ಮಾರುತಿಗೂ ಸುನಾಮಿ ಭಯ; ಎತ್ತಣಿಂದೆತ್ತ ಸಂಬಂಧವಯ್ಯ!

ಜಪಾನ್ ನಿಂದ ಬಿಡಿಭಾಗ ಆಮದಾಗದಿರುವುದರಿಂದ ಕಂಪನಿಯ ಉತ್ಪಾದನೆ ಮೇಲೆ ತಕ್ಷಣದ ಯಾವುದೇ ಪರಿಣಾಮವಿಲ್ಲ. ಆದರೆ ಮುಂದಿನ ದಿನಗಳಲ್ಲಿ ತೊಂದರೆಯಾಗದು ಎಂದು ತಳ್ಳಿಹಾಕುವಂತಿಲ್ಲವೆಂದು ಎಂಎಸ್ಐನ ವ್ಯವಸ್ಥಾಪಕ ಕಾರ್ಯನಿರ್ವಾಹಣಾಧಿಕಾರಿ ಮಾಯಂಕ್ ಪಾರೇಕ್ ಹೇಳಿದ್ದಾರೆ.
ಕಂಪನಿಗೆ ಸದ್ಯಕ್ಕೆ ಬಿಡಿಭಾಗಗಳ ಕೊರತೆಯಿಲ್ಲ. ಯಾಕೆಂದರೆ ಕಂಪನಿಯು ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಂಡಿದೆ. ಸುಮಾರು 2 ವಾರಕ್ಕೆ ಬೇಕಾಗುವಷ್ಟು ಬಿಡಿಭಾಗಗಳು ಕಂಪನಿಯ ಬಳಿಯಿವೆ. ಅಷ್ಟು ಸಮಯದಲ್ಲಿ ಜಪಾನಿನಲ್ಲಿ ಪರಿಸ್ಥಿತಿ ಹತೋಟಿಗೆ ಬರುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಮಾರುತಿಯ ವಾಹನ ಉತ್ಪಾದನೆ ಸುಮಾರು ಒಂದು ಕೋಟಿಗೆ ಮುಟ್ಟಿದ ಸಂಭ್ರಮದಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನೂ ಕಂಪನಿ ರದ್ದು ಮಾಡಿದೆ. ಇಂತಹ ಬೃಹತ್ ಪ್ರಾಕೃತಿಕ ವಿಕೋಪ ಸಂಭವಿಸಿದ ಕಾರಣ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಎಂಎಸ್ಐ ಚೇರ್ಮನ್ ಆರ್. ಸಿ. ಭಾರ್ಗವ ಹೇಳಿದ್ದಾರೆ. ಜಪಾನಿನಲ್ಲಿರುವ ಮಾರುತಿ ಉದ್ಯೋಗಿಗಳೆಲ್ಲ ಸುರಕ್ಷಿತವಾಗಿರುವುದಾಗಿಯೂ ಅವರು ಹೇಳಿದ್ದಾರೆ.


Click it and Unblock the Notifications








