ಜಪಾನ್ ನಿಂದ ಉಕ್ಕು ಆಮದಿಗೆ ತೊಂದರೆ: ಎಸ್ಸಾರ್

auto grade steel
ಜಪಾನಿನಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿ ಉಂಟು ಮಾಡುವ ಪರಿಣಾಮಗಳ ಕುರಿತು ದೇಶದ ವಾಹನ ಕಂಪನಿಗಳು ಚಿಂತಿತವಾಗಿವೆ. ಇದಕ್ಕೆ ಹೊಸ ಸೇರ್ಪಡೆ ಉಕ್ಕಿನ ಆಮದು. ದೇಶದ ಹೆಚ್ಚಿನ ಕಂಪನಿಗಳು ಉಕ್ಕಿಗಾಗಿ ಜಪಾನ್ ಸ್ಟೀಲ್ ಕಂಪನಿಗಳನ್ನು ಅವಲಂಬಿಸಿಕೊಂಡಿವೆ. ಹೀಗಾಗಿ ಜಪಾನ್ ನಿಂದ ಮುಂದಿನ ದಿನಗಳಲ್ಲಿ ವಾಹನ ಬಿಡಿಭಾಗಕ್ಕೆ ಬಳಸುವ ಉಕ್ಕಿನ ಆಮದಿಗೆ ಹಿನ್ನಡೆಯಾಗುವ ನಿರೀಕ್ಷೆಯನ್ನು ಎಸ್ಸಾರ್ ವ್ಯಕ್ತಪಡಿಸಿವೆ.

ಭಾರತದ ವಾಹನಗಳಿಗೆ ಬಳಸುವ ಉಕ್ಕಿಗೂ ಜಪಾನಿನ ಉಕ್ಕು ಕಂಪನಿಗಳಿಗೂ ನೇರ ಸಂಬಂಧವಿದೆ. ಉದ್ಯಮದ ಒಂದು ಅಂದಾಜಿನ ಪ್ರಕಾರ ಭಾರತದ ವಾಹನ ಕಂಪನಿಗಳು ವಾಹನ ಬಿಡಿಭಾಗಗಳಿಗೆ ವಾರ್ಷಿಕವಾಗಿ ಒಂದು ಲಕ್ಷ ಟನ್ ಉಕ್ಕು ಬಳಸುತ್ತವೆ. ಇದರಲ್ಲಿ ಶೇ. 50ರಷ್ಟು ಕಂಪನಿಗಳು ಆಮದು ಮಾಡಿಕೊಳ್ಳುತ್ತಿವೆ ಎನ್ನಲಾಗಿದೆ. ಈ ಬೇಡಿಕೆ ಮುಂದಿನ ದಿನಗಳಲ್ಲಿ ಶೇ. 20ರಷ್ಟು ಏರಿಕೆ ಕಾಣುವುದಾಗಿ ನಿರೀಕ್ಷೆ ಮಾಡಲಾಗಿದೆ.

"ಜಪಾನಿನಿಂದ ಸಾಕಷ್ಟು ಉಕ್ಕು ಆಮದು ಮಾಡಿಕೊಳ್ಳುವ ದೇಶದ ಆಟೋಮೋಟಿವ್ ಗ್ರಾಹಕರ ಕುರಿತು ಚಿಂತಿತನಾಗಿದ್ದೇನೆ. ಅಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮುಂದಿನ ದಿನಗಳಲ್ಲಿ ಉಕ್ಕು ಆಮದಿಗೆ ಹಿನ್ನಡೆಯಾಗಲಿದೆ" ಎಂದು ಎಸ್ಸಾರ್ ಸ್ಟೀಲ್ ನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಮಲಯ್ ಮುಖರ್ಜಿ ಹೇಳಿದ್ದಾರೆ.

