ಜಪಾನ್ ದುರಂತದಿಂದ ತೆರೆಯದ ಬಣ್ಣದ ಬಾಗಿಲು

Xirallic
ಜಪಾನ್ ನಲ್ಲಿ ಸಂಭವಿಸಿದ ಸುನಾಮಿ ಮತ್ತು ಭೂಕಂಪದಿಂದ ವಾಹನ ಕಂಪನಿಗಳು ಬಣ್ಣ ಕಳೆದುಕೊಂಡಿವೆ. ವಾಹನಗಳ ಪೈಂಟಿಂಗ್ ನಲ್ಲಿ ಬಳಸುವ ವಿವಿಧ ವರ್ಣಗಳು, ರಂಗುಗಳು, ಷೇಡ್ ಗಳ ಕೊರತೆಯನ್ನು ಹೆಚ್ಚಿನ ವಾಹನ ಕಂಪನಿಗಳು ಎದುರಿಸುತ್ತಿವೆ. ಕ್ರಿಸ್ಲರ್ ಗ್ರೂಪ್ ಎಲ್ಎಲ್ ಸಿ, ಟೊಯೊಟಾ ಮೋಟರ್ ಕಂಪನಿ, ಜನರಲ್ ಮೋಟರ್ಸ್ ಕಂಪನಿ ಮತ್ತು ಫೋರ್ಡ್ ಮೋಟರ್ ಕಂಪನಿ ಸೇರಿದಂತೆ ಪ್ರಮುಖ ವಾಹನ ಕಂಪನಿಗಳು ಈ ಬಣ್ಣದ ರಂಗು ಅಂದ್ರೆ ಕ್ಷಿರಾಲಿಕ್ ನ್ನು ಬಳಸುತ್ತಿವೆ.

ಜಪಾನ್ ನಲ್ಲಿ ಸಂಭವಿಸಿದ ಭೂಕಂಪಕ್ಕೂ ಬಣ್ಣದ ಕೊರತೆಗೂ ಅಂತಹ ಸಂಬಂಧವೇನಿದೆ? ಎಂಬ ಪ್ರಶ್ನೆ ಮೂಡುವುದು ಸಹಜ. ಕೊರತೆಗೆ ಕಾರಣ ಅಂತಹ ವಿಶೇಷ ಬಣ್ಣವನ್ನು ಉತ್ಪಾದಿಸಲು ಈ ಜಗತ್ತಿನಲ್ಲಿರುವುದು ಒಂದೇ ಒಂದು ಘಟಕ. ಅದು ಇರುವುದು ಜಪಾನ್ ನ ಪುಕುಶೀಮಾ-ಡೈಚಿ ಅಣುಸ್ಥಾವರದ ಹತ್ತಿರ! ಈ ಘಟಕವನ್ನು ಜರ್ಮನಿಯ ಕೆಮಿಕಲ್ ಕಂಪನಿ ಮೆರ್ಕ್ ಕೆಜಿಎ ಜಪಾನ್ ನ ಒನಾಹಾಮಾ ಘಟಕದಲ್ಲಿ ನಡೆಸುತ್ತಿದೆ. ಭೂಕಂಪದ ನಂತರ ಹಾಕಿದ ಬಾಗಿಲನ್ನು ಇನ್ನೂ ತೆರೆದಿಲ್ಲ.

ಬ್ರೌನ್ಞ್ ಸ್ಟಾರ್, ಹಂಟರ್ ಗ್ರೀನ್, ಬೈಲೆಟ್ ಸಿಲ್ವರ್, ಬ್ಲ್ಯಾಕ್ ಷೇಡ್ ಸೇರಿದಂತೆ ಹಲವು ಬಣ್ಣಗಳ ಕೊರತೆಯಿಂದ ವಾಹನ ಕಂಪನಿಗಳು ಕಂಗಲಾಗಿವೆ. ಫೋರ್ಡ್ ಕಂಪನಿಗೂ ಕಪ್ಪು ಬಣ್ಣದ ಕೊರತೆ ಹೆಚ್ಚಾಗಿದೆಯಂತೆ. ನ್ಯಾವಿಗೇಟರ್ಸ್, ಎಫ್-150 ಪಿಕ್ ಅಪ್ ಮತ್ತು ಸೂಪರ್ ಡ್ಯೂಟಿ ಪಿಕ್ ಅಪ್ ಗಳಿಗೆ ಈ ಬಣ್ಣಗಳನ್ನು ಫೋರ್ಡ್ ಬಳಸುತ್ತದೆ. ಬಣ್ಣದ ಕೊರತೆಯ ಹಿನ್ನಲೆಯಲ್ಲಿ ಜನರಲ್ ಮೋಟರ್ಸ್ ಉತ್ತರ ಅಮೆರಿಕದಲ್ಲಿ ತಾತ್ಕಾಲಿಕವಾಗಿ ಉತ್ಪಾದನೆ ಸ್ಥಗಿತಗೊಳಿಸಿದೆ. ಜಪಾನಿನಲ್ಲಿರುವ 12 ಘಟಕಗಳಲ್ಲಿ ಟೊಯೊಟಾ ಉತ್ಪಾದನೆ ನಿಲ್ಲಿಸಿದೆ. ವಾಹನ ಕಂಪನಿಗಳು ಬಣ್ಣದ ಕನಸಿನಲ್ಲಿ ಮೆರ್ಕ್ ಕಂಪನಿಯ ಬಾಗಿಲನ್ನು ನೋಡುತ್ತಿವೆ.

More from DriveSpark

Article Published On: Tuesday, March 29, 2011, 10:59 [IST]
English summary
Leading automobile giants like Chrysler Group LLC, Toyota Motor Co, General Motors Co and Ford Motor Co are facing the shortage of pigment, called Xirallic, due to an strong earthquake and tsunami which hitted Japan last two weeks ago.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+