ದೇಶದ ಜನರಿಗೆ ಇವೆರಡು ಬಣ್ಣದ ಕಾರು ಅಚ್ಚುಮೆಚ್ಚು

ಕಂಪನಿಗಳು ಎಷ್ಟೇ ಬಗೆಯ ಕಾರುಗಳನ್ನು ಮಾರುಕಟ್ಟೆಗೆ ತರಲಿ, ಆದರೆ ಹೆಚ್ಚು ಜನರು ಆಯ್ಕೆ ಮಾಡಿಕೊಳ್ಳೋದು ಬೆಳ್ಳಿ ಅಥವಾ ಬಿಳಿ ಬಣ್ಣ. ನಿಮ್ಗೊತ್ತ? ಇವೆರಡೂ ಬಣ್ಣದ ಕಾರುಗಳಿಗೆ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಜನರೆಲ್ಲ ಬಿಳಿ ಅಥವಾ ಸಿಲ್ವರ್ ಕಲರ್‌ಗಳನ್ನು ಒಲವಿನ ಕಾರಿನ ಬಣ್ಣವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ದೇಶದಲ್ಲಿ ಶೇಕಡ 62-70ರಷ್ಟು ಕಾರುಗಳು ಸಿಲ್ವರ್ ಅಥವಾ ಬಿಳಿಬಣ್ಣದಲ್ಲಿ ಮಾರಾಟವಾಗುತ್ತಿವೆ. ಕಳೆದ ಐದು ವರ್ಷದ ಹಿಂದೆ ಇದು ಶೇಕಡ 50ರಷ್ಟಿತ್ತು. ಇದನ್ನು ದೇಶದ ಬೃಹತ್ ಪ್ರಯಾಣಿಕ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಕೂಡ ಖಚಿತಪಡಿಸಿದೆ.

"ಹೌದು, ಬಿಳಿ ಮತ್ತು ಸಿಲ್ವರ್ ಬಣ್ಣದ ಕಾರುಗಳು ಈಗಲೂ ಬಹುಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಇತ್ತೀಚೆಗೆ ಬೆಳ್ಳಿ ಬಣ್ಣಕ್ಕಿಂತಲೂ ಬಿಳಿಬಣ್ಣದ ಕಾರುಗಳು ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ" ಎಂದು ಮಾರುತಿ ಸುಜುಕಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಶಶಾಂಕ್ ಶ್ರೀವಾತ್ಸವ್ ಹೇಳುತ್ತಾರೆ.

ಇಲ್ಲಿ ಇನ್ನೂ ಕೆಲವು ಆಸಕ್ತಿದಾಯಕ ವಿಷಯಗಳಿವೆ. ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಹೆಚ್ಚು ಡೀಸೆಲ್ ಕಾರುಗಳು ಬಿಳಿಬಣ್ಣದಲ್ಲಿ ಮಾರಾಟವಾಗುತ್ತಿವೆ. "ಈ ಕಾರುಗಳನ್ನು ಹೆಚ್ಚಾಗಿ ದೂರ ಪ್ರಯಾಣಕ್ಕೆ ಬಳಸಲಾಗುತ್ತದೆ. ಈ ಕಾರುಗಳನ್ನು ಆಗಾಗ ಬದಲಾಯಿಸುತ್ತಿರುತ್ತಾರೆ. ಸೆಕೆಂಡ್ ಹ್ಯಾಂಡಾಗಿ ಮಾರಾಟಮಾಡುವಾಗ ಬಿಳಿಬಣ್ಣದ ಕಾರುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ" ಎಂದು ಶ್ರೀವಾತ್ಸವ್ ಅಭಿಪ್ರಾಯಪಡುತ್ತಾರೆ.

ಬಿಳಿಬಣ್ಣದ ಕಾರುಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯೂ ಒಂದು ಕಾರಣ. "ಇತರ ಬಣ್ಣದ ಕಾರುಗಳಿಗೆ ಹೋಲಿಸಿದರೆ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಗ್ರಾಹಕರು ಬಿಳಿ ಬಣ್ಣವನ್ನು ಹೆಚ್ಚು ಸ್ಟಾಂಡರ್ಡ್ ಆಗಿ ಪರಿಗಣಿಸುತ್ತಾರೆ" ಎಂದು ಫೋರ್ಡ್ ಕಂಪನಿಯ ಮಾರಾಟ ವಿಭಾಗದ ಮುಖ್ಯಸ್ಥ ಎನ್. ರಾಜಾ ಹೇಳುತ್ತಾರೆ.

