ಹೀರೋ ಹೂಡಿಕೆಗೆ ಸರಕಾರ ಅಸ್ತು ಎನ್ನಬಹುದೇ?

ಇದಕ್ಕೂ ಮುನ್ನ ಕಂಪನಿಯು ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯಿಂದ ಅನುಮೋದನೆ ಪಡೆದಿತ್ತು. ಹೀರೋ ಹೋಂಡಾ ಜಂಟಿ ಉದ್ಯಮದಲ್ಲಿ ಹೀರೋ ಇನ್ವೆಸ್ಟ್ ಮೆಂಟ್ ಸುಮಾರು ಶೇ.17.33ರಷ್ಟು ಪಾಲು ಹೊಂದಿದೆ. ಔಪಚಾರಿಕವಾಗಿ ಕಂಪನಿಗಳೆರಡು ಜಂಟಿ ಉದ್ಯಮದಿಂದ ಹೊರಬಂದ ನಂತರ ಹೋಂಡಾ ಮೋಟರ್ಸ್ ಷೇರನ್ನು ಸುಮಾರು 3,841.83 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾಪವನ್ನು ಹೀರೋ ಗ್ರೂಪ್ ಮಾಡಿತ್ತು. ಬಂಡವಾಳ ಸಂಗ್ರಹಕ್ಕಾಗಿ ಖಾಸಗಿ ಇಕ್ವಿಟಿ ಮಾರಾಟದ ಹಾದಿಯನ್ನು ಮುಂಜಾಲ್ ಗ್ರೂಪ್ ಆಯ್ಕೆ ಮಾಡಿಕೊಂಡಿತ್ತು.
ಇದರಲ್ಲಿ ಶೇ. 29ರಷ್ಟು ಷೇರನ್ನು ಬಿಸಿ ಇಂಡಿಯಾ ಇನ್ ವೆಸ್ಟರ್ಸ್ ಮತ್ತು ಲಾಥೆ ಇನ್ ವೆಸ್ಟ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಖರೀದಿಸಿದೆ. ಇದರಲ್ಲಿ ಲಾಥೆ ಎಂಬುದು ಸಿಂಗಪುರ ಸರಕಾರದ ಹೂಡಿಕೆ ಸಂಸ್ಥೆಯಾಗಿದೆ. ಹೋಂಡಾ ಮೋಟರ್ಸ್ ಷೇರು ಖರೀದಿಸಲು ಬೈನ್ ಕ್ಯಾಪಿಟಲ್ ಸೇರಿದಂತೆ ಈ ಎಲ್ಲ ಹೂಡಿಕೆದಾರರೊಂದಿಗೆ ಹೀರೋ ಗ್ರೂಪ್ ಒಪ್ಪಂದ ಮಾಡಿಕೊಂಡಿದೆ.


Click it and Unblock the Notifications








