ಹಿಟ್ ಆ್ಯಂಡ್ ರನ್ ಕೇಸ್; ಸಲ್ಮಾನ್ ಓಡಿಸಿದ ಕಾರು ಯಾವುದು?

Written By:

2002ರ 'ಹಿಟ್ ಆ್ಯಂಡ್ ರನ್' ಅಪಘಾತ ಪ್ರಕರಣವೊಂದರಲ್ಲಿ ಸಿಕ್ಕಿ ಬಿದ್ದಿರುವ ಬಾಲಿವುಡ್ ಸೂಪರ್ ಸ್ಟಾರ್ ಅವರಿಗೆ 13 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಮುಂಬೈನ ಸೆಷನ್ಸ್ ನ್ಯಾಯಾಲಯವು 2015 ಮೇ 6, ಬುಧವಾರದಂದು ದೋಷಿ ಎಂದು ಪರಿಗಣಿಸಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಸಲ್ಮಾನ್ ಖಾನ್ ವಿಶೇಷ ಪುಟಕ್ಕೆ ಭೇಟಿ ಕೊಡಿ

2002ರ ಸೆಪ್ಟೆಂಬರ್ 8ರಂದು ರಾತ್ರಿ ಮುಂಬೈನ ಬಾಂಧ್ರಾ ಹೊರವಲಯದ ಬೇಕರಿಯೊಂದರ ಪಾಚಚಾರಿ ರಸ್ತೆಯಲ್ಲಿ ಮಲಗಿದ್ದವರ ಮೇಲೆ ಕಾರು ಹರಿಸಿ ಸಲ್ಮಾನ್ ಪರಾರಿಯಾಗಿದ್ದರು. ಕಾರು ಚಾಲನೆ ಮಾಡುವ ವೇಳೆ ಸಲ್ಮಾನ್ ಮದ್ಯ ಸೇವಿಸಿದ್ದರು ಎಂಬುದು ವಿಚಾರಣೆ ವೇಳೆ ಸಾಬೀತಾಗಿದೆ. ಪ್ರಕರಣದಲ್ಲಿ ಓರ್ವ ಸಾವನ್ನಪ್ಪಿದ್ದಲ್ಲದೆ ನಾಲ್ವರು ಗಾಯಗೊಂಡಿದ್ದರು. ಖ್ಯಾತ ನಟನ ಬಳಿ ಚಾಲನಾ ಪರವಾನಗಿ ಇಲ್ಲದೆ ಅಮಿತ ವೇಗದಲ್ಲಿ ಚಾಲನೆ ಮಾಡಿರುವುದು ಪ್ರಕರಣ ಇನ್ನಷ್ಟು ಗಂಭೀರ ಸ್ವರೂಪ ಪಡೆಯಲು ಕಾರಣವಾಗಿತ್ತು.

ಟೊಯೊಟಾ ಲ್ಯಾಂಡ್ ಕ್ರೂಸರ್

ಟೊಯೊಟಾ ಲ್ಯಾಂಡ್ ಕ್ರೂಸರ್

'ಬೀಯಿಂಗ್ ಹ್ಯೂಮನ್' ಸಹಾಯಾರ್ಥ ಸಂಸ್ಥೆಯನ್ನು ಹುಟ್ಟು ಹಾಕಿರುವ ಸಲ್ಮಾನ್ ಅಂದು ಚಾಲನೆ ಮಾಡಿರುವ ಕಾರೇ ಟೊಯೊಟಾ ಲ್ಯಾಂಡ್ ಕ್ರೂಸರ್ ಆಗಿದೆ. ಇದು ಸರಿ ಸುಮಾರು ಒಂದು ಕೋಟಿ ರು.ಗಳಷ್ಟು ದುಬಾರಿಯಾಗಿದೆ.

ಆಡಿ ಆರ್8

ಆಡಿ ಆರ್8

ಸಲ್ಮಾನ್ ಬಳಿ ದುಬಾರಿ ಕಾರು, ಬೈಕ್ ಗಳಿದ್ದು, ಐಷಾರಾಮಿ ವಾಹನಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಅವರ ಬಳಿಯಿರುವ ಆಡಿ ಆರ್8 1.4 ಕೋಟಿ ರು.ಗಳಷ್ಟು ದುಬಾರಿಯಾಗಿದೆ.

