ಮೂರು ಸವಾಲು: ದೇಶದ ವಾಹನ ಕಂಪನಿಗಳು ಕಂಗಾಲು!

Indian Car Makers
ಪ್ರಮುಖ ಮೂರು ಸಮಸ್ಯೆಗಳು ದೇಶದ ವಾಹನ ಕಂಪನಿಗಳ ಬೆನ್ನುಬಿದ್ದಿವೆ. ಇದರಲ್ಲಿ ಜಪಾನ್ ಸುನಾಮಿಯೂ ಸೇರಿದೆ. ಮಾರ್ಚ್ 11ರಂದು ಘಟಿಸಿದ ಸುನಾಮಿ ಮತ್ತು ಭೂಕಂಪ ಪರಿಣಾಮವಾಗಿ ಅಲ್ಲಿನ ವಾಹನ ಕಂಪನಿಗಳು ಉತ್ಪಾದನೆ ಸ್ಥಗಿತಗೊಳಿಸಿದ್ದವು. ಅದನ್ನೇ ನಂಬಿಕೊಂಡು ಉಸಿರಾಡುತ್ತಿದ್ದ ಇಲ್ಲಿನ ಕಂಪನಿಗಳಿಗಿದು ಪ್ರಬಲ ಹೊಡೆತವಾಗಿದೆ. ಈಗ ದೇಶದಲ್ಲಿ ವಾಹನ ಬಿಡಿಭಾಗಗಳ ದಾಸ್ತಾನೂ ಖಾಲಿಯಾಗುವ ಭೀತಿಯನ್ನು ಇಲ್ಲಿನ ಕಂಪನಿಗಳು ವ್ಯಕ್ತಪಡಿಸುತ್ತಿವೆ.

ಕಚ್ಚಾ ಸಾಮಾಗ್ರಿಗಳ ದರ ಏರಿಕೆ ಮುಂದುವರೆಯುತ್ತಿರುವುದೂ ಕೂಡ ವಾಹನ ಕಂಪನಿಗಳನ್ನು ಪಿಕಲಾಟಕ್ಕೀಡುಮಾಡಿವೆ. ಈ ಹಿನ್ನಲೆಯಲ್ಲಿ ಕೆಲವು ಕಂಪನಿಗಳೂ ಏಪ್ರಿಲ್ ಒಂದರಿಂದ ದರ ಹೆಚ್ಚಿಸುವುದಾಗಿ ಈಗಾಗಲೇ ಘೋಷಿಸಿವೆ. ಮೂರನೆಯದಾಗಿ ಕಂಪನಿಗಳು ಭೀತಿಯಲ್ಲಿರುವುದು ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಹೆಚ್ಚಿಸಿರುವ ಸಾಲದ ಮೇಲಿನ ಬಡ್ಡಿದರದ ಕುರಿತು.

ಜಪಾನ್ ಬಿಕ್ಕಟ್ಟು ಮತ್ತು ಆರ್ ಬಿಐ ಬಡ್ಡಿದರದಿಂದಾಗಿ ವಾಹನೋದ್ಯಮಕ್ಕೆ ಹಿನ್ನಡೆಯಾಗಲಿದೆ ಎಂದು ಮಹೀಂದ್ರ ಆಂಡ್ ಮಹೀಂದ್ರ ಕಂಪನಿ ಹೇಳಿದೆ. ಇದು ವಾಹನ ಸಾಲದ ಮೇಲೆ ಹೊಡೆತ ನೀಡಲಿದೆ ಎಂದು ಹೆಚ್ಚಿನ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. "ಕಮಾಡಿಟಿ ದರಗಳು ಕಳೆದ ಕೆಲವು ತಿಂಗಳಿನಿಂದ ಏರಿಕೆ ಕಾಣುತ್ತಿದೆ. ಜಪಾನ್ ದುರಂತ ವಾಹನ ಬಿಡಿಭಾಗ ಸೆಗ್ಮೆಂಟ್ ಗೆ ಹೊಡೆತ ನೀಡಿದೆ. ಆರ್ ಬಿಐ ಬಡ್ಡಿದರ ಕೂಡ ವಾಹನ ಮಾರುಕಟ್ಟೆಗೆ ತೊಂದರೆ ನೀಡಲಿದೆ" ಎಂದು ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಅಧ್ಯಕ್ಷ ಪವನ್ ಗೋಯೆಂಕಾ ಹೇಳಿದ್ದಾರೆ.

ಸದ್ಯ ದೇಶದ ವಾಹನೋದ್ಯಮಕ್ಕೆ ಇವು ಮೂರು ಪ್ರಮುಖ ಸಮಸ್ಯೆಯಾಗಿ ಕಾಡುತ್ತಿದ್ದರೂ ಇದನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯಬಹುದೆಂದು ಜನರಲ್ ಮೋಟರ್ಸ್ ಅಧ್ಯಕ್ಷರು ಹೇಳಿದ್ದಾರೆ. ವಾಹನ ಬಿಡಿಭಾಗಗಳ ಕೊರತೆ ಸದ್ಯದ ಪ್ರಮುಖ ಸಮಸ್ಯೆ. ಹೆಚ್ಚಿನ ವಾಹನ ಬಿಡಿಭಾಗ, ಸಾಧನಗಳಿಗೆ ಪ್ರಮುಖ ಮೂಲ ಜಪಾನ್. ಆದರೆ ಇತ್ತೀಚಿನ ಪ್ರಬಲ ಭೂಕಂಪ ಮತ್ತು ಸುನಾಮಿ ಹೊಡೆತಕ್ಕೆ ಸಿಲುಕಿ ಅಲ್ಲಿನ ಕಂಪನಿಗಳು ನಲುಗಿವೆ. ಹೀಗಾಗಿ ಈ ವರ್ಷ ನಿರೀಕ್ಷಿತ ಮಾರಾಟ ಗುರಿ ತಲುಪುವುದು ಕಷ್ಟ ಎಂದಿದ್ದಾರೆ. ಆದರೆ ಸದ್ಯದ ಸಮಸ್ಯೆ ತಾತ್ಕಾಲಿಕ ಎಂಬ ಅಭಿಪ್ರಾಯವನ್ನು ಫೋರ್ಡ್ ಇಂಡಿಯಾ ವ್ಯಕ್ತಪಡಿಸಿದೆ.

More from DriveSpark

Article Published On: Wednesday, March 23, 2011, 10:32 [IST]
English summary
Indian Car-makers now faceing three main challenges. Japan crisis, rate hikes and surging raw material costs. A shortage of critical components, many of them sourced from Japan where many automobile facilities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+