ಭಾರತದ 'ಬುಲೆಟ್ ರೈಲು' ಯೋಜನೆ ಯಶಸ್ವಿಯಾಗಲು ಏನೆಲ್ಲ ನಡೆಯಬೇಕು?

By Nagaraja

ಮುಂಬೈ ಮತ್ತು ಅಹಮದಾಬಾದ್ ನಡುವಣ ಉದ್ದೇಶಿತ ದೇಶದ ಚೊಚ್ಚಲ ಬುಲೆಟ್ ರೈಲು ಯೋಜನೆ ನನಸಾಗಲು ದೈನಂದಿನ ಕನಿಷ್ಠ 100 ಟ್ರಿಪ್ ಗಳ ಪ್ರಯಾಣ ಅತ್ಯಗತ್ಯ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಅಹಮಾದಾಬಾದ್‌ (ಐಐಎಂ- ಎ) ಅಧ್ಯಯನ ವರದಿ ಸಲ್ಲಿಸಿದೆ.

ಇಲ್ಲಿ ಮಗದೊಂದು ಪ್ರಮುಖ ವಿಚಾರವನ್ನು ಬೊಟ್ಟು ಮಾಡಿರುವ ಐಐಎಎಂ-ಎ, ದಿನಕ್ಕೆ ಕನಿಷ್ಠ 88,000ದಿಂದ 1.18 ಲಕ್ಷ ಪ್ರಯಾಣಿಕರು ಸಂಚರಿಸಿದ್ದಲ್ಲಿ ಮಾತ್ರ ಯೋಜನೆ ಯಶಸ್ವಿಯಾಗಲಿದೆ ಎಂದು ತಿಳಿಸಿದೆ.

ಭಾರತದ 'ಬುಲೆಟ್ ರೈಲು' ಯೋಜನೆ ಯಶಸ್ವಿಯಾಗಲು ಏನೆಲ್ಲ ನಡೆಯಬೇಕು?

"ಡೇಡಿಕೇಟಡ್ ಹೈ ಸ್ಪೀಡ್ ರೈಲ್ವೆ (ಎಚ್‌ಎಸ್‌ಆರ್) ನೆಟ್ವರ್ಕ್ಸ್ ಇನ್ ಇಂಡಿಯಾ: ಸಮಸ್ಯೆಗಳು ಮತ್ತು ಅಭಿವೃದ್ಧಿ" ಎಂಬ ಶೀರ್ಷಿಕೆಯಡಿಯಲ್ಲಿ ಬುಲೆಟ್ ರೈಲಿನ ಸಾಧಕ-ಭಾದಕಗಳ ಕುರಿತಾಗಿ ಸಮಗ್ರ ವಿವರವನ್ನು ಸಲ್ಲಿಸಲಾಗಿದೆ.

ಭಾರತದ 'ಬುಲೆಟ್ ರೈಲು' ಯೋಜನೆ ಯಶಸ್ವಿಯಾಗಲು ಏನೆಲ್ಲ ನಡೆಯಬೇಕು?

ಇದರ ಪ್ರಕಾರ ಬುಲೆಟ್ ರೈಲಿನಲ್ಲಿ 300 ಕೀ.ಮೀ. ದೂರವನ್ನು ಪ್ರಯಾಣಿಸುವ ಪ್ರಯಾಣಿಕನೋರ್ವನಿಗೆ 1500 ರು.ಗಳ ಟಿಕೆಟ್ ದರವನ್ನು ನಿಗದಿಪಡಿಸಿದ್ದಲ್ಲಿ ಮಾತ್ರ 15 ವರ್ಷಗಳ ಬಳಿಕ ಸಮಯಕ್ಕೆ ಸರಿಯಾಗಿ ಬಡ್ಡಿ ಜೊತೆಗೆ ಸಾಲ ಮರು ಪಾವತಿ ಮಾಡಲು ಸಾಧ್ಯ ಎಂದಿದೆ. ಇದಕ್ಕಾಗಿ ದೈನಂದಿನ 88,000ದಿಂದ 110,000 ಪ್ರಯಾಣಿಕರು ಸಂಚರಿಸಬೇಕಿದೆ.

