ಜನವರಿಯಲ್ಲಿ ವಾಹನ ಕಂಪನಿಗಳಿಗೆ ಶುಕ್ರದೆಸೆ

ವಾಹನ ದರ ಹೆಚ್ಚಳ, ಬಿಡಿಭಾಗಗಳ ವೆಚ್ಚ ಹೆಚ್ಚಳದ ನಡುವೆಯೂ ಪ್ರಸಕ್ತ ವರ್ಷದ ಮೊದಲ ತಿಂಗಳಲ್ಲಿ ದೇಶದ ವಾಹನ ತಯಾರಿಕಾ ಕಂಪನಿಗಳ ಒಟ್ಟಾರೆ ಮಾರಾಟ ಗಣನೀಯವಾಗಿ ಏರಿಕೆ ಕಂಡಿದೆ. ದೇಶದ ಬೃಹತ್ ವಾಹನ ಕಂಪನಿಗಳಾದ ಮಾರುತಿ ಸುಜುಕಿ, ಫೋರ್ಡ್ ಇಂಡಿಯಾ, ಜನರಲ್ ಮೋಟಾರ್ಸ್ ಮತ್ತು ಟೊಯೊಟಾ ಕಿರ್ಲೊಸ್ಕರ್ ಸೇರಿದಂತೆ ಹೆಚ್ಚಿನ ಕಂಪನಿಗಳ ಮಾರಾಟ ಏರಿಕೆ ಕಂಡಿದೆ.

ಆದರೂ, ಕೊರಿಯನ್ ಕಾರ್ ತಯಾರಿಕಾ ಕಂಪನಿ ಹ್ಯುಂಡೈ ಮೋಟಾರ್ ಒಟ್ಟಾರೆ ಮಾರಾಟ ಶೇಕಡಾ 17.7ರಷ್ಟು ಇಳಿಕೆ ಕಂಡಿದೆ. ಆದರೆ ಹ್ಯುಂಡೈನ ದೇಶೀಯ ಮಾರಾಟ ಶೇಕಡಾ 2.4ರಷ್ಟು ಏರಿಕೆ ಕಂಡಿದೆ. ಮಾರುತಿ ಮಾರಾಟ: ಮಾರುತಿ ಸುಜುಕಿ ಮಾರುತಿ800, ಓಮ್ನಿಗೆ ಗುಡ್ ಬಾಯ್ ಹೇಳಿ ಫೆಬ್ರವರಿಯಲ್ಲಿ ನೂತನ ಕಿಝಾಷಿ ಹೊರತಂದಿತ್ತು. ಮಾರುತಿ ಸುಜುಕಿ ಮತ್ತು ಹ್ಯುಂಡೈ ಮೋಟಾರ್ ಗಳ ರಫ್ತು ವಹಿವಾಟು ಇಳಿಕೆ ಕಂಡಿವೆ.

ಜನವರಿಯಲ್ಲಿ ಮಾರುತಿ ಸುಜುಕಿ, 1,09,746 ಯೂನಿಟ್ ವಾಹನ ಮಾರಾಟ ಮಾಡಿದ್ದು, 2010ರ ಇದೇ ತಿಂಗಳ 95,649 ಯೂನಿಟ್ ಗೆ ಹೋಲಿಸಿದರೆ ಶೇ. 14.74ರಷ್ಟು ಏರಿಕೆ ಕಂಡಿದೆ. ಇದರಲ್ಲಿ 9,321 ವಾಹನಗಳನ್ನು ಕಂಪನಿ ರಫ್ತು ಮಾಡಿದೆ. ಮಾರುತಿ ಒಟ್ಟಾರೆ ಮಾರಾಟದಲ್ಲಿ ಆಲ್ಟೊ, ವ್ಯಾಗನಾರ್, ಎಸ್ಟಿಲೊ, ಸ್ವಿಫ್ಟ್, ಎಸ್ಟಾರ್ ಮತ್ತು ರಿಟ್ಜ್ ನಂತಹ ಎ2 ಸೆಗ್ಮೆಂಟ್ ವಾಹನಗಳ ಮಾರಾಟ 72,479 ಯೂನಿಟ್ ಗೆ ತಲುಪಿದ್ದು, ಕಳೆದ ವರ್ಷದ ಜನವರಿಯ 58,540 ಯೂನಿಟ್ ಮಾರಾಟಕ್ಕೆ ಹೋಲಿಸಿದರೆ ಶೇ. 23.8ರಷ್ಟು ಏರಿಕೆ ದಾಖಲಿಸಿದೆ.