ಆಡಿ ಆರ್ ಎಸ್7

ಆಡಿ ಆರ್ ಎಸ್7

ಇನ್ನು 1.28 ಕೋಟಿ ರು. ಖರ್ಚು ಮಾಡಿ ಆಡಿ ಆರ್ ಎಸ್7 ಕಾರನ್ನು ಸಲ್ಮಾನ್ ಖರೀದಿಸಿದ್ದಾರೆ.

ಆಡಿ ಕ್ಯೂ7

ಆಡಿ ಕ್ಯೂ7

ಈ ನಡುವೆ ಬಾಡಿ ಗಾರ್ಡ್ ಚಿತ್ರದ ಯಶಸ್ಸಿಗಾಗಿ ಆಡಿ ಕ್ಯೂ7 ಉಡುಗೊರೆಯ ರೂಪದಲ್ಲಿ ಸಲ್ಮಾನ್ ಅವರನ್ನು ಬಂದು ಸೇರಿತ್ತು.

ಬಿಎಂಡಬ್ಲ್ಯು ಎಕ್ಸ್6

ಬಿಎಂಡಬ್ಲ್ಯು ಎಕ್ಸ್6

ಕೇವಲ ಆಡಿ ಮಾತ್ರವಲ್ಲದೆ ಜರ್ಮನಿಯ ಮಗದೊಂದು ಐಷಾರಾಮಿ ಸಂಸ್ಥೆ ಬಿಎಂಡಬ್ಲ್ಯು ಕಾರುಗಳನ್ನು ಸಲ್ಮಾನ್ ಹೊಂದಿದ್ದಾರೆ. ಇವುಗಳಲ್ಲಿ 50 ಲಕ್ಷ ರು.ಗಳಷ್ಟು ದುಬಾರಿಯೆ ಬಿಎಂಡಬ್ಲ್ಯು ಎಕ್ಸ್6 ಒಂದಾಗಿದೆ.

ಬಿಎಂಡಬ್ಲ್ಯು ಎಂ5

ಬಿಎಂಡಬ್ಲ್ಯು ಎಂ5

ಬಿಎಂಡಬ್ಲ್ಯು ಎಂ5 ಸಲ್ಮಾನ್ ಅವರ ಮಗದೊಂದು ಐಷಾರಾಮಿ ಕಾರು ಕಲೆಕ್ಷನ್ ಆಗಿದ್ದು 50 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ಲೆಕ್ಸಸ್ ಎಲ್ ಎಕ್ಸ್570

ಲೆಕ್ಸಸ್ ಎಲ್ ಎಕ್ಸ್570

ಬರೋಬ್ಬರಿ 50 ಲಕ್ಷ ರು.ಗಳಷ್ಟು ಬೆಲೆ ಬಾಳುವ ಲೆಕ್ಸಸ್ ಎಲ್ ಎಕ್ಸ್570 ಕಾರನ್ನು ಸಲ್ಮಾನ್ ತಮ್ಮ ಬಳಿ ಇರಿಸಿಕೊಂಡಿದ್ದಾರೆ.

ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್

ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್

ಇನ್ನು 1.5 ಕೋಟಿ ರು.ಗಳಷ್ಟು ದುಬಾರಿಯ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಕಾರನ್ನು ಸಲ್ಮಾನ್ ನೆಚ್ಚಿಕೊಂಡಿರುತ್ತಾರೆ.

ಲ್ಯಾಂಡ್ ರೋವರ್ ಲ್ಯಾಂಡ್ ರೋವರ್ ವೋಜ್

ಲ್ಯಾಂಡ್ ರೋವರ್ ಲ್ಯಾಂಡ್ ರೋವರ್ ವೋಜ್

ಐಷಾರಾಮಿ ಎಸ್ ಯುವಿ ಲ್ಯಾಂಡ್ ರೋವರ್ ಲ್ಯಾಂಡ್ ರೋವರ್ ವೋಜ್ ಕೂಡಾ ಸಲ್ಮಾನ್ ಪ್ರೀತಿಗೆ ಪಾತ್ರವಾಗಿದೆ.