ಭಾರತದ 'ಬುಲೆಟ್ ರೈಲು' ಯೋಜನೆ ಯಶಸ್ವಿಯಾಗಲು ಏನೆಲ್ಲ ನಡೆಯಬೇಕು?

ಭಾರತಕ್ಕೆ 97,636 ಕೋಟಿ ರುಪಾಯಿಗಳ ವಿಶೇಷ ರಿಯಾಯಿತಿ ಸಾಲವನ್ನು ಒದಗಿಸಿದ್ದ ಜಪಾನ್, ಯೋಜನೆಯ ಶೇಕಡಾ 80ರಷ್ಟನ್ನು ತಾವೇ ಭರಿಸಿಕೊಳ್ಳುವುದಾಗಿ ಭರವಸೆ ನೀಡಿದೆ. ಸಾಲ ಮರುಪಾವತಿ ಅವಧಿ 50 ವರ್ಷಗಳಾಗಿದ್ದು, ಯೋಜನೆ ಆರಂಭಗೊಂಡ 16ನೇ ವರ್ಷದಿಂದ ಸಾಲ ಮರುಪಾವತಿಯು ಶೇಕಡಾ 0.1ರಲ್ಲಿ ಆರಂಭಗೊಳ್ಳುತ್ತದೆ.

ಭಾರತದ 'ಬುಲೆಟ್ ರೈಲು' ಯೋಜನೆ ಯಶಸ್ವಿಯಾಗಲು ಏನೆಲ್ಲ ನಡೆಯಬೇಕು?

ಉಳಿದ ಶೇಕಡಾ 20ರಷ್ಟು ಸಾಲವನ್ನು ಕೇಂದ್ರ ಸರಕಾರ (20,000 ಕೋಟಿ ರು.) ಒದಗಿಸಲಿದೆ. ಮೊದಲ 15 ವರ್ಷಗಳಲ್ಲಿ ಸಾಲ ಮರು ಪಾವತಿಗೆ ಜಪಾನ್ ರಿಯಾಯಿತಿ ನೀಡಿರುವುದರಿಂದ 16ನೇ ವರ್ಷದಿಂದ ಭಾರತೀಯ ರೈಲ್ವೆ ನಿಜವಾದ ಸವಾಲು ಎದುರಾಗಲಿದೆ.

ಭಾರತದ 'ಬುಲೆಟ್ ರೈಲು' ಯೋಜನೆ ಯಶಸ್ವಿಯಾಗಲು ಏನೆಲ್ಲ ನಡೆಯಬೇಕು?

ವಾಣಿಜ್ಯ ನಗರಿ ಮುಂಬೈ ಮತ್ತು ಗುಜರಾತ್‌ನ ಅಹಮದಾಬಾದ್ ನಡುವಣ ಬುಲೆಟ್ ರೈಲು ಒಟ್ಟು 534 ಕೀ.ಮೀ.ಗಳ ದೂರವನ್ನು ಕ್ರಮಿಸಲಿದೆ.

ಭಾರತದ 'ಬುಲೆಟ್ ರೈಲು' ಯೋಜನೆ ಯಶಸ್ವಿಯಾಗಲು ಏನೆಲ್ಲ ನಡೆಯಬೇಕು?

ಬುಲೆಟ್ ರೈಲು ಯೋಜನೆಗಾಗಿ ಭಾರತದ ಮೊದಲನೇಯ ಮತ್ತು ಏಳನೇ ಅತ್ಯಂತ ಜನಸಂದಣಿಯ ನಗರಗಳನ್ನು ಆಯ್ಕೆ ಮಾಡಿಕೊಂಡಿರುವುದು ಅತ್ಯುತ್ತಮ ಆಯ್ಕೆ ಎಂದು ವರದಿಯು ತಿಳಿಸುತ್ತದೆ.

ಭಾರತದ 'ಬುಲೆಟ್ ರೈಲು' ಯೋಜನೆ ಯಶಸ್ವಿಯಾಗಲು ಏನೆಲ್ಲ ನಡೆಯಬೇಕು?