ಆದರೂ ಅವರು ವಾಹನಗಳಿಗೆ ಬಳಸುವ ಉಕ್ಕಿನ ಆಮದಿಗೆ ಯಾವ ರೀತಿಯ ತೊಂದರೆ ಉಂಟಾದಿತೆಂದು ಅವರು ಸ್ಪಷ್ಟಪಡಿಸಿಲ್ಲ. "ಅಲ್ಲಿನ ಪರಿಸ್ಥಿತಿ ಇನ್ನೂ ಸಮಸ್ಥಿತಿಗೆ ಬಾರದಿರುವುದರಿಂದ ನಿಖರವಾಗಿ ಇಂಥದ್ದೇ ತೊಂದರೆಯಾದೀತು ಅಂತ ಹೇಳಲು ಸಾಧ್ಯವಿಲ್ಲ ಮತ್ತು ಅದಕ್ಕೆ ಇದು ಸೂಕ್ತ ಸಮಯವೂ ಅಲ್ಲ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜಪಾನಿನ ನಿಪ್ಪೊನ್, ಜೆಎಫ್ಇ ಮತ್ತು ಕೊಬ್ ಮುಂತಾದ ಉಕ್ಕಿನ ಕಂಪನಿಗಳು ಭಾರತದ ಉಕ್ಕು ತಯಾರಿಕಾ ಕಂಪನಿಗಳಾದ ಜೆಎಸ್ ಡಬ್ಲ್ಯು, ಟಾಟಾ ಸ್ಟೀಲ್, ಸೇಲ್ ಮತ್ತು ಎಸ್ಸಾರ್ ಇತ್ಯಾದಿ ಕಂಪನಿಗಳೊಂದಿಗೆ ಸಹಭಾಗಿತ್ವ ಮಾಡಿಕೊಂಡಿವೆ.

ಜಪಾನಿನ ಬೃಹತ್ ಉಕ್ಕು ತಯಾರಿಕಾ ಕಂಪನಿ ನಿಪ್ಪೋನ್ ಕಳೆದ ಜನವರಿಯಲ್ಲಿ ಟಾಟಾ ಸ್ಟೀಲ್ ನೊಂದಿಗೆ ಜೆಮ್ಷೆಡ್ ಪುರದಲ್ಲಿ ವಾರ್ಷಿಕ 6 ಲಕ್ಷ ಟನ್ ವಾಹನ ಉಕ್ಕು ಉತ್ಪಾದಿಸುವ ಒಪ್ಪಂದ ಮಾಡಿಕೊಂಡಿದೆ. ಕಳೆದ ವರ್ಷ ಜೆಎಫ್ಇ ಕಂಪನಿಯು ಜೆಎಸ್ ಡಬ್ಲ್ಯುನ ಶೇ. 16ರಷ್ಟು ಇಕ್ವಿಟಿ ಷೇರು ಖರೀದಿಸಿದೆ. ನಿಪ್ಪೋನ್ ಸ್ಟೀಲ್ ರಾಜಸ್ಥಾನದಲ್ಲಿ ಆಟೋ ಸ್ಟೀಲ್ ಪೈಪ್ ಉತ್ಪಾದಿಸಲು ಸುಮಾರು 164 ಕೋಟಿ ರೂ. ಹೂಡಿಕೆ ಮಾಡಿದೆ. ಕಳೆದ ಡಿಸೆಂಬರ್ ನಲ್ಲಿ ಜಪಾನಿನ ಕೊಬ್ ಸ್ಟೀಲ್ ಕಂಪನಿಯೊಂದಿಗೆ ಸೇಲ್ ಮತ್ತು ಎಸ್ಸಾರ್ ಸ್ಟೀಲ್ ಪ್ರತ್ಯೇಕವಾಗಿ ಒಪ್ಪಂದಗಳನ್ನು ಮಾಡಿಕೊಂಡಿವೆ.

More from DriveSpark

Article Published On: Wednesday, March 16, 2011, 11:37 [IST]
English summary
Domestic automobile companies may feel the pinch for auto grade steel as the devastation caused by earthquake and tsunami in Japan. Indian automobile companies require about 4 million tonne of auto-grade steel per annum and more than 50% of the demand is met through imports.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+