ಎಸ್ ಎಕ್ಸ್ 4 ಮತ್ತು ಡಿಝೈರ್ ನಂತಹ ಎ3 ಸೆಗ್ಮೆಂಟ್ ಕಾರ್ ಮಾರಾಟ 11,930 ಯೂನಿಟ್ ತಲುಪಿದ್ದು, 2010ರ ಡಿಸೆಂಬರ್ ನಲ್ಲಿನ 8,995 ಯೂನಿಟ್ ಮಾರಾಟಕ್ಕೆ ಹೋಲಿಸಿದರೆ ಶೇ. 32.6ರಷ್ಟು ಏರಿಕೆ ಕಂಡಿದೆ. ಓಮ್ನಿ, ವೆರ್ಸಾ, ಎಕೊದಂತ ಸಿ ಸೆಗ್ಮೆಂಟ್ ಮಾರಾಟ 13,945 ಯೂನಿಟ್ ತಲುಪಿದ್ದು ಕಳೆದ ವರ್ಷದ ಇದೇ ಅವಧಿಯ 10,923 ಯೂನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 27.7ರಷ್ಟು ಏರಿಕೆ ದಾಖಲಿಸಿದೆ. ಪ್ರಸಕ್ತ ಜನವರಿಯವರೆಗೆ ಕಂಪನಿಯ ಒಟ್ಟಾರೆ ಮಾರಾಟ 10 ಲಕ್ಷ ಯೂನಿಟ್ ದಾಟಿತ್ತು.

ಹ್ಯುಂಡೈ ಮೋಟಾರ್ ಇಂಡಿಯಾ: ಜನವರಿಯಲ್ಲಿ ಹ್ಯುಂಡೈ ಮೋಟಾರ್ ಇಂಡಿಯಾ ಮಾರಾಟ ಕಳೆದ ವರ್ಷದ ಇದೇ ಅವಧಿಗಿಂತ ಶೇಕಡಾ 2.4ರಷ್ಟು ಏರಿಕೆ ಕಂಡಿದೆ. ಆದರೆ ಕಂಪನಿಯ ಒಟ್ಟಾರೆ ವಾಹನ ಮಾರಾಟ ಶೇ. 17.7ರಷ್ಟು ಇಳಿಕೆ ಕಂಡಿದೆ. 2011ರ ಜನವರಿಯಲ್ಲಿ ಹ್ಯುಂಡೈ 43,316 ಯೂನಿಟ್ (ದೇಶದಲ್ಲಿ 30,306 ಯೂನಿಟ್, ರಫ್ತು 13,306 ಯೂನಿಟ್) ಮಾರಾಟ ಮಾಡಿದ್ದು 2010ರ ಜನವರಿಯ 52,628 ಯೂನಿಟ್ ಮಾರಾಟಕ್ಕೆ ಹೋಲಿಸಿದರೆ ಗಣನೀಯವಾಗಿ ಇಳಿಕೆ ಕಂಡಿದೆ.

2011ರ ಜನವರಿಯಲ್ಲಿ ಫಿಗೊ ನೆರವಿನಿಂದ ಫೋರ್ಡ್ ಇಂಡಿಯಾ ಮಾರಾಟ 10,026 ಯೂನಿಟ್ ಗೆ ತಲುಪಿದ್ದು, ಕಳೆದ ವರ್ಷದ ಇದೇ ಅವಧಿಯ 2,453 ಯೂನಿಟ್ ಗೆ ಹೋಲಿಸಿದರೆ ಸುಮಾರು ನಾಲ್ಕು ಪಟ್ಟು ಏರಿಕೆ ಕಂಡಿದೆ. ಫೋರ್ಡ್ ಇಂಡಿಯಾ 2010ರಲ್ಲಿ ಸುಮಾರು 83,887 ವಾಹನಗಳನ್ನು ಮಾರಾಟ ಮಾಡಿದ್ದು, ಇದಕ್ಕೂ ಹಿಂದಿನ ವರ್ಷದ ಮಾರಾಟಕ್ಕಿಂತ ಶೇಕಡಾ 184ರಷ್ಟು ಏರಿಕೆ ದಾಖಲಿಸಿತ್ತು.

