ಹೊಚ್ಚ ಹೊಸ ಬಣ್ಣಗಳೊಂದಿಗೆ ಮತ್ತೆ ಬರುತ್ತಿದೆ ಟೊಯೋಟಾ ಎಟಿಯೋಸ್ ಲಿವ ಸಣ್ಣ ಕಾರು

Written By:

ಭಾರತದ ಗ್ರಾಹಕ ಸ್ನೇಹಿ ಕಾರು ಎಟಿಯೋಸ್ ಜಪಾನ್ ಮೂಲದ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪನಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಕಾರು ಎನ್ನಬಹುದು. ಇದನ್ನು ಅರಿತಿರುವ ಕಂಪನಿಯು ಎಟಿಯೋಸ್ ಕಾರನ್ನು ಹೆಚ್ಚು ಶ್ರೀಮಂತಗೊಳಿಸಲು ಮುಂದಾಗಿದೆ.

ಹೊಚ್ಚ ಹೊಸ ಬಣ್ಣಗಳೊಂದಿಗೆ ಮತ್ತೆ ಬರುತ್ತಿದೆ ಟೊಯೋಟಾ ಎಟಿಯೋಸ್ ಲಿವ ಸಣ್ಣ ಕಾರು

ಕಂಪನಿಯು ಕಳೆದ ಆವೃತಿಯ ಕಾರಿನಲ್ಲಿರುವ ಪ್ರಾಥಮಿಕ ಹಂತದಲ್ಲಿ ಬದಲಾವಣೆ ತಂದಿದ್ದು, ಹೊಸ ಎಟಿಯೋಸ್ ಡ್ಯೂಯಲ್ ಟೋನ್ ಕಾರಿನ ಹೊರ ಮೈಪದರದ ಬಣ್ಣದ ಗುಣಮಟ್ಟದಲ್ಲಿ ಶ್ರೇಷ್ಠತೆಯನ್ನು ಹೆಚ್ಚಿಸಲಾಗಿದೆ. ಮುಂಬಾಗದ ಗ್ರಿಲ್, ಕ್ರೋಮ್ ಲ್ಯಾಂಪ್ ಬಿಝೆಲ್, ವಿದ್ಯುತ್ ಚಾಲಿತ ಓ.ವಿ.ಆರ್.ಎಂ ಗಳು, ಹೀಗೆ ಕೆಲವು ಬದಲಾವಣೆ ಮಾಡಲಾಗಿದೆ. ಈ ಕಾರಿಗೆ ಸ್ಪೋರ್ಟಿ ಸ್ಪಾಯ್ಲರ್ ನೀಡಲಾಗಿದ್ದು ಇದರಿಂದಾಗಿ ಅಂದ ಹೆಚ್ಚುವುದಂತೂ ಖಂಡಿತ.

ಹೊಚ್ಚ ಹೊಸ ಬಣ್ಣಗಳೊಂದಿಗೆ ಮತ್ತೆ ಬರುತ್ತಿದೆ ಟೊಯೋಟಾ ಎಟಿಯೋಸ್ ಲಿವ ಸಣ್ಣ ಕಾರು

ಓಪ್ಟಿಟ್ರೋನ್ ಕಾಂಬಿಮೀಟರ್ ಕೂಡ ಬದಲಾವಣೆ ಮಾಡಲಾಗಿದೆ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ಹೆಡ್ ರೆಸ್ಟ್ ಬದಲಾವಣೆ ಮಾಡಲಾಗಿದ್ದು, ನಿಮಗೆ ಬೇಕಿಲ್ಲದಿದ್ದಾಗ ತೆಗೆದಿಡಬಹುದಾದ ಅನುಕೂಲ ಕೂಡ ಮಾಡಿಕೊಡಲಾಗಿದೆ.

ಹೊಚ್ಚ ಹೊಸ ಬಣ್ಣಗಳೊಂದಿಗೆ ಮತ್ತೆ ಬರುತ್ತಿದೆ ಟೊಯೋಟಾ ಎಟಿಯೋಸ್ ಲಿವ ಸಣ್ಣ ಕಾರು

ಹೊಸ ಎಟಿಯೋಸ್ ಡ್ಯೂಯಲ್ ಟೋನ್ ಕಾರಿನ ಒಳಬಾಗದಲ್ಲಿ ಕಪ್ಪು ಬಣ್ಣದ ಪಿಯಾನೋ ಇನ್ಸ್ಟ್ರುಮೆಂಟಲ್ ಪ್ಯಾನೆಲ್ ಇರಿಸಲಾಗಿದೆ.

