ಇದೇ ವಾರದಲ್ಲಿ 2014 ಟೊಯೊಟಾ ಎಟಿಯೋಸ್, ಲಿವಾ ಬಿಡುಗಡೆ

Written By:

ಇದೇ ವಾರದಲ್ಲಿ 2014 ಎಟಿಯೋಸ್ ಮತ್ತು ಲಿವಾ ಮಾದರಿಗಳನ್ನು ಬಿಡುಗಡೆ ಮಾಡಲಿರುವ ಟೊಯೊಟಾ ವಾಹನ ತಯಾರಿಕ ಸಂಸ್ಥೆಯು ಈ ಬಾರಿಯ ದೀಪಾವಳಿ ಹಬ್ಬದ ಆವೃತ್ತಿಯನ್ನು ಅದ್ದೂರಿಯಾಗಿಯೇ ಬರಮಾಡಿಕೊಳ್ಳಲಿದೆ.

ಗ್ರಾಹಕರಿಗೆ ಗರಿಷ್ಠ ಅನುಭವ ನೀಡುವುದರಲ್ಲಿ ಸದಾ ಬದ್ಧವಾಗಿರುವ ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯು ಅಕ್ಟೋಬರ್ 15ರಂದು ಕೆಲವೊಂದು ಬದಲಾವಣಗಳೊಂದಿಗೆ ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್ ಮಾದರಿಗಳನ್ನು ಪರಿಚಯಿಸಲಿದೆ.

To Follow DriveSpark On Facebook, Click The Like Button

ಈ ಹಬ್ಬದ ಆವೃತ್ತಿಯಲ್ಲಿ ಬಹುತೇಕ ಎಲ್ಲ ವಾಹನ ತಯಾರಿಕ ಸಂಸ್ಥೆಗಳು ಗರಿಷ್ಠ ಕೊಡುಗೆಗಳೊಂದಿಗೆ ಮುಂದೆ ಬಂದಿದೆ. ಹಾಗಿರುವ ಟೊಯೊಟಾದ ಈ ಪರಿಷ್ಕೃತ ಮಾದರಿಗಳು ಮಾರಾಟಕ್ಕೆ ಇನ್ನಷ್ಟು ಹುರುಪು ನೀಡುವ ನಿರೀಕ್ಷೆಯಿದೆ.

ಅಂದ ಹಾಗೆ ಈ ಎರಡು ಮಾದರಿಗಳಿಗೆ ಟೊಯೊಟಾ ಸಂಸ್ಥೆಯು 'ನ್ಯೂ ಎಟಿಯೋಸ್' ಮತ್ತು 'ನ್ಯೂ ಎಟಿಯೋಸ್ ಲಿವಾ' ಎಂದು ಹೆಸರಿಸಿಕೊಂಡಿದೆ. ಇದು ಕಾರಿನ ಒಳಮೈ ಹಾಗೂ ಹೊರಮೈಯಲ್ಲಿ ಕೆಲವೊಂದು ಸಣ್ಣ ಪುಟ್ಟ ಬದವಾವಣೆಗಳನ್ನು ಪಡೆದುಕೊಳ್ಳಲಿದೆ.

Toyota

ಹೊಸ ಕ್ರೋಮ್‌ಯುಕ್ತವಾದ ಮುಂಭಾಗ, 'ಸಿಂಗಲ್ ಟೂತ್' ಗ್ರಿಲ್ ವಿನ್ಯಾಸವನ್ನು ಟೊಯೊಟಾ ಎಟಿಯೋಸ್ ಸೆಡಾನ್ ಪಡೆಯಲಿದೆ. ಅದೇ ಹೊತ್ತಿಗೆ ಟೊಯೊಟಾ ಲಿವಾ ಕ್ರೋಮ್ ರಹಿತ ಹೊಸ ಗ್ರಿಲ್ ಪಡೆಯಲಿದೆ. ಹಾಗಿದ್ದರೂ ಪಾರ್ಕಿಂಗ್ ಸೆನ್ಸಾರ್ ಹೊರತಾಗಿ ಕಾರಿನ ಬದಿ ಹಾಗೂ ಹಿಂಭಾಗದ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ.

ಇನ್ನು ಕಾರಿನೊಳಗೂ ಕೆಲವೊಂದು ಪರಿಷ್ಕರಣೆಗಳು ಕಂಡುಬಂದಿದ್ದು, ಡೋರ್ ಪ್ಯಾನೆಲ್‌ಗಳಲ್ಲೂ ಫ್ಯಾಬ್ರಿಕ್ ಅಪ್‌ಹೋಲ್‌ಸ್ಟ್ರೆ ಕಂಡುಬರಲಿದೆ. ಅದೇ ರೀತಿ ಫಾಕ್ಸ್ ಲೆಥರ್ ಸ್ಟೀರಿಂಗ್ ವೀಲ್ ಹೋದಿಗೆ, ಕ್ರೋಮ್ ಸ್ಪರ್ಶಿತ ಗೇರ್ ಸ್ಟಿಕ್, ಚಾಲಕ ಬದಿಯ ಏರ್ ಬ್ಯಾಗ್ ಸಹ ಸ್ಟಾಂಡರ್ಡ್ ಆಗಿ ದೊರಕಲಿದ್ದು, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಔಟರ್ ರಿಯರ್ ವ್ಯೂ ಮಿರರ್ ಕೂಡಾ ಇರಲಿದೆ.

ಇಷ್ಟೆಲ್ಲ ಆದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದವಾವಣೆ ಕಂಡುಬರುವುದಿಲ್ಲ. ಪ್ರಸ್ತುತ ಟೊಯೊಟಾ ಎಟಿಯೋಸ್ ಮತ್ತು ಲಿವಾ ಕಾರುಗಳ ಪ್ರಾರಂಭಿಕ ಮುಂಬೈ ಎಕ್ಸ್ ಶೋ ರೂಂ ಬೆಲೆ 5.39 ಹಾಗೂ 4.40 ಲಕ್ಷ ರು.ಗಳಷ್ಟಿದೆ. ಇದೀಗ ಹೊಸ ಮಾದರಿಗಳು ಕೊಂಚ ದುಬಾರಿಯಾಗುವ ಸಾಧ್ಯತೆಯಿದೆ. 

English summary
Toyota is preparing to launch refreshed Toyota Etios sedan and the Toyota Etios Liva hatchback soon.
Story first published: Tuesday, October 14, 2014, 10:40 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark