ಆಡಿ ಆರ್8 ಸ್ಪೈಡರ್ ರಸ್ತೆಗೆ, ದರ 1.47 ಕೋಟಿ

ನೂತನ ಸ್ಪೋರ್ಟಿ ಬ್ಯೂಟಿ ಎರಡು ಸೀಟಿನ ಆಕರ್ಷಕ ಕಾರ್. ಇದು 5.2 ಲೀಟರ್ ನ ವಿ10 ಎಂಜಿನ್ ಹೊಂದಿದ್ದು ಸುಮಾರು 525 ಹಾರ್ಸ್ ಪವರ್ ನೀಡುತ್ತದೆ. ಇದು ತುಂಬಾ ಹಗುರವಾದ ಅಲ್ಯುಮಿನಿಯಂ ಬಾಡಿ ಹೊಂದಿದ್ದು ಇದರ ಭಾರ ಸುಮಾರು 1.7 ಟನ್ ನಷ್ಟಿದೆ. ಇದರಲ್ಲಿ ಪ್ರತಿಗಂಟೆಗೆ ಸುಮಾರು 313 ಕಿ.ಮೀ. ವೇಗದಲ್ಲಿ ಸಾಗಬಹುದು.
ನೂತನ ಕಾರ್ ಶಕ್ತಿಶಾಲಿ ಆಕ್ಸಿಲರೇಷನ್ ಇತ್ಯಾದಿ ಫೀಚರ್ ಗಳನ್ನು ಹೊಂದಿದ್ದು, ಆರಾಮದಾಯಕ ರೈಡಿಂಗ್ ಅನುಭವ ಪಡೆಯಬಹುದಾಗಿದೆ ಎಂದು ಆಡಿ ಇಂಡಿಯಾ ಮುಖ್ಯಸ್ಥ ಮೈಕಲ್ ಪಾರ್ಷ್ ಹೇಳಿದ್ದಾರೆ. ಈಗ ಆಡಿ ಮೋಟರ್ಸ್ ತನ್ನ ಸೆಡಾನ್ ಕಾರ್ ಗಳಾದ ಎ4, ಎ6 ಮತ್ತು ಎ8ಗಳ ಮೂಲಕ ಭಾರತದ ರಸ್ತೆಯಲ್ಲಿ ಪ್ರಾಬಲ್ಯ ಪಡೆದಿದೆ. ಇದರೊಂದಿಗೆ ಇಲ್ಲಿನ ರಸ್ತೆಯಲ್ಲಿ ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳಾದ ಕ್ಯೂ5 ಮತ್ತು ಕ್ಯೂ7 ಕೂಡ ಹೊರತಂದಿದೆ. ನೂತನವಾಗಿ ಕಂಪನಿ ಅನಾವರಣ ಮಾಡಿರುವ ಆರ್8 ಸ್ಪೋರ್ಟ್ಸ್ ಫ್ಯಾಮಿಲಿಗೆ ಹೊಸ ಸೇರ್ಪಡೆಯಾಗಿದೆ.


Click it and Unblock the Notifications








