ಮಾಲೀಕನ ಸಿಟ್ಟಿಗೆ ಬಲಿಯಾದ ಲಂಬೋರ್ಗಿನಿ ಕಾರ್

Lamborghini owner destroys his Car
ಪಕ್ಕದ ಮನೆಯಲ್ಲಿ(ನಿಮ್ಮ ಮನೆಯಲ್ಲೂ ಆಗಿರಬಹುದು) "ಪಾತ್ರೆ ಬಿಸಾಕುವ ಸದ್ದು" ಕೇಳಿ ಬರುತ್ತಿದ್ದರೆ ಅಲ್ಲಿ ಗಂಡ ಹೆಂಡತಿ ಜಗಳ ಮಾಡುತ್ತಿದ್ದಾರೆ ಅಂತ ಸುಲಭವಾಗಿ ಊಹಿಸಬಹುದು. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಕಂಪ್ಯೂಟರ್ ಪದೇ ಪದೇ ಹ್ಯಾಂಗ್ ಆದರೆ ಕಂಪ್ಯೂಟರ್ ನ್ನು ನೆಲಕ್ಕೆ ಕುಕ್ಕಿ ಬಿಸಾಕಬೇಕೆನಿಸುತ್ತದೆ (ಕೆಲಸ ಕಳೆದು ಕೊಳ್ಳುವ ಭಯದಲ್ಲಿ ಯಾರು ಹಾಗೇ ಮಾಡುವುದಿಲ್ಲ). ಕೆಲವು ಮಕ್ಕಳೂ ಕೋಪಗೊಂಡು ಕೈಗೆ ಸಿಕ್ಕ ಬುಕ್, ಕಂಪಾಸ್ ಬಾಕ್ಸ್, ಲೋಟ ಎಲ್ಲವನ್ನೂ ಬಿಸಕಿ ರಂಪ ಮಾಡುತ್ತಾರೆ.

ದೂರದ ಚೀನಾ ದೇಶದ ಪೂರ್ವ ಭಾಗವೊಂದರಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ಅದು ನಮ್ಮ ದೇಶದಲ್ಲಿ ನಡೆಯುವ ಪಾತ್ರೆಪಗಡೆಯ ಸದ್ದಿನಂತಲ್ಲ. ಇಲ್ಲಿ ಮಾಲೀಕನೊಬ್ಬನ ಕೋಪಕ್ಕೆ ಬಲಿಯಾದದ್ದು ಆತನ ಕೋಟಿ ಕೋಟಿ ದರದ ಲಂಬೋರ್ಗಿನಿ ಗಲಾರ್ಡೊ ಎಂಬ ಕಾರ್! ತನ್ನ ಕಾರ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದು ಕೋಪಗೊಂಡ ಆತ ಸಾರ್ವಜನಿಕವಾಗಿ ಅದನ್ನು ಅಪಚ್ಚಿ, ಪುಡಿಪುಡಿ ಮಾಡಿ ಹಾಕಲು ಕೆಲಸಗಾರರಿಗೆ ಆದೇಶಿಸಿದ. ಕೋಪದಲ್ಲೂ ಇವನ್ನೂ ಸುತ್ತಿಗೆ ಹಿಡಿದುಕೊಂಡು ಕಾರಿಗೆ ಹೊಡೆಯುತ್ತಿದ್ದ ದೃಷ್ಯ ನೋಡಬೇಕಿತ್ತು. ಅಬ್ಬಾ ಆತನ ಕೋಪಕ್ಕೆ ಆ ಕಾರ್ ಚಿಂದಿ ಚಿತ್ರಾನ್ನ.

ಅವನ ಕೋಪಕ್ಕೆ ಬಲಿಯಾದ ಪಾಪದ ಕಾರ್ ಮಾಡಿದ ತಪ್ಪು ಏನೆಂದು ಕೇಳುತ್ತಿದ್ದೀರಾ? ಆತ ಯಾರಿಂದಲೋ ಒಂದು ತಿಂಗಳ ಹಿಂದೆ ಸೆಕೆಂಡ್ ಹ್ಯಾಂಡ್ ಲಂಬೋರ್ಗಿನಿ ಗಲಾರ್ಡೊ ಕಾರ್ ಖರೀದಿಸಿದ. ಖರೀದಿಸಿ ಒಂದು ತಿಂಗಳಾಗಿಲ್ಲ. ಆಗಲೇ ಅದರ ಎಂಜಿನ್ ಗೆ ಸಂಬಂಧಪಟ್ಟ ಯಾವುದೋ ಸಮಸ್ಯೆ ಕಂಡುಬಂತು(ಇದಕ್ಕೆ ಹೇಳುವುದು ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವಾಗ ಎಚ್ಚರಿಕೆ ಬೇಕು ಅಂತ). ಅದನ್ನು ಸರಿಪಡಿಸಿಕೊಡುವಂತೆ ಆತ ಕಂಪನಿಗೆ ತಿಳಿಸಿದ. ಡೀಲರ್ ಮೂಲಕ ಗ್ಯಾರೇಜ್ ತಲುಪಿತು ಆ ಕಾರ್. ಆದರೆ ಅವರಿಗೆ ಅದನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ರಿಪೇರಿ ಸಮಯದಲ್ಲಿ ಆ ದುಬಾರಿ ಕಾರಿನ ಬಂಪರ್ ಮತ್ತು ಚಾಸೀಸ್ ಗೂ ತುಸು ಡ್ಯಾಮೇಜ್ ಆಯ್ತಂತೆ!

ಆಗ ನೋಡಿ ಆ ಕಾರ್ ಮಾಲೀಕನಿಗೆ ಎಲ್ಲಿತ್ತೋ ಸಿಟ್ಟು. ಜಮಧಗ್ನಿಯ ಅವತಾರವನ್ನೇ ತಾಳಿದ. ಕೋಪದಲ್ಲೂ ಒಂದಿಷ್ಟು ತಾಳ್ಮೆ(?) ವಹಿಸಿ ವಿಶ್ವ ಗ್ರಾಹಕರ ದಿನಕ್ಕೆ ಕಾದು ಬಿಟ್ಟ. ಅಂದು ಒಂದಿಷ್ಟು ಜನ ಕೆಲಸಗಾರರನ್ನು ಕರೆಸಿ "ಪುಡಿ ಮಾಡ್ರಿ" ಅಂತ ಆದೇಶ ನೀಡಿದ. ತಾನು ಸುತ್ತಿಗೆ ತೆಗೆದುಕೊಂಡು ತನ್ನ ಲಂಬೊರ್ಗಿನಿ ಕಾರನ್ನು ಪುಡಿ ಮಾಡಲು ಆರಂಭಿಸಿದ. ಈ ದೃಷ್ಯ ನೋಡಲು ಸಾಕಷ್ಟು ಜನರು ಸೇರಿದ್ದರಂತೆ. ನೋಡು ನೋಡುತ್ತಿದ್ದಂತೆ ಆ ಕಾರ್ ಚಿಂದಿ ಚಿತ್ರಾನ್ನವಾಯಿತು. ಈಗ ಅವನ ಕೋಪ ತಣ್ಣಗಾಗಿರಬಹುದು ಅಂತ ಅಂದುಕೊಳ್ಳೋಣ.

More from DriveSpark

Article Published On: Thursday, March 17, 2011, 15:03 [IST]
English summary
A millionaire entrepreneur in China was protesting at his local dealer the £465,000 Gallardo's engine packed up within a month after buying. The garage failed to fix the fault and damaged the bumper and chassis in the process. After he hired a team of workers to smash his Car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+