ಹೊಚ್ಚ ಹೊಸ ಬಣ್ಣಗಳೊಂದಿಗೆ ಮತ್ತೆ ಬರುತ್ತಿದೆ ಟೊಯೋಟಾ ಎಟಿಯೋಸ್ ಲಿವ ಸಣ್ಣ ಕಾರು

ಹೊಸ ಎಟಿಯೋಸ್ ಡ್ಯೂಯಲ್ ಟೋನ್ ಕಾರಿನ ಎಂಜಿನ್ ಹೆಚ್ಚು ಶಕ್ತಿಯುತವಾಗಿದ್ದು, 1197 ಸಿಸಿ ಯ ಪೆಟ್ರೋಲ್ ಎಂಜಿನ್ 104ಎನ್ಎಂ ತಿರುಗುಬಲದಲ್ಲಿ 79 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ ಮತ್ತು ಡೀಸೆಲ್ ಇಂಜಿನ್ 170ಎನ್ಎಂ ತಿರುಗುಬಲದಲ್ಲಿ 67 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಈ ಕಾರಿನ ಪ್ರತಿಯೊಂದು ವಿಚಾರದಲ್ಲೂ ಜಾಗ್ರತೆವಹಿಸಿರುವ ಟೊಯೋಟಾ ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯೋನ್ಮುಖವಾಗಿದೆ.

ಹೊಚ್ಚ ಹೊಸ ಬಣ್ಣಗಳೊಂದಿಗೆ ಮತ್ತೆ ಬರುತ್ತಿದೆ ಟೊಯೋಟಾ ಎಟಿಯೋಸ್ ಲಿವ ಸಣ್ಣ ಕಾರು

ಈ ಕಾರಿನ ಡುಯಲ್ ಏರ್ ಬ್ಯಾಗ್ಸ್, ಎಬಿಎಸ್, ಐಸೋಫಿಕ್ಸ್ ಹೊಂದಿರುವ ಮಕ್ಕಳ ಸೀಟ್ ಬೆಲ್ಟ್ ವಿಚಾರಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಿಲ್ಲ ಎಂದು ಕಂಪನಿ ತಿಳಿಸಿದೆ.

ಹೊಚ್ಚ ಹೊಸ ಬಣ್ಣಗಳೊಂದಿಗೆ ಮತ್ತೆ ಬರುತ್ತಿದೆ ಟೊಯೋಟಾ ಎಟಿಯೋಸ್ ಲಿವ ಸಣ್ಣ ಕಾರು

ಇನ್ನು ಗೇರ್ ಬಾಕ್ಸ್ ವಿಚಾರ ಹೇಳಬೇಕೆಂದರೆ, ಈ ಹೊಸ ಕಾರಿನಲ್ಲಿ 5-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ನೀಡಲಾಗಿದ್ದು, ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರುವುದಿಲ್ಲ.

ಹೊಚ್ಚ ಹೊಸ ಬಣ್ಣಗಳೊಂದಿಗೆ ಮತ್ತೆ ಬರುತ್ತಿದೆ ಟೊಯೋಟಾ ಎಟಿಯೋಸ್ ಲಿವ ಸಣ್ಣ ಕಾರು

ಈ ಕಾರಿನ ಬೆಲೆಯನ್ನು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯ ವಿ ಮತ್ತು ವಿಎಕ್ಸ್ ಆದಾರದ ಮೇಲೆ ನಿಗದಿಪಡಿಸಲಾಗಿದ್ದು, ಪೆಟ್ರೋಲ್ ಮಾದರಿಯ ಕಾರಿನ ಬೆಲೆ ರೂ. 5,94 ಲಕ್ಷದಿಂದ ರೂ. 6,44 ಲಕ್ಷದ ವರೆಗೆ ಇರಲಿದೆ ಮತ್ತು ಡೀಸೆಲ್ ಮಾದರಿಯ ಕಾರಿನ ಬೆಲೆ ರೂ. 7,24 ಲಕ್ಷದಿಂದ ರೂ. 7,61 ಲಕ್ಷದ ವರೆಗೆ ಇರಲಿದೆ (ಮುಂಬೈ ಎಕ್ಸ್ ಶೋ ರೂಮ್).

ಹೊಚ್ಚ ಹೊಸ ಬಣ್ಣಗಳೊಂದಿಗೆ ಮತ್ತೆ ಬರುತ್ತಿದೆ ಟೊಯೋಟಾ ಎಟಿಯೋಸ್ ಲಿವ ಸಣ್ಣ ಕಾರು

ಅಲ್ಟ್ರಾಮ್ಯಾರಾನ್ ನೀಲಿ, ವೇರ್ಮಿಲೋನ್ ಕೆಂಪು ಮತ್ತು ಸೂಪರ್ ಬಿಳಿ ಎಂಬ ಮೂರು ಹೊಚ್ಚ ಹೊಸ ಬಣ್ಣಗಳಲ್ಲಿ ಈ ಕಾರು ಬಿಡುಗಡೆಗೊಂಡಿದ್ದು, ಗ್ರಾಹಕರಿಗೆ ಹೆಚ್ಚು ಆಯ್ಕೆ ಒದಗಿಸಲಿದೆ ಎನ್ನುವುದು ಸಂತೋಷಕರ ವಿಚಾರ.

ಟೊಯೋಟಾ ಪ್ಲಾಟಿನಂ ಎಟಿಯೋಸ್(Etios)ನ ಕಾರ್ ಫೋಟೋ ಗ್ಯಾಲರಿ ವೀಕ್ಷಿಸಿ.

English summary
Toyota has launched the Etios Liva Dual Tone in India, priced from Rs 5.94 lakh onward.
Please Wait while comments are loading...

Latest Photos