ಕಳೆದ ತಿಂಗಳು ಜನರಲ್ ಮೋಟಾರ್ಸ್ 9,984 ಯೂನಿಟ್ ಮಾರಾಟ ಮಾಡಿದೆ. ಹೀಗಾಗಿ ಫೋರ್ಡ್ ಜನರಲ್ ಮೋಟಾರ್ಸ್ ನ್ನು ಮಾರಾಟದಲ್ಲಿ ಹಿಂದಿಕ್ಕಿದೆ. ಜನವರಿಯಲ್ಲಿ ಜನರಲ್ ಮೋಟಾರ್ಸ್ 9,984 ಯೂನಿಟ್ ಮಾರಾಟ ಮಾಡಿದ್ದು, 2010ರ ಇದೇ ತಿಂಗಳ 9,421 ಯೂನಿಟ್ ಗೆ ಹೋಲಿಸಿದರೆ ಶೇ. 6ರಷ್ಟು ಪ್ರಗತಿ ದಾಖಲಿಸಿದೆ.

2011ರ ಜನವರಿಯಲ್ಲಿ ಷೆವರ್ಲೆ ಸ್ಪಾರ್ಕ್ ಮಾರಾಟ 3,272 ಯೂನಿಟ್ ತಲುಪಿದ್ದು, ಷೆವರ್ಲೆ ಬೀಟ್ 3,345 ಯೂನಿಟ್, ಷೆವರ್ಲೆ ಟವೇರಾ 1,691 ಯೂನಿಟ್, ಕ್ರೂಝ್ 715 ಯೂನಿಟ್, ಆವಿಯೋ 243 ಯೂನಿಟ್, ಆವಿಯೋ ಯು-ವಿಎ 331 ಯೂನಿಟ್, ಷೆವರ್ಲೆ ಆಪ್ಟ್ರಾ 296 ಯೂನಿಟ್ ಮತ್ತು ಷೆವರ್ಲೆ ಕ್ಯಾಪ್ಟಿವಾ 91 ಯೂನಿಟ್ ಮಾರಾಟಗೊಂಡಿದೆ.

ಟೊಯೊಟಾ ಭರ್ಜರಿ ಮಾರಾಟ: ಬೆಂಗಳೂರು ಮೂಲದ ಟೊಯೊಟಾ ಕಿರ್ಲೊಸ್ಕರ್ ಮಾರಾಟ ಜನವರಿಯಲ್ಲಿ 9,185 ಯೂನಿಟ್ ತಲುಪಿದ್ದು, ಕಳೆದ ವರ್ಷದ ಇದೇ ಅವಧಿಗಿಂತ ಶೇ. 53ರಷ್ಟು ಏರಿಕೆ ಕಂಡಿದೆ. ಕಂಪನಿ ಕಳೆದ ಡಿಸೆಂಬರ್ ನಲ್ಲಿ ಅನಾವರಣಗೊಳಿಸಿದ ಎಟಿಯೋಸ್ 22 ಸಾವಿರ ಯೂನಿಟ್ ಬುಕ್ಕಿಂಗ್ ಆಗಿದೆಯಂತೆ! ಒಟ್ಟಾರೆ ಈ ವರ್ಷದ ಆರಂಭ ಹೆಚ್ಚಿನ ಕಂಪನಿಗಳಿಗೆ ಹೊಸ ಹುರುಪು ನೀಡಿದೆ. ಶಾಂತಿಯುತವಾಗಿ ವರ್ತಿಸಿ:

Most Read Articles

Kannada
English summary
English Summary: Car and two-wheeler sales started the new year on a high, with all major firms posting good growth during January 2011. Leading carmakers, including Maruti Suzuki India, Tata Motors reporting high sales growth rate, while that of Hyundai declined..
Story first published: Wednesday, February 2, 2011, 16:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more