"ಕಂಪನಿಯಲ್ಲಿ ಶೇಕಡ 35ರಷ್ಟು ಬಿಳಿಬಣ್ಣದ ಕಾರುಗಳು ಮಾರಾಟವಾಗುತ್ತಿವೆ" ಎಂದು ಮಹೀಂದ್ರ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ವಿಭಾಗದ ಉಪಾಧ್ಯಕ್ಷರು ಹೇಳುತ್ತಾರೆ. "ಇದೇ ರೀತಿ ಸೆಕೆಂಡ್ ಹ್ಯಾಂಡ್ ಬಿಳಿಬಣ್ಣದ ಕಾರುಗಳಿಗೆ ಇತರ ಬಣ್ಣದ ಕಾರುಗಳಿಗಿಂತ 10-15 ಸಾವಿರ ರು. ಹೆಚ್ಚಿರುತ್ತದೆ" ಎಂಬ ಮಾಹಿತಿಯನ್ನೂ ಆವರು ನೀಡಿದ್ದಾರೆ.

ಹಾಗಂತ ಇತರ ಬಣ್ಣದ ಕಾರುಗಳಿಗೆ ಬೇಡಿಕೆ ಇಲ್ಲವೆಂದಲ್ಲ. ಮಾರುತಿ ಸುಜುಕಿಯ ಕೆಂಪು ಬಣ್ಣದ ಸ್ವಿಫ್ಟ್ ಕಾರುಗಳಿಗೆ ಹೆಚ್ಚು ಬೇಡಿಕೆಯಿದೆ. ಕಂದು ಬಣ್ಣದ ಎಸ್ಟಿಲೊ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.

ಅಧ್ಯಯನಗಳ ಪ್ರಕಾರ ಉತ್ತರ ಭಾರತದ ಹೆಚ್ಚಿನ ಜನರು ಬಿಳಿಬಣ್ಣದ ಕಾರುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. "ಭಾರತ ಹೆಚ್ಚು ಬಿಸಿಲು ಹೊಂದಿರುವ ದೇಶ. ವಾತಾವರಣದಕ್ಕೆ ತಕ್ಕಂತೆ ಕೂಲ್ ಆಗಿರಲು ಹೆಚ್ಚು ಜನರು ಬಿಳಿಬಣ್ಣದ ಕಾರುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ" ಎಂದು ಹೋಂಡಾ ಸಿಯೆಲ್ ಕಾರು ಕಂಪನಿಯ ಉಪಾಧ್ಯಕ್ಷರು ಹೇಳುತ್ತಾರೆ.

ಕಾರಿನ ಬಣ್ಣದ ಕುರಿತು ಕೆಲವು ವಿಶೇಷ ಲೇಖನಗಳು
ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪರ ಕಾರಿನ ಬಣ್ಣಕ್ಕೂ ಅವರ ವ್ಯಕ್ತಿತ್ವಕ್ಕೂ ಸಾಮ್ಯತೆ ಇದೆಯೇ? ಇದೆ ಅನ್ನುತ್ತಾರೆ ನಮ್ಮ ಬಣ್ಣದ ಜ್ಯೋತಿಷ್ಯರು. ಯಡಿಯೂರಪ್ಪರ ಬಣ್ಣದ ಬಗ್ಗೆ ಓದಿರಿ.

ಕಪ್ಪು ಬಣ್ಣದ ಕಾರು ಖರೀದಿಸುವ ಯೋಚನೆ ಇದ್ರೆ ಇನ್ನೊಮ್ಮೆ ಯೋಚನೆ ಮಾಡಿ. ಯಾಕೆಂದರೆ ಕಪ್ಪು ಬಣ್ಣದ ಕಾರುಗಳು ಅಪಘಾತವಾಗುವ ಸಂಭಾವ್ಯತೆ ಹೆಚ್ಚಾಗಿದೆ. ಕಪ್ಪು ಬಣ್ಣದ ಕಾರು ಅಪಶಕುನ ಅಂದ್ರೆ ನಂಬ್ತಿರಾ? ಲೇಖನ ಓದಿ.

ನಿಮ್ಮ ಭವಿಷ್ಯ ಹೇಳಲು ಜನ್ಮ ಕುಂಡಲಿಯೇ ಬೇಕೆಂದಿಲ್ಲ. ನಿಮ್ಮ ಕಾರಿನ ಬಣ್ಣ ಕೂಡ ನಿಮ್ಮ ಬಗ್ಗೆ ಸಾಕಷ್ಟು ಹೇಳುತ್ತದೆ. ಮುಂದಿನ ಬಾರಿ ಕಾರು ಖರೀದಿಸಲು ಹೋದಾಗ ಖಂಡಿತಾ ನೀವು ಕಾರಿನ ಬಣ್ಣದ ಕುರಿತು ತಲೆಕೆಡಿಸಿಕೊಳ್ಳಲೇಬೇಕು. ಇಲ್ಲಿದೆ ಕಾರಿನ ಬಣ್ಣದ ಅಜೀವ ಭವಿಷ್ಯ. ಎಲ್ಲಾ ಕಲರ್ ಕಾರುಗಳ ಕಲರ್ ರಹಸ್ಯ ಓದಿರಿ.

Most Read Articles

Kannada
English summary
In Indian Automobile Market 2 in 3 cars sold white or silver colour. white or silver was major color preferred by the buyers in the Indian market. Read Colorful Story about car color.
Story first published: Tuesday, May 15, 2012, 10:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X