ಸುಜುಕಿ ಇಟ್ರುಡರ್ ಎಂ1800 ಆರ್ ಝಡ್

ಸುಜುಕಿ ಇಟ್ರುಡರ್ ಎಂ1800 ಆರ್ ಝಡ್

ಕೇವಲ ಕಾರು ಮಾತ್ರವಲ್ಲದೆ ಹೈ ಎಂಡ್ ಬೈಕ್ ಗಳು ಸಲ್ಮಾನ್ ಬಳಿಯಿದೆ. ಸುಜುಕಿ ಸಂಸ್ಥೆಯ ಮುಖ್ಯ ಪ್ರಚಾರ ರಾಯಭಾರಿ ಕೂಡಾ ಆಗಿರುವ ಸಲ್ಮನ್ ಅವರು ಸುಜುಕಿ ಇಟ್ರುಡರ್ ಎಂ1800 ಆರ್ ಝಡ್ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಇದು 16 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

ಸುಜುಕಿ ಜಿಎಸ್ ಎಕ್ಸ್-ಆರ್ 1000ಝಡ್

ಸುಜುಕಿ ಜಿಎಸ್ ಎಕ್ಸ್-ಆರ್ 1000ಝಡ್

ಇನ್ನು ಹೊಚ್ಚ ಹೊಸ 16 ಲಕ್ಷ ರು.ಗಳಷ್ಟು ಬೆಲೆ ಬಾಳುವ ಸುಜುಕಿ ಜಿಎಸ್ ಎಕ್ಸ್-ಆರ್ 1000ಝಡ್ ಸಹ ಸಲ್ಮಾನ್ ಖರೀದಿರಿಸಿದ್ದಾರೆ.

ಸುಜುಕಿ ಹಯಾಬುಸ

ಸುಜುಕಿ ಹಯಾಬುಸ

ಸಹಜವಾಗಿಯೇ ಸುಜುಕಿ ಬೈಕ್ ಪ್ರೇಮ ಸಲ್ಮಾನ್ ಅವರನ್ನು ಆವರಿಸಿದೆ ಎಂದು ಹೇಳಬಹುದು. ಇಲ್ಲಿ ಸುಜುಕಿ ಹಯಾಬುಸ 13 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

ಯಮಹಾ ಆರ್1

ಯಮಹಾ ಆರ್1

ಇನ್ನು ಯಮಹಾ ಮೇಲೂ ತಮ್ಮ ಪ್ರೀತಿಯನ್ನು ತೋರಿರುವ ಸಲ್ಮಾನ್ ಆರ್1 ಖರೀದಿಸಿದ್ದಾರೆ. ಈಗ ಈ ಎಲ್ಲ ಐಷಾರಾಮಿ ಸೌಲಭ್ಯಗಳನ್ನು ತೊರೆದು ಸಲ್ಮಾನ್ ಜೈಲುವಾಸ ಅನುಭವಿಸಬೇಕಾಗಿದೆ.

ಐಷಾರಾಮಿ ಗಾಡಿ

ಐಷಾರಾಮಿ ಗಾಡಿ

ಇವೆಲ್ಲದಕ್ಕಿಂತಲೂ ಮಿಗಿಲಾಗಿ ಬಾಲಿವುಡ್ ಬಾದ್‌ಷಾ ಶಾರೂಕ್ ಖಾನ್ ತರಹನೇ ಸಲ್ಮಾನ್ ಸಹ ತನ್ನ ಖಾಸಗಿ ಬಳಕೆಗಾಗಿ ಐಷಾರಾಮಿ ವ್ಯಾನಿಟಿ ವ್ಯಾನ್‌ವೊಂದನ್ನು ತಮ್ಮ ಬಳಿ ಇರಿಸಿಕೊಂಡಿದ್ದಾರೆ.

ಸಿಕ್ಸ್ ಪ್ಯಾಕ್ ವೀರ ಸಲ್ಲು ಬಾಡಿಗೆ ತಕ್ಕ ಲಗ್ಷುರಿ ಬಸ್

English summary
Salman khan's Most Expensive Car & Bike Collections
Story first published: Thursday, May 7, 2015, 12:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark