ವರ್ಷಕ್ಕೆ 2.1 ಲಕ್ಷ ಕಾರ್ ಉತ್ಪಾದನೆ: ಟೊಯೊಟಾ ಕಿರ್ಲೊಸ್ಕರ್

ಕಂಪನಿಯ ಪ್ರಮುಖ ಬ್ರಾಂಡ್ ಗಳಾದ ಫಾರ್ಚ್ಯುನರ್, ಕೊರೊಲಾ ಆಲ್ಟಿಸ್, ಎಟಿಯೋಸ್ ಮತ್ತು ಇನ್ನೋವಾ ಕಾರ್ ಗಳಿಗೆ ಗ್ರಾಹಕರಿಂದ ಬೇಡಿಕೆ ಏರಿಕೆ ಕಾಣುತ್ತಿರುವುದೇ ಕಂಪನಿಯ ಈ ನಿರ್ಧಾರಕ್ಕೆ ಕಾರಣ. ಕಂಪನಿಯು ಉತ್ಪಾನೆಯಲ್ಲಿನ ವಿಳಂಬವನ್ನು ತಪ್ಪಿಸಿಕೊಳ್ಳಲು ಇತ್ತೀಚೆಗೆ ಎರಡನೇ ಪಾಳಿಯಲ್ಲೂ ಉತ್ಪಾದನೆ ಕೈಗೊಳ್ಳಲು ತೀರ್ಮಾನಿಸಿತ್ತು.
ಕಂಪನಿಯು ಜೂನ್ ನಲ್ಲಿ ನೂತನ ಎಟಿಯೋಸ್ ಹ್ಯಾಚ್ ಬ್ಯಾಕ್ ಕಾರ್ ಹೊರತರಲಿದೆ. ಇದು ಏಪ್ರಿಲ್ ನಲ್ಲಿಯೇ ಬಿಡುಗಡೆಯಾಗಬೇಕಿತ್ತು. ಆದರೆ ಡಿಸೆಂಬರ್ ನಲ್ಲಿ ಹೊರತಂದ ಸೆಡಾನ್ ಎಟಿಯೋಸ್ ಬೇಡಿಕೆಯನ್ನು ಸಮರ್ಥವಾಗಿ ಪೂರೈಸುವ ಉದ್ದೇಶದಿಂದ ಹ್ಯಾಚ್ ಬ್ಯಾಕ್ ಬಿಡುಗಡೆಯನ್ನು ಮುಂದೂಡಿತ್ತು. ಕಂಪನಿಯ ನೂತನ ನಿರ್ಧಾರದಿಂದಾಗಿ ಎಟಿಯೋಸ್ ಸೇರಿದಂತೆ ಇನ್ನೋವಾ, ಕೊರೊಲಾ ಆಲ್ಟಿಸ್, ಫಾರ್ಚ್ಯುನರ್ ಉತ್ಪಾದನೆಯನ್ನು ಪ್ರಸಕ್ತ 80 ಸಾವಿರ ಯೂನಿಟ್ ನಿಂದ 90 ಸಾವಿರ ಯೂನಿಟ್ ಗೆ ಹೆಚ್ಚಿಸಲಿದೆ.
2011ರ ಮೂರನೇ ತ್ರೈಮಾಸಿಕದಲ್ಲಿ ಕಂಪನಿಯು ಗ್ರಾಹಕರ ಬೇಡಿಕೆಯನ್ನು ಸಮರ್ಥವಾಗಿ ಪೂರೈಸಲಿದೆ. ಟೊಯೊಟಾ ಕಿರ್ಲೊಸ್ಕರ್ ತನ್ನ ಎರಡನೇ ಘಟಕದಲ್ಲಿ ಸಂಪೂರ್ಣವಾಗಿ ಎಟಿಯೋಸ್ ನಿರ್ಮಾಣಕ್ಕಾಗಿ ಮೀಸಲಿಡಲಿದೆ. ಈ ಘಟಕದ ಉತ್ಪಾದನೆ ಸಾಮರ್ಥ್ಯವು ಪ್ರಸಕ್ತ 70 ಸಾವಿರ ಯೂನಿಟ್ ನಿಂದ 1.2 ಲಕ್ಷ ಯೂನಿಟ್ ಗೆ ಏರಿಕೆ ಕಾಣಲಿದೆ.


Click it and Unblock the Notifications








