ಕೆಂಪು ಕಾರಿನ್ಮೆಲೆ ಹಕ್ಕಿ ಹಿಕ್ಕೆ ಬೀಳೋದು ಜಾಸ್ತಿಯಂತೆ!

ಮೊದಲನೆಯದಾಗಿ ನೀವು ಕೆಂಪು ಕಾರಿನ ಪಕ್ಕದಲ್ಲಿ ಇಲ್ಲವೆಂದು ಖಾತ್ರಿಪಡಿಸಿಕೊಳ್ಳಿ. ಇಲ್ಲವಾದರೆ ಕಾರಿನ ಪಕ್ಕದಲ್ಲಿರುವ ನಿಮ್ಮ ಮೇಲೆಯೂ ಹಕ್ಕಿ ಹಿಕ್ಕೆ ಬಿದ್ದೀತು. ಕೆಂಪು ಕಾರಿಗೂ ಹಕ್ಕಿಗಳಿಗೂ ಏನಿದು ವಿಚಿತ್ರ ಬಂಧವೆಂದು ಕೇಳುವಿರಾ? ವಿಚಿತ್ರವಾದರೂ ಸತ್ಯ. ನೂತನ ಅಧ್ಯಯನವೊಂದರ ಪ್ರಕಾರ ಕೆಂಪು ಕಾರುಗಳ ಮೇಲೆ ಹಕ್ಕಿಗಳು ಹಿಕ್ಕೆ ಹಾಕೋದು ಜಾಸ್ತಿಯಂತೆ!

ಕಾರು ಆಕ್ಸೆಸರಿ ಸ್ಟೋರ್ ಹಾಲ್ ಫೋರ್ಡ್ ನೇತೃತ್ವದ ಸಮೀಕ್ಷೆಯಲ್ಲಿ ವಿಸ್ಮಯಕಾರಿ ಎನ್ನಬಹುದಾದ ವಿಚಾರ ಬಹಿರಂಗಗೊಂಡಿದೆ. ಸುಮಾರು 5 ನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇಕಡ 18ರಷ್ಟು ಕೆಂಪು ಕಾರುಗಳ ಮೇಲೆ ಹಕ್ಕಿ ಹಿಕ್ಕೆ ಬಿದ್ದಿತ್ತಂತೆ. ಹಕ್ಕಿಗಳಿಗೆ ನೀಲಿ ಕಾರುಗಳನ್ನೂ ನೋಡಿದಾಗಲೂ ಹಿಕ್ಕೆ ಬರೋದು ಜೋರಂತೆ. ಸಮೀಕ್ಷೆಯಲ್ಲಿ ಶೇಕಡ 14ರಷ್ಟು ನೀಲಿ ಕಾರುಗಳ ಮೇಲೆ ಹಕ್ಕಿ ಹಿಕ್ಕೆ ಬಿದ್ದಿತ್ತು.

ಉಳಿದಂತೆ ಶೇಕಡ 11ರಷ್ಟು ಕಪ್ಪು ಕಾರುಗಳ ಮೇಲೆ, ಶೇಕಡ 7ರಷ್ಟು ಬಿಳಿ ಕಾರುಗಳ ಮೇಲೆ ಹಕ್ಕಿ ಹಿಕ್ಕೆ ಬಿದ್ದಿತ್ತು. ಆದರೆ ಹಕ್ಕಿಗಳು ಕೆಂಪು ಕಾರುಗಳ ಮೇಲೆಯೇ ಯಾಕೆ ಹಿಕ್ಕೆ ಹಾಕುತ್ತವೆ ಎಂದು ನಿಖರವಾಗಿ ಹೇಳಲು ಸಮೀಕ್ಷೆ ವಿಫಲವಾಗಿದೆ. ಆದರೆ ಹಕ್ಕಿಗಳು ಹಸಿರು ಕಾರುಗಳ ಮೇಲೆ ಹಿಕ್ಕೆ ಹಾಕೋದು ಕಡಿಮೆಯಂತೆ. ಅಧ್ಯಯನ ನಡೆಸಿದಾಗ ಶೇಕಡ 1ರಷ್ಟು ಮಾತ್ರ ಹಸಿರು ಕಾರುಗಳ ಮೇಲೆ ಹಕ್ಕಿ ಹಿಕ್ಕೆ ಬಿದ್ದಿತ್ತು.

ನೂತನ ಹಕ್ಕಿ ಹಿಕ್ಕೆ ಅಧ್ಯಯನವು ಹಕ್ಕಿಗಳ ಈ ಟ್ರೆಂಡಿಗೆ ಇದಮಿತ್ಥಂ ಕಾರಣ ನೀಡಿಲ್ಲ. ಬಹುಶಃ ಕೆಂಪು ಕಾರುಗಳು ಹಕ್ಕಿಗಳಿಗೆ ಕೆಟ್ಟದಾಗಿ ಕಾಣುತ್ತಿದೆಯೇನೋ ಜಯನಗರದ ವಾಹನ ಚಾಲಕರೊಬ್ಬರು ಕುಹುಕವಾಡಿದ್ದಾರೆ.

ಕಾರ್ ಆಕ್ಸೆಸರಿ ಸ್ಟೋರ್ ಹಾಲ್ ಫೋರ್ಡ್ಸ್ ಕಂಪನಿಯ ಪ್ರಕಾರ ವರ್ಷಕ್ಕೆ ಸುಮಾರು 57 ದಶಲಕ್ಷ ಡಾಲರಿನಷ್ಟು ಹಣವನ್ನು ಜಗತ್ತಿನ ವಾಹನ ಮಾಲೀಕರು ಹಕ್ಕಿ ಹಿಕ್ಕೆಯಿಂದ ಉಂಟಾದ ಕಲೆಗಳನ್ನು ತೆಗೆಯಲು ವೆಚ್ಚ ಮಾಡುತ್ತಾರೆ ಎಂದು ಹೇಳಿದೆ. ಸಮೀಕ್ಷೆಯಲ್ಲಿ ಸುಮಾರು 1,140 ವಾಹನಗಳನ್ನು ಅಧ್ಯಯನ ನಡೆಸಲಾಗಿದೆ.

ಅಂದ ಹಾಗೆ ನಿಮ್ಮ ಕಾರ್ ಬಣ್ಣ ಯಾವುದು?

More from DriveSpark

Article Published On: Friday, June 22, 2012, 16:52 [IST]
English summary
Red coloured cars tend to be defiled by bird excreta than any other coloured cars, according to a research. Red cars are followed by blue,black and white. Green cars are the least affected by this problem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+