ಸಲ್ಮಾನ್ ಖಾನ್ v/s ಶಾರೂಖ್ ಖಾನ್ ಸವಾರಿ ಹುಚ್ಚು!!

Salman Khan
ಇದು ಬಾಲಿವುಡ್ ನ ಜನಪ್ರಿಯ ಇಬ್ಬರು ನಟರ "ಸವಾರಿ"ಯ ಕ್ರೇಜ್ ನ ಕತೆ. ಸಲ್ಮಾನ್ ಖಾನ್ ಮತ್ತು ಶಾರೂಖ್ ಖಾನ್ ಇವರಿಬ್ಬರಲ್ಲಿ ಯಾರಿಗೆ ಕಾರ್ ಕ್ರೇಝ್ ಹೆಚ್ಚಿದೆ? ಇವರಿಬ್ಬರು ಯಾವ ರೀತಿಯ ಕಾರ್ ಡ್ರೈವ್ ಮಾಡೋಕೆ ಇಷ್ಟಪಡುತ್ತಾರೆ ಅಂತ ಹುಡುಕ ಹೊರಟರೆ ಕೆಲವು ಇಂಟ್ರೆಸ್ಟಿಂಗ್ ವಿಷ್ಯಗಳು ನಮ್ಮ ಮುಂದೆ ಹಾದು ಹೋಗುತ್ತವೆ.

ಬಾಲಿವುಡ್ ನ ರೋಮಾನ್ಸ್ ನಟ ಶಾರೂಕ್ ಲಕ್ಷ ಲಕ್ಷ ಸಂಖ್ಯೆಯ ಅಭಿಮಾನಿಗಳ ಮನಗೆದ್ದಿದ್ದಾನೆ. ನಿಮಗೆ ಗೊತ್ತೆ? ಶಾಲಾ ದಿನಗಳಲ್ಲಿ ಆತನಲ್ಲಿದ್ದದ್ದು ಮಾರುತಿ ವ್ಯಾನ್. ಆದರೆ ಈಗ ಸೌಂದರ್ಯದಲ್ಲಿ ಬಾಲಿವುಡ್ ನಟಿಯರಿಗಿಂತ ಕಮ್ಮಿಯಿಲ್ಲದಂತಿರುವ ಸಾಕಷ್ಟು ಬ್ಯೂಟಿ ಕಾರ್ ಗಳು ಆತನ ಗ್ಯಾರೇಜ್ ನಲ್ಲಿ ಸಾಲಾಗಿವೆ. ಮಿತ್ಸುಬಿಸಿ ಪಜೆರೊ, ಆಡಿ, ಬಿಎಂಡಬ್ಲ್ಯು ಮತ್ತು ರೋಲ್ಸ್ ರಾಯ್ಸ್ ಸೇರಿದಂತೆ ಹಲವು ಐಷಾರಾಮಿ ಕಾರ್ ಗಳ ಮಾಲಿಕನಾತ!!

ಆತನಲ್ಲಿ ಹಲವು ಬಿಎಂಡಬ್ಲ್ಯು ಸೀರಿಸ್ ಕಾರ್ ಗಳಿವೆ. ಸುಮಾರು 2 ದಶಕಗಳ ಕಾಲ ಹ್ಯುಂಡೈ ಬ್ರಾಂಡ್ ಕಾರೊಂದನ್ನೂ ಬಳಸುತ್ತಿದ್ದ. ಆತನಲ್ಲಿ ಬಿಎಂಡಬ್ಲ್ಯು 7 ಸೀರಿಸ್(ದರ ಸುಮಾರು 1.25 ಕೋಟಿ ರೂ.), 6 ಸೀರಿಸ್( ದರ ಸುಮಾರು 85 ಲಕ್ಷ ರೂ.) ಕಾರ್ ಗಳಿವೆ. ರೋಮಾನ್ಸ್ ಕಿಂಗ್ ಗೆ ಇಷ್ಟು ಕಾರ್ ಗಳು ಸಾಕಾಗುವುದಿಲ್ಲ. ಆತನಲ್ಲಿ ಸೂಪರ್ ಲಕ್ಷುರಿ ಸೆಡಾನ್ ಕಾರ್ ಆಡಿ ಎ6, ಒಂದು ಲ್ಯಾಂಡ್ ಕ್ರೂಸರ್ ಕಾರ್, ಮತ್ತೊಂದು ರೋಲ್ಸ್ ರಾಯ್ಸ್, ಇನ್ನೊಂದು ಬಿಳಿ ಬಣ್ಣದ ಕಾಂಟಿನೆಂಟಲ್ ಜಿಟಿ ಮತ್ತು ಬಿಎಂಡಬ್ಲ್ಯು ಕನ್ವರ್ಟಿಬಲ್ ಕಾರುಗಳಿವೆ.