ಬುಲೆಟ್ ರೈಲಿನೊಂದಿಗೆ ಮುಂಬೈ-ಅಹಮದಾಬಾದ್ ನಡುವಣ ಪ್ರಯಾಣ ಅವಧಿ ಏಳು ತಾಸಿನಿಂದ ಬರಿ ಎರಡು ಗಂಟೆಗಳಿಗೆ ಇಳಿಕೆಯಾಗಲಿದೆ.

ಭಾರತದ 'ಬುಲೆಟ್ ರೈಲು' ಯೋಜನೆ ಯಶಸ್ವಿಯಾಗಲು ಏನೆಲ್ಲ ನಡೆಯಬೇಕು?

ಜಪಾನ್ ಅಂತರಾಷ್ಟ್ರೀಯ ಸಹಕಾರ ಏಜೆನ್ಸಿಯು (ಜೆಐಸಿಎ) ಈಗಾಗಲೇ 505 ಕೀ.ಮೀ. ಉದ್ದದ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಬಗ್ಗೆ ಅಧ್ಯಯನ ನಡೆಸಿದ್ದು, ತಾಂತ್ರಿಕವಾಗಿಯೂ ಆರ್ಥಿಕವಾಗಿಯೂ ಈ ಯೋಜನೆ ಸಾಧ್ಯ ಎಂದು ಹಸಿರು ಬಾವುಟವನ್ನು ತೋರಿಸಿದೆ.

ಭಾರತದ 'ಬುಲೆಟ್ ರೈಲು' ಯೋಜನೆ ಯಶಸ್ವಿಯಾಗಲು ಏನೆಲ್ಲ ನಡೆಯಬೇಕು?

ಅಲ್ಲದ ತಾಂತ್ರಿಕ ವಿಜ್ಞಾನ, ಪರಿಣಿತ ಕೆಲಸಗಾರರು, ತಯಾರಕ ಯಂತ್ರ ಮತ್ತು ನಿರ್ವಹಣೆಯನ್ನು ಜಪಾನ್ ಭಾರತದ ಜೊತೆ ಹಂಚಿಕೊಳ್ಳಲಿದೆ. ಐದು ವರ್ಷಗಳ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳುವ ಗುರಿಯನ್ನಿಟ್ಟುಕೊಳ್ಳಲಾಗಿದೆ.

ಭಾರತದ 'ಬುಲೆಟ್ ರೈಲು' ಯೋಜನೆ ಯಶಸ್ವಿಯಾಗಲು ಏನೆಲ್ಲ ನಡೆಯಬೇಕು?

ಈ ಯೋಜನೆಯಂತೆ ಬುಲೆಟ್ ರೈಲುಗಳು ಗಂಟೆಗೆ 300ರಿಂದ 350 ಕೀ.ಮೀ. ವೇಗದಲ್ಲಿ ಸಂಚರಿಸಲಿದ್ದು, ಒಟ್ಟು 508 ಕೀ.ಮೀ. ದೂರವನ್ನು ಕ್ರಮಿಸಲಿದೆ.

ಭಾರತದ 'ಬುಲೆಟ್ ರೈಲು' ಯೋಜನೆ ಯಶಸ್ವಿಯಾಗಲು ಏನೆಲ್ಲ ನಡೆಯಬೇಕು?

ಪ್ರಸ್ತುತ ಯೋಜನೆಯು ಮುಂಬೈ ಹಾಗೂ ಅಹಮಾದಾಬಾದ್ ನಡುವಣ ಪ್ರಮುಖ ನಗರಗಳಾದ ಥಾಣೆ, ವಿರಾರ್, ಸೂರತ್, ಭರುಚ್ ಮತ್ತು ವಡೋದರಾ ಸೇರಿದಂತೆ 11 ನಿಲ್ದಾಣಗಳನ್ನು ಸಂಪರ್ಕಿಸಲಿದೆ.

Most Read Articles

Kannada
English summary
Bullet train will need to undertake 100 trips daily to be financially viable
Story first published: Tuesday, April 19, 2016, 16:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X