ದೇವರು ಕೊಟ್ಟ ತಂಗಿ; ಅರ್ಪಿತಾಗೆ ಸಲ್ಲು 4.5 ಕೋಟಿಯ ಕಾರು ಗಿಫ್ಟ್
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತಾ ಮದುವೆಗೆ ಇಡೀ ಚಲನಚಿತ್ರ ರಂಗವೇ ಸಾಕ್ಷಿಯಾಗಿದೆ. ಬಹುಶ: ಸೂಪರ್ ಸ್ಟಾರ್ ಓಬ್ಬರ ತಂಗಿ ಇದಕ್ಕಿಂತ ಮಿಗಿಲಾಗಿ ಬೇರೆ ಏನನ್ನೂ ನಿರೀಕ್ಷೆ ಮಾಡುವಂತಿಲ್ಲ.
ಹೌದು, ಹಸೆಮಣೆ ಏರಿರುವ ತಮ್ಮ ಪ್ರೀತಿಯ ತಂಗಿ ಅರ್ಪಿತಾ ಅವರಿಗೆ 16 ಕೋಟಿ ರು.ಗಳ ಮನೆ ನೀಡಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಇದೀಗ ಮತ್ತೊಂದು ಉಡುಗೊರೆ ನೀಡಿದ್ದಾರೆ. ಅದುವೇ ನಾಲ್ಕು ವರೆ ಕೋಟಿ ಬೆಲೆ ಬಾಳುವ ರೋಲ್ಸ್ ರಾಯ್ಸ್ ಫಾಟಂ ಕಾರು.

ದೇವರು ಕೊಟ್ಟ ತಂಗಿ ರೂಪದಲ್ಲಿ ಸ್ವೀಕರಿಸಿರುವ ಅರ್ಪಿತಾ ಹಾಗೂ ಆಯುಷ್ ದಂಪತಿಗೆ ಸಲ್ಮಾನ್ ಖಾನ್ ಅವರು ನಾಲ್ಕು ವರೆ ಕೋಟಿ ರುಪಾಯಿಗಳಷ್ಟು ದುಬಾರಿಯ ರೋಲ್ಸ್ ರಾಯ್ಸ್ ಫಾಟಂ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ವರದಿಗಳ ಪ್ರಕಾರ ಬಿಳಿ ಬಣ್ಣದ ರೋಲ್ಸ್ ರಾಯ್ಸ್ ಫಾಟಂ ಕಾರಿನ ಕೀ ಹಸ್ತಾಂತರಿಸಿರುವ ಸಲ್ಮಾನ್ ಕಣ್ಣಲ್ಲಿ ಆನಂದ ಭಾಷ್ಪ ಸುರಿಯುತ್ತಿತ್ತು.

ಸಲ್ಮಾನ್ ತಂಗಿ ಅರ್ಪಿತಾ ಹಾಗೂ ಆಯುಷ್ ನವೆಂಬರ್ 18ರಂದು ಹೈದರಾಬಾದ್‌ನ ತಾಜ್ ಫಾಲಕ್‌ನುಮಾ ಅರಮನೆಯಲ್ಲಿ ವಿವಾಹಿತರಾಗಿದ್ದರು.

ರೋಲ್ಸ್ ರಾಯ್ಸ್ ಬ್ರಿಟನ್‌ನ ಐಕಾನಿಕ್ ಕಾರು ಸಂಸ್ಥೆಯಾಗಿದೆ. ಅಂತೆಯೇ ರೋಲ್ಸ್ ರಾಯ್ಸ್ ಫಾಟಂ ಅತಿ ದುಬಾರಿ ಕಾರುಗಳಲ್ಲಿ ಒಂದಾಗಿದ್ದು, ಸೆಲೆಬ್ರಿಟಿಗಳಂತಹ ಅತಿ ಶ್ರೀಮಂತ ವ್ಯಕ್ತಿಗಳು ಮಾತ್ರ ಹೊಂದಿರುತ್ತಾರೆ.

ಭಾರತದಲ್ಲೂ ರೋಲ್ಸ್ ರಾಯ್ಸ್ ಫಾಟಂ ಮಾರಾಟದಲ್ಲಿದೆ. ಇದು ಎರಡು ಮಾದರಿ ಹಾಗೂ ಒಂದು ಎಂಜಿನ್ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ರೋಲ್ಸ್ ರಾಯ್ಸ್ ಫಾಟಂ ಕಾರು 6749 ಸಿಸಿ, 12 ಸಿಲಿಂಡರ್ ವಿ12 ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಹಾಗೆಯೇ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರಲಿದೆ.

ನಿರ್ವಹಣೆ
ಐದು ಸೀಟು ವಿನ್ಯಾಸಿತ ರೋಲ್ಸ್ ರಾಯ್ಸ್ ಫಾಟಂ 453 ಅಶ್ವಶಕ್ತಿ (720 ಎನ್‌ಎಂ ಟಾರ್ಕ್) ಸಾಮರ್ಥ್ಯ ಹೊಂದಿದೆ. ಅಲ್ಲದೆ ರಿಯರ್ ವೀಲ್ ಡ್ರೈವ್‌ಗೆ ಶಕ್ತಿ ವಿತರಿಸುತ್ತದೆ.

ಇನ್ನು ವೈಶಿಷ್ಟ್ಯಗಳನ್ನು ಗಮನಿಸಿದರೂ ರೋಲ್ಸ್ ರಾಯ್ಸ್ ಫಾಟಂ ಅತ್ಯುತ್ತಮ ಚಾಲನಾ ಅನುಭವವನ್ನು ನೀಡುತ್ತದೆ. ಇದು ಎಬಿಎಸ್, ಇಬಿಡಿ, ಇಎಸ್‌ಪಿ ಸುರಕ್ಷತೆಯ ಜೊತೆಗೆ ನೇವಿಗೇಷನ್ ಸಿಸ್ಟಂಗಳನ್ನು ಹೊಂದಿರುತ್ತದೆ.

ಇಲ್ಲಿ ಎಲ್ಲ್ಲಸೋದರಿಯರು ಆಶಿಸುವ ಏಕ ಮಾತ್ರ ವಿಚಾರವೆಂದರೆ ಅಣ್ಣನೆಂದರೆ ಸಲ್ಮಾನ್ ತರಹನೇ ಇರಬೇಕು. ಅಲ್ಲವೇ?


Click it and Unblock the Notifications