ಮತ್ತೊಂದು ವಿಷ್ಯ ಗೊತ್ತಾ? ಬಾಲಿವುಡ್ ಬಾದಶನಿಗೆ ಇಷ್ಟೆಲ್ಲ ಕಾರಿದ್ದರೂ ಕ್ರೇಝ್ ಇನ್ನೂ ಕಡಿಮೆಯಾಗಿಲ್ಲ. ಅಬ್ಬಾ...! ವಾಹನ ಲೋಕದ ಕೆಟ್ಟ ಹುಡುಗ ಬುಗಾಟಿ ಮೇಲೂ ಆತನ ಕಣ್ಣು ಬಿದ್ದಿದೆ. ಬುಗಾಟಿ ವೆರೊನ್ ಕಾರ್ ನ್ನು ಖರೀದಿಸುವ ಆಲೋಚನೆಯಲ್ಲಿ ಆತನಿದ್ದಾನೆ ಅಂತ ರೂಮರ್ ಗಳಿವೆ. ಇವನ ಕತೆ ಇಷ್ಟಕ್ಕೆ ಮುಗಿಯೋದಿಲ್ಲ. ಆತ ತನ್ನ ಮಕ್ಕಳಿಬ್ಬರಾದ ಆರ್ಯನ್ ಮತ್ತು ಸುಹಾನ ಅವರಿಗೆ ಎರಡು ಐಷಾರಾಮಿ ಕಾರ್ ಗಿಫ್ಟ್ ಕೊಟ್ಟಿದ್ದಾನೆ. ಸುಮಾರು 38 ಲಕ್ಷ ರೂ.ವಿನ ಹೊಸ ಆಡಿ ಎ6 ಕಾರನ್ನು ಮಕ್ಕಳಿಬ್ಬರಿಗೆ ಉಡುಗೊರೆ ನೀಡಿದ್ದಾನೆ. ತನ್ನ ಸ್ನೇಹಿತ ಮತ್ತು ಸಿನಿಮಾ ನಿರ್ದೇಶಕನಾಗಿರುವ ಫಾರಾಹ ಖಾನ್ ಅವರಿಗೆ "ಓಂ ಶಾಂತಿ ಓಂ" ಚಿತ್ರ ಭರ್ಜರಿ ಗೆಲುವ ಪಡೆದ ಖುಷಿಯಲ್ಲಿ ಬಿಳಿ ಬಣ್ಣದ ಮರ್ಸಿಡಿಸ್ ಬೆಂಜ್ ಎಸ್350 ಕಾರೊಂದನ್ನು ಉಡುಗೊರೆ ನೀಡಿದ್ದಾನೆ.

ಸಲ್ಮಾನ್ ಗ್ಯಾರೇಜ್ ನಲ್ಲಿ: ಕಾರ್ ಹುಚ್ಚು ಸಲ್ಮಾನ್ ಖಾನ್ ಗೂ ಬೇಕಾದಷ್ಟಿದೆ. ಈತನಲ್ಲೂ ಸಾಕಷ್ಟು ಪ್ರಿಮಿಯಂ ಕಾರ್ ಗಳಿವೆ. ಇವನಿಗೆ ಬಿಎಂಡಬ್ಲ್ಯು ಕಾರ್ ಗಳೆಂದರೆ ಹುಚ್ಚು ಪ್ರೀತಿ. ಈ ಕಂಪನಿಯ ನಾಲ್ಕು ಕಾರ್ ಗಳು ಇವನ ಗ್ಯಾರೇಜ್ ನಲ್ಲಿ ಸಾಲಾಗಿವೆ. ಇಷ್ಟೇ ಅಲ್ಲ ಒಂದು ಲೆಕ್ಸಾಸ್ ಕಾರ್, ಇನ್ನೊಂದು ಲ್ಯಾಂಡ್ ಕ್ರೂಷರ್ ಮತ್ತೊಂದು ಮರ್ಸಿಡಿಸ್ ಬೆಂಝ್ ಕಾರ್ ಕೂಡ ಇದೆ. ಭಾರತದಲ್ಲಿ ಸುಮಾರು 71 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗಿನ ದರದಲ್ಲಿ ದೊರಕುವ ಆಡಿ ಎ8 ಕಾರ್ ನ್ನೂ ಆತ ಖರೀದಿಸಿದ್ದಾನೆ.

ಸಲ್ಮಾನ್ ಖಾನ್ ಮತ್ತು ಶಾರೂಕ್ ಖಾನ್ ಇಬ್ಬರಿಗೂ ಕಾರ್ ಕ್ರೇಝ್ ಸಾಕಷ್ಟಿದೆ. ಇಬ್ಬರಿಗೂ ಲಕ್ಷುರಿ ಕಾರ್ ಗಳೇ ಬೇಕು. ಮತ್ತೊಂದು ವಿಷ್ಯವೆಂದರೆ ಇಬ್ಬರಿಗೂ ಹೆಚ್ಚು ಇಷ್ಟವಾದ ಬ್ರಾಂಡ್ ಅಂದ್ರೆ ಬಿಎಂಡಬ್ಲ್ಯು.

More from DriveSpark

Article Published On: Friday, March 18, 2011, 10:56 [IST]
English summary
Salman Khan and Shah Rukh Khan loves premium Cars. Their love for cars and the class-apart collection was mind blowing. Shah Rukh Khan owned multiple luxury cars including Mitsubishi Pajero, Audi, BMW and Rolls Royce. Salman Khan, owns some of the most premium luxuries Includes a Lexus, a Land Cruiser, Audi A8 and a Mercedes-Benz. Salman especially loves his BMW cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+