ಸಲ್ಮಾನ್ ಖಾನ್‌ ಅವರಿಗೆ ದುಬಾರಿ ಗಿಫ್ಟ್ ನೀಡಿದ ಶಾರುಖ್

Written By:

ಶಾರುಖ್ ಖಾನ್ ಅವರು ಉಡುಗೊರೆಯಾಗಿ ನೀಡಿದ ಹೊಸ ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಸಲ್ಮಾನ್ ಖಾನ್ ಇತ್ತೀಚಿಗೆ ಕಾಣಿಸಿಕೊಂಡಿದ್ದಾರೆ.

ಖ್ಯಾತ ನಟ ಶಾರುಖ್ ಖಾನ್‌ರವರ ಮುಂದಿನ ಚಿತ್ರದಲ್ಲಿ ಅಭಿನಯಿಸುವುದಕ್ಕಾಗಿ ಈ ಉಡುಗೊರೆಯನ್ನು ಸಲ್ಲು ಪಡೆದಿದ್ದರೆ ಎನ್ನಲಾಗಿದ್ದು, ಸೂಪರ್ ಸ್ಟಾರ್ ಈ ಕಾರಿನಲ್ಲಿ ಪ್ರಯಾಣ ಮಾಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಗುರುವಾರ ಸಂಜೆ ಮುಂಬೈಯಲ್ಲಿ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿದ ಶಾರೂಖ್,ಈ ಹೊಸ ಬ್ರಾಂಡ್ ಮರ್ಸಿಡಿಸ್ ಬೆಂಝ್ ಕಾರನ್ನು ಕೊಡುಗೆಯಾಗಿ ನೀಡಿದ್ದಾರೆ.

ಸಲ್ಮಾನ್ ಅವರ ಗೆಳತಿ ಎಂದು ಹೇಳಲಾಗುತ್ತಿರುವ ಉಲಿಯಾ ವಂಟೂರ್ ಮತ್ತು ಸೋನಾಕ್ಷಿ ಸಿನ್ಹಾ ಜೊತೆ ಬಾಂದ್ರಾ ವ್ಯಾಪ್ತಿಯಲ್ಲಿ ಬ್ಯಾಡ್ ಬಾಯ್ ಕಾಣಿಸಿಕೊಂಡಿದ್ದಾರೆ.

ಆನಂದ್ ಎಲ್ ರಾಯ್ ಅವರು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರು ಸಹ ನಟಿಸಲು ಒಪ್ಪಿಕೊಂಡಿರುವುದಕ್ಕೆ ಹೆಚ್ಚು ಸಂತೋಷಗೊಂಡಿರುವ ಶಾರುಖ್ ಚಿತ್ರದ ಮುಂಗಡ ಹಣದ ಬದಲಾಗಿ ಈ ನವೀನ ಕಾರನ್ನು ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಶಾರುಖ್ ಖಾನ್ ಅವರ ಇನ್ನೂ ಹೆಸರಿಡದ ಚಿತ್ರದಲ್ಲಿ ಬರುವಂತಹ ಚಿಕ್ಕ ತುಣುಕಿನಲ್ಲಿ ಅಥವಾ ಹಾಡಿನಲ್ಲಿ ಸಲ್ಮಾನ್ ನಟಿಸುತ್ತಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಉಡುಗೊರೆಯನ್ನು ಶಾರುಖ್ ಪ್ರೀತಿಯಿಂದ ನೀಡಿದ್ದಾರೆ.

ಸಲ್ಮಾನ್ ಖಾನ್ ಅವರು ಚಿತ್ರದ ಹಾಡಿನ ಚಿತ್ರೀಕರಣಕ್ಕೆ ತೆರಳಿದಾಗ, ಶಾರುಖ್ ಈ ಹೊಸ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.

ಏತನ್ಮಧ್ಯೆ, ಸಲ್ಮಾನ್ ಖಾನ್ ಅವರ ಇತ್ತೀಚಿನ ಬಿಡುಗಡೆಯಾದ 'ಟ್ಯೂಬ್‌ಲೈಟ್' ಚಿತ್ರದಲ್ಲಿ ಶಾರುಖ್ ಖಾನ್ ಜಾದೂಗಾರನ ಪಾತ್ರವನ್ನು ನಿರ್ವಹಿಸಿದ್ದಾರೆ.

English summary
Read in Kannada about Salman Khan was spotted travelling in a new Mercedes-Benz, which was apparently gifted to him by Shah Rukh Khan for starring in his next film
Story first published: Friday, July 7, 2017, 17:44 [IST]
Please Wait while comments are loading...

Latest Photos