ಭೂಕಂಪ, ಸುನಾಮಿಗೆ ಬಲಿಯಾದ ವಾಹನ ಕಂಪನಿಗಳು

ಸುನಾಮಿಗೆ ಕಡಿಮೆಯೆಂದರೆ 2,300 ಹೊಸ ವಾಹನಗಳು ಹಾನಿಗೀಡಾಗಿವೆ ಎಂದು ಅಲ್ಲಿನ ಎರಡನೇ ಬೃಹತ್ ಕಾರ್ ತಯಾರಿಕಾ ಕಂಪನಿ ನಿಸ್ಸಾನ್ ತಿಳಿಸಿದೆ. ನಿಸ್ಸಾನ್ ನ ನಾಲ್ಕು ಫ್ಯಾಕ್ಟರಿ ಮತ್ತು ಎರಡು ಕಚೇರಿಗಳು ಹಾನಿಗೀಡಾಗಿವೆ. ಜಪಾನಿನ ಈಶಾನ್ಯ ಭಾಗದ ಡೀಲರ್ ಗಳನ್ನೂ ಇನ್ನೂ ಸಂಪರ್ಕಿಸಲು ಸಾಧ್ಯವಾಗಿಲ್ಲವೆಂದು ಕಂಪನಿ ತಿಳಿಸಿದೆ. ರಫ್ತಿಗೆ ಕಾಯುತ್ತಿದ್ದ ಕಂಪನಿಯ 1,300 ರಷ್ಟು ಹೊಸ ವಾಹನಗಳು ಕಡಲು ಪಾಲಾಗಿರುವ ಅಂದಾಜಿದೆ ಎಂದು ಕಂಪನಿ ತಿಳಿಸಿದೆ. ಕಂಪನಿಯ ಹೊಸ ವಾಹನಗಳನ್ನು ರಫ್ತಿಗಾಗಿ ಟೋಕಿಯೋ ಉತ್ತರ ಭಾಗದ ಹಿಟಾಚಿ ಬಂದರಿನಲ್ಲಿ ಸಾಲಾಗಿರಿಸಲಾಗಿತ್ತು. ಸುಮಾರು 1 ಸಾವಿರದಷ್ಟು ಸರ್ವಿಸ್ ಸೆಂಟರ್ ಗಳೂ ಹಾನಿಗೀಡಾಗಿದೆ ಎನ್ನಲಾಗಿದೆ. ಕಂಪನಿಯು ಸದ್ಯ ಉತ್ಪಾದನೆ ಮತ್ತು ವಹಿವಾಟನ್ನು ಸ್ಥಗಿತಗೊಳಿಸಿದೆ.
ಸಯಾಮಾ, ಮೋಕಾ, ಹಮಮಾಸ್ಟು ಮತ್ತು ಸುಜುಕಾ ಪ್ರದೇಶದಲ್ಲಿರುವ ಫ್ಯಾಕ್ಟರಿಯಲ್ಲಿ ಉತ್ಪಾದನೆ ನಿಲ್ಲಿಸುವುದಾಗಿ ಹೋಂಡಾ ಮೋಟರ್ ಕಂಪನಿ ತಿಳಿಸಿದೆ. ವಾಹನ ಕಂಪನಿಗಳು ಮಾತ್ರವಲ್ಲದೇ ಅಲ್ಲಿನ ತೋಷಿಬಾದಂತಹ ಪ್ರಮುಖ ಎಲೆಕ್ಟ್ರಾನಿಕ್ಸ್ ಕಂಪನಿಗಳೂ ಸಾಕಷ್ಟು ಹಾನಿಗೀಡಾಗಿದ್ದು ಉತ್ಪಾದನೆ ಸ್ಥಗಿತಗೊಳಿಸಿವೆ.


Click it and Unblock the Notifications








