು ಇಂಧನ ದಕ್ಷತೆ ಹೊಂದಿರುವ ಕಾರಾಗಲಿದೆ.

ನೂತನ ಟಾಟಾ ಇಂಡಿಕಾ ಇವಿ2 ಕಾರ್ ಸಿಆರ್4 ಕಾಮರ್ ರೇಲ್ ಡೀಸಲ್ ಎಂಜಿನ್ ಹೊಂದಿದೆ. ನೂತನ ಸಿಆರ್4 ಎಂಜಿನ್ ನಲ್ಲಿ ಶೇ. 32ರಷ್ಟು ಹೆಚ್ಚು ಪವರ್, ಶೇ. 65ರಷ್ಟು ಹೆಚ್ಚಿನ ಟಾರ್ಕ್ ಮತ್ತು ಶೇ. 46ರಷ್ಟು ಹೆಚ್ಚು ಇಂಧನ ದಕ್ಷತೆ ನೀಡುತ್ತದೆ. ಪೆಟ್ರೋಲ್ ಆವೃತ್ತಿಯ ಇಂಡಿಕಾ ಮಲ್ಟಿ ಪಾಯಿಂಟ್ ಫ್ಯೂಯಲ್ ಇಂಜೆಕ್ಷನ್ ಎಂಜಿನ್ ಹೊಂದಿದೆ. ಇವೆರಡೂ ಎಂಜಿನ್ ಗಳು ಭಾರತ್ ಸ್ಟೇಜ್ ಮಾಲಿನ್ಯ ನಿಯಂತ್ರಣಕ್ಕೆ ಪೂರಕವಾಗಿದೆ.

"ಟಾಟಾ ಇಂಡಿಕಾ ಇವಿ2 ಡೀಸಲ್ ಆವೃತ್ತಿಗೆ ದೆಹಲಿ ಎಕ್ಸ್ ಶೋರೂಂ ದರ 3.95 ಲಕ್ಷ ರೂ. ಮತ್ತು 4.77 ಲಕ್ಷ ರೂ. ಆಗಿದೆ. ಎಂಪಿಎಫ್ಐ ಪೆಟ್ರೋಲ್ ಆವೃತ್ತಿಗೆ ಸುಮಾರು 2.95 ಲಕ್ಷ ರೂ.ವಿನಿಂದ 3.58 ಲಕ್ಷ ರೂ.ವರೆಗಿದೆ" ಎಂದು ಟಾಟಾ ಮೋಟರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

More from DriveSpark

Article Published On: Friday, March 11, 2011, 16:32 [IST]
English summary
Tata Motors launched new diesel and petrol variants of its hatchback Indica. New Indica EV2 priced between Rs 2.95 lakh and Rs 3.95 lakh (ex-showroom, Delhi). The diesel vehicle gives a mileage of 25 km per litre said company.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+