ಮಧ್ಯಮ ವರ್ಗದ ಗ್ರಾಹಕರಿಗೆ ರೆನಾಲ್ಟ್ ನಿಂದ 5 ಹೊಸ ಕಾರ್

"2015ಕ್ಕೆ ಮುನ್ನ ಕಂಪನಿಯು ಸುಮಾರು 4,500 ಕೋಟಿ ರೂ. ಹೂಡಿಕೆ ಮಾಡಲಿದೆ. ಆರಂಭದಲ್ಲಿ ಕಂಪನಿಯು ಫ್ಯೂಯೆನ್ಸ್ ಕಾರನ್ನು ಹೊರತರಲಿದೆ" ಎಂದು ರೆನಾಲ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮೆರ್ಕ್ ನಾಸೀಫ್ ಹೇಳಿದ್ದಾರೆ. ಭಾರತ, ರಷ್ಯಾ ಮತ್ತು ಬ್ರೆಝಿಲ್ ದೇಶಗಳು ಕಂಪನಿಯ ವಿಸ್ತರಣಾ ಯೋಜನೆಯಲ್ಲಿರುವ ಅಗ್ರ ರಾಷ್ಟ್ರಗಳಾಗಿವೆ ಎಂದರು. ಇದರೊಂದಿಗೆ ಕಂಪನಿಯು ದೇಶದಲ್ಲಿ ಸುಮಾರು 10ಕ್ಕೂ ಹೆಚ್ಚು ಡೀಲರ್ ಷಿಪ್ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿದೆ. ಕಂಪನಿಯು ದೇಶದ ಮಧ್ಯಮ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಕಾರ್ ಬಿಡುಗಡೆ ಮಾಡಲಿದೆಯಂತೆ!


Click it and Unblock the Notifications








