ದೃಶ್ಯ ವಿಸ್ಮಯ; ಜಪಾನ್‌ನಲ್ಲಿ 'ಅಗೋಚರ ರೈಲು' ಅಭಿವೃದ್ಧಿ

Written By:

ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುಂದಾಗಿರುವ ಜಪಾನ್, ಅತಿ ನೂತನ ಅಗೋಚರ ರೈಲು ಅಧ್ಯಯನ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.

ಚಾಲಕರಹಿತ ಕಾರಿನ ಬಳಿಕ ಬರುತ್ತಿದೆ ಹೈಟೆಕ್ ಡ್ರೈವರ್ ಲೆಸ್ ರೈಲು

ತಂತ್ರಗಾರಿಕೆ ಅಭಿವೃದ್ಧಿಯಲ್ಲಿ ಸದಾ ಮುಂಚೂಣಿಯಲ್ಲಿರುವ ಜಪಾನ್‌ನ ಹೆಸರಾಂತ ವಾಸ್ತುಶಿಲ್ಪಿ ಈ ಮಹತ್ತರ ಯೋಜನೆಯ ಪರಿಕಲ್ಪನೆಯನ್ನು ಮುಂದಿಟ್ಟಿದ್ದಾರೆ. ಈ ನಡುವೆ ಅದೃಶ್ಯ ರೈಲು ಹೇಗೆ ಓಡಾಡಲಿದೆಯೆಂಬ ಆತಂಕ ಎಲ್ಲರಲ್ಲೂ ಮೂಡುತ್ತಿದೆ.

ದೃಶ್ಯ ವಿಸ್ಮಯ; ಜಪಾನ್‌ನಲ್ಲಿ 'ಅಗೋಚರ ರೈಲು' ಅಭಿವೃದ್ಧಿ

ಕಝುಯೋ ಸೆಜಿಮಾ ಎಂಬಾಕಯೇ ಅಗೋಚರ ರೈಲಿನ ಪರಿಕಲ್ಪನೆಯನ್ನು ಸಿದ್ಧಪಡಿಸುತ್ತಿದ್ದು, ರೈಲು ಇತಿಹಾಸದಲ್ಲಿ ನೂತನ ಅಧ್ಯಾಯ ತೆರೆದುಕೊಳ್ಳಲಿದೆ.

ದೃಶ್ಯ ವಿಸ್ಮಯ; ಜಪಾನ್‌ನಲ್ಲಿ 'ಅಗೋಚರ ರೈಲು' ಅಭಿವೃದ್ಧಿ

ಕಟ್ಟಡ ನಿರ್ಮಾಣದಲ್ಲಿ ನಿಪುಣರಾಗಿರುವ ಈಕೆ, ತಮ್ಮ ನೂತನ ಯೋಜನೆಯನ್ನು "ದ್ರವ, ಪಾರದರ್ಶಕ ಮತ್ತು ಪ್ರಕೃತಿಯ ಜೊತೆ ಬೆರೆತುಕೊಂಡಿದೆ" ಎಂದು ಬಣ್ಣಿಸಿದ್ದಾರೆ.

ದೃಶ್ಯ ವಿಸ್ಮಯ; ಜಪಾನ್‌ನಲ್ಲಿ 'ಅಗೋಚರ ರೈಲು' ಅಭಿವೃದ್ಧಿ

ಈ ನಾವೀನ್ಯ ತಂತ್ರಗಾರಿಕೆಯ ಉದಾಹರಣೆಯನ್ನು ಫ್ರಾನ್ಸ್‌ನ ಲೆ ಲೌವ್ರೆ ಸಂಗ್ರಹಾಲಯದಲ್ಲಿ ಕಾಣಬಹುದಾಗಿದೆ.

ದೃಶ್ಯ ವಿಸ್ಮಯ; ಜಪಾನ್‌ನಲ್ಲಿ 'ಅಗೋಚರ ರೈಲು' ಅಭಿವೃದ್ಧಿ

ಇದಕ್ಕಾಗಿ ವಾಸ್ಪುಶಿಲ್ಪಿ ಕಝುಯೋ ಸೆಜಿಮಾ ಅವರು ಪ್ರತಿಷ್ಠಿತ 'Pritzker Prize' ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ದೃಶ್ಯ ವಿಸ್ಮಯ; ಜಪಾನ್‌ನಲ್ಲಿ 'ಅಗೋಚರ ರೈಲು' ಅಭಿವೃದ್ಧಿ

ಸೀಬು ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿರುವ ಸೆಜಿಮಾ ಮತ್ತು ಆಕೆಯ ಸಾನಾ (SANAA) ಸಂಸ್ಥೆಯೀಗ ಜಪಾನ್ ನಲ್ಲಿ ಅಸ್ತಿತ್ವದಲ್ಲಿರುವ ರೈಲಿಗಳಿಗೆ ಹೊಸ ಸ್ವರೂಪವನ್ನು ನೀಡಲಿದೆ.

ದೃಶ್ಯ ವಿಸ್ಮಯ; ಜಪಾನ್‌ನಲ್ಲಿ 'ಅಗೋಚರ ರೈಲು' ಅಭಿವೃದ್ಧಿ

ನೂತನ ರೈಲುಗಳು ಪ್ರತಿಫಲಿಸುವ ಮೇಲ್ಮೈಯನ್ನು ಪಡೆಯಲಿದ್ದು, ಇದು ವಾತಾವರಣದಿಂದ ರೈಲು ಅದೃಶ್ಯವಾಗುವಂತೆ ಮಾಡಲಿದೆ.

ದೃಶ್ಯ ವಿಸ್ಮಯ; ಜಪಾನ್‌ನಲ್ಲಿ 'ಅಗೋಚರ ರೈಲು' ಅಭಿವೃದ್ಧಿ

ಕಟ್ಟಡ ತಂತ್ರಗಾರಿಕೆಯಲ್ಲಿ ಆಳವಡಿಸಲಾಗಿರುವ ಅದೇ ತಂತ್ರಜ್ಞಾನವನ್ನು ರೈಲಿಗೂ ತರುವ ಯೋಜನೆಯನ್ನು ಈಕೆ ಹೊಂದಿದ್ದಾರೆ. ಅಲ್ಲದೆ ಸಂಸ್ಥೆಯ 100ನೇ ವಾರ್ಷಿಕೋತ್ಸವದ ಅಂಗವಾಗಿ 2018ರಲ್ಲಿ ಸೀಮಿತ ಆವೃತ್ತಿಯ ಅಗೋಚರ ರೈಲುಗಳು ಲೋಕಾರ್ಪಣೆಯಾಗಲಿದೆ.

ಇವನ್ನೂ ಓದಿ

ಗಂಟೆಗೆ 200 ಕೀ.ಮೀ. ವೇಗದಲ್ಲಿ ಓಡುವ ಸ್ಪೇನ್ ರೈಲು ಭಾರತಕ್ಕೆ

ಸೆಲ್ಫಿ ಚಟಕ್ಕೆ ಬಲಿಯಾದ ಚೀನಾ ಬಾಲಕಿ

Read more on ಜಪಾನ್ japan
English summary
Japan’s architects is working on an “invisible” train
Story first published: Thursday, April 14, 2016, 10